ಸ್ಥಳೀಯ ಸಂಸ್ಥೆ ಚುನಾವಣಾ ಫಲಿತಾಂಶ ಉತ್ತರ ಕನ್ನಡದ ಮಟ್ಟಿಗೆ ಸಮಬಲದ ಹೋರಾಟವನ್ನು ಮತ್ತೆ ಸಾಬೀತು ಮಾಡಿದೆ. ಆದರೆ ಫಲಿತಾಂಶದಲ್ಲಿ ಮಾತ್ರ ಕಾಂಗ್ರೆಸ್ ಅಧಿಪತ್ಯ ಕಂಡುಬಂದಿದೆ.
ಕಾರವಾರ(ಸೆ.3) ಉತ್ತರ ಕನ್ನಡ ಜಿಲ್ಲೆಯ 3 ನಗರಸಭೆ ಪೈಕಿ 1 ಬಿಜೆಪಿ, 1 ಕಾಂಗ್ರೆಸ್ ಗೆದ್ದುಕೊಂಡಿದೆ. ಕಾರವಾರ ನಗರಸಭೆ ಅತಂತ್ರವಾಗಿದ್ದರೂ ಕಾಂಗ್ರೆಸ್ಗೆ ಅಧಿಕಾರ ಸಿಗುವುದು ಸ್ಪಷ್ಟ. ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರತಿನಿಧಿಸುವ ಶಿರಸಿಯಲ್ಲಿ ಬಿಜೆಪಿಯ ಕಮಲ ಅರಳಿದೆ. ದೇಶಪಾಂಡೆ ಪ್ರಭಾವ ಇರುವ ದಾಂಡೇಲಿಯಲ್ಲಿ ಕೈ ಮೇಲಾಗಿದೆ.
ಕಮಲ ಮುಡಿದ ಬಾಗಲಕೋಟೆ: ಸಿದ್ದು ಮಾಡಿದ್ರು ಸ್ವಲ್ಪ ಜಾದೂ!
undefined
3 ಪುರಸಭೆ ಪೈಕಿ 1 ಬಿಜೆಪಿ, 1 ಕಾಂಗ್ರೆಸ್ ಗೆದ್ದಿದ್ದರೂ ಅತಂತ್ರವಾಗಿರುವ ಅಂಕೋಲ ಕೈ ವಶವಾಗಲಿದೆ. ಸಚಿವ ಆರ್.ವಿ. ದೇಶಪಾಂಡೆ ಮತ್ತು ಕಾಂಗ್ರೆಸ್ ಶಾಸಕರ ತಂತ್ರ ಫಲಿಸಿದಂತೆ ಕಂಡುಬರುತ್ತಿದೆ. ಕಾರವಾರದಲ್ಲಿ ಕಾಂಗ್ರೆಸ್ ಕಟ್ಟಿಹಾಕಲು ರೂಪಾಲಿ ನಾಯ್ಕ ವಿಫಲರಾಗಿದ್ದಾರೆ. ಕುಮಟಾ ಪುರಸಭೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ.ಹಳಿಯಾಳ ಪುರಸಭೆ ಕಾಂಗ್ರೆಸ್ ಪಾಲಾಗಿದ್ದರೆ ಯಲ್ಲಾಪುರ ಪಟ್ಟಣ ಪಂಚಾಯಿತಿ ಕಾಂಗ್ರೆಸ್ ಪಾಲಾಗಿದ್ದರೆ ಮುಂಡಗೋಡಿನಲ್ಲಿ ಕಮಲ ಅರಳಿದೆ.
ಸ್ಥಳೀಯ ಸಂಸ್ಥೆ ಒಟ್ಟು ವಾರ್ಡ್ ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಪಕ್ಷೇತರರು
ಕಾರವಾರ ನಗರಸಭೆ 31 11 11 04 05
ಶಿರಸಿ ನಗರಸಭೆ 31 17 09 01 04
ದಾಂಡೇಲಿ ನಗರಸಭೆ 31 11 16 00 04
ಹಳಿಯಾಳ ಪುರಸಭೆ 23 07 14 01 01
ಕುಮಟಾ ಪುರಸಭೆ 23 16 06 01 00
ಅಂಕೋಲ ಪುರಸಭೆ 23 08 10 00 05
ಯಲ್ಲಾಪುರ ಪ.ಪಂ. 19 05 12 01 01
ಮುಂಡಗೋಡ ಪ.ಪಂ. 19 10 09 00 00
ಒಟ್ಟು 200 85 87 08 20