
ಶಿರಸಿ[ಸೆ.18] ಜೀವನಾಧಾರ ಬೆಳೆ ಅಡಕೆಗೆ ಕೊಳೆರೋಗ ಬಾಧಿಸಿದ್ದರಿಂದ ಸಹಕಾರಿ ಸಂಘಗಳಲ್ಲಿ ಪಡೆದ ಸಾಲ ಮರುಪಾವತಿಗೆ ದಾರಿ ಕಾಣದೆ ಬೆಳೆಗಾರರೊಬ್ಬರು ಅತ್ಮಹತ್ಯೆ ಮಾಡಿಕೊಂಡಿದ್ದಾರೆ. ತಾಲೂಕಿನ ತಡಗುಣಿ ಬಳಿ ದಾಯಿಮನೆ ಗ್ರಾಮದ ನಿವಾಸಿ ಚಂದ್ರಶೇಖರ ನಾರಾಯಣ ಭಟ್ಟ (55) ಆತ್ಮಹತ್ಯೆಗೆ ಶರಣಾಗಿದ್ದಾರೆ.
ಅಡಕೆ ತೋಟದಲ್ಲಿಯೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳೀಯ ಹಾರುಗಾರ ಸೇವಾ ಸಹಕಾರಿ ಸಂಘ ನೆಗ್ಗುದಲ್ಲಿ 2.77 ಲಕ್ಷ ರೂ. ಸಾಲ ಪಡೆದಿದ್ದರು. ಕೊಳೆರೋಗ
ದಿಂದ ಅಡಕೆಗೆ ಹಾನಿಯಾದ್ದರಿಂದ ಜೀವನ ನಿರ್ವಹಣೆ ಕಷ್ಟವೆಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಹೇಳಲಾಗುತ್ತಿದೆ. ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣದಾಖಲಾಗಿದೆ.