Ballari: ಇಬ್ಬರು ಮಕ್ಕಳೊಂದಿಗೆ ಕಾಲುವೆಗೆ ಹಾರಿದ ಸಿಮ್ರಾನ್, ಮುಗಿಲು ಮುಟ್ಟಿದ ಪೋಷಕರ ಆಕ್ರಂದನ

Published : Oct 14, 2026, 12:00 PM IST
Ballari Mother

ಸಾರಾಂಶ

ಬಳ್ಳಾರಿಯಲ್ಲಿ ಗಂಡನ ಅಕ್ರಮ ಸಂಬಂಧ ಹಾಗೂ ವರದಕ್ಷಿಣೆ ಕಿರುಕುಳದಿಂದ ಬೇಸತ್ತ ಪತ್ನಿ ತನ್ನ ಇಬ್ಬರು ಮಕ್ಕಳೊಂದಿಗೆ ಕಾಲುವೆಗೆ ಹಾರಿ ಪ್ರಾಣ ಕಳೆದುಕೊಂಡಿದ್ದಾಳೆ. ಪತಿ ಸದ್ದಾಂ ಹುಸೇನ್ ಮತ್ತೊರ್ವ ಮಹಿಳೆಗೆ ಮನೆ ಕಟ್ಟಿಸಲು 10 ಲಕ್ಷ ರೂ. ತರುವಂತೆ ಪೀಡಿಸುತ್ತಿದ್ದ ಎನ್ನಲಾಗಿದೆ. ಘಟನೆ ಬಳಿಕ ಪತಿ ನಾಪತ್ತೆಯಾಗಿದ್ದು, ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಳ್ಳಾರಿ: ಗಂಡ ಹೆಂಡತಿ ಜಗಳದ ಮಧ್ಯೆ ಕೂಸು ಬಡವಾಯ್ತು ಅನ್ನೋ ಮಾತಿನಂತೆ. ಬಳ್ಳಾರಿಯಲ್ಲಿ ಗಂಡ ಹೆಂಡತಿ ಜಗಳಕ್ಕೆ ಇಬ್ಬರು ಮುದ್ದಾದ ಮಕ್ಕಳು ಬಲಿಯಾಗಿದ್ದಾರೆ. ಮತ್ತೊರ್ವ ಹೆಣ್ಣಿನ ಸಹವಾಸ ಮಾಡಿ ಕಟ್ಟಿಕೊಂಡ ಪತ್ನಿಗೆ ಕಿರುಕುಳ ನೀಡಿದ ಹಿನ್ನೆಲೆ ಇಬ್ಬರು ಮಕ್ಕಳೊಂದಿಗೆ ಗೃಹಿಣಿ ಕಾಲೂವೆಗೆ ಹಾರಿ ಪ್ರಾಣ ಕಳೆದು ಕೊಂಡಿದ್ದಾಳೆ. ಬಳ್ಳಾರಿಯಲ್ಲಿ ನಡೆದ ಹೃದಯ ವಿದ್ರಾವಕ ಘಟನೆ ಕುರಿತು ಒಂದು ವರದಿ ಇಲ್ಲಿದೆ ನೋಡಿ.

ಮುದ್ದು ಮುದ್ದಾದ ಮಕ್ಕಳೊಂದಿಗೆ ಕಾಲುವೆಗೆ ಹಾರಿದ ಮಹಿಳೆ

ಗಂಡ ಹೆಂಡತಿ ನಡುವೆ ಮತ್ತೊರ್ವ ಹೆಣ್ಣಿನ ಪ್ರವೇಶದಿಂದ ಬೀದಿಗೆ ಬಿದ್ದ ಕುಟುಂಬ. ವರದಕ್ಷಿಣೆ ತರುವುದು ಸೇರಿದಂತೆ ವಿನಾಕಾರಣ ಕಿರುಕುಳ ನೀಡ್ತಿದ್ದ ಆರೋಪ ಕೇಳಿ ಬಂದಿದೆ. ಹೌದು, ಬಳ್ಳಾರಿ ನಗರದ ಮಿಲ್ಲರ್‌ ಪೇಟೆಯ ನಿವಾಸಿ ಸದ್ದಾಂ ಹುಸೇನ್ ಮತ್ತು ಲತೀಫಾ ಸಿಮ್ರಾನ್ ಕಳೆದ ಆರು ವರ್ಷದ ಹಿಂದೆ ಮದುವೆ ಮಾಡಿ ಕೊಡಲಾಗಿತ್ತು. ಮೂರು ನಾಲ್ಕು ವರ್ಷ ಚೆನ್ನಾಗಿದ್ದರು. ಅಯಾನ್ (3) ಮತ್ತು ಆಯಿಷಾ ಫಾತಿಮಾ (2) ಎನ್ನುವ ಇಬ್ಬರು ಮುದ್ದಾದ ಮಕ್ಕಳೊಂದಿಗೆ ಸಂಸಾರ ಚೆನ್ನಾಗಿತ್ತು. ಆದರೆ ಗುಜರಿ ವ್ಯಾಪಾರ ಮಾಡುತ್ತಿದ್ದ ಸದ್ದಾಂ ಮತ್ತೊರ್ವ‌ ಮಹಿಳೆ ಸಹವಾಸ ಮಾಡಿದ್ದನಂತೆ ಈ ಬಗ್ಗೆ ನಿತ್ಯ ಮನೆಯಲ್ಲಿ ಜಗಳವಾಗ್ತಿತ್ತಂತೆ. ಇದೇ ನೆಪ ಮುಂದಿಟ್ಟುಕೊಂಡು ಸದ್ದಾಂ ವರದಕ್ಷಿಣೆ ಕೊಡುವಂತೆ ಮನೆಯಲ್ಲಿ ಗಲಾಟೆ ಮಾಡಿದ್ದಾನೆ. ಇದರಿಂದ ಬೇಸತ್ತ ಪತ್ನಿ ತನ್ನ ಇಬ್ಬರು ಮಕ್ಕಳೊಂದಿಗೆ ಕಾಲುವೆಗೆ ಹಾರಿ ಪ್ರಾಣ ಕಳೆದುಕೊಂಡಿದ್ದಾಳೆ ಎಂದು ಮೃತಳ ಪೋಷಕರ ಆರೋಪಿಸಿದ್ದಾರೆ.

ಕುಡಿದು ಬಂದು ಕಿರುಕುಳ ನೀಡುತ್ತಿದ್ದ ಗಂಡ

ಆರಂಭದಲ್ಲಿ ಮಗಳ ಕುಟುಂಬ ಸರಿ ಹೋಗಲಿ ಎಂದು ಮದುವೆ ವೇಳೆ ಕೊಟ್ಟ ಹದಿನೈದು ತೊಲೆ ಬಂಗಾರ ಅಲ್ಲದೇ, ಮತ್ತೊಮ್ಮೆ ಐದು ಲಕ್ಷ ಹಣ ನೀಡಲಾಗಿತ್ತಂತೆ. ಆದರೆ ಮತ್ತಷ್ಟು ಹಣಕ್ಕೆ ಸದ್ದಾಂ ಪೀಡಿಸಿದ್ದಾನೆ. ಎರಡು ಕುಟುಂಬದವರು ಸಾಕಷ್ಟು ಬಾರಿ ರಾಜಿಪಂಚಾಯಿತಿ ಮಾಡಿದರೂ ಆತ ಸರಿ ಹೋಗಿರಲಿಲ್ಲ. ಅಲ್ಲದೇ, ಇತ್ತಿಚೆಗೆ ಇಟ್ಟುಕೊಂಡು ಮಹಿಳೆಗೆ ಮನೆ ನಿರ್ಮಾಣಕ್ಕೆ ಮತ್ತೊಮ್ಮೆ 10 ಲಕ್ಷ ರೂಪಾಯಿ ಹಣದ ಅಗತ್ಯವಿದೆ ಅದನ್ನು ತವರು ಮನೆಯಿಂದ ತರುವಂತೆ ಪತ್ನಿಯನ್ನು ಪೀಡಿಸಿದ್ದಾನೆ. ಇದರಿಂದ ಬೇಸತ್ತು ಇಬ್ಬರು ಮಕ್ಕಳೊಂದಿಗೆ ಲತೀಫಾ ಕಾಲೂವೆಗೆ ಹಾರಿ ಪ್ರಾಣ ಕಳೆದುಕೊಂಡಿದ್ದಾಳೆ.

ಘಟನೆ ನಡೆದ ಬಳಿಕ ಸದ್ದಾಂ ನಾಪತ್ತೆಯಾಗಿದ್ದಾನೆ. ಈ ಕುರಿತು ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಗೆ ವರದಕ್ಷಿಣೆ ಕಿರುಕುಳ ಕಾರಣವೇ ಅಥವಾ ಮತ್ತೊರ್ವ ಹೆಣ್ಣಿನ ಸಹವಾಸ ಕಾರಣವೇ ಅನ್ನೋದ್ರ ಬಗ್ಗೆ ಪೊಲೀಸ್ ತನಿಖೆಯಿಂದ ಗೊತ್ತಾಗಬೇಕಿದೆ.

ಅದೇ ಏನೆ ಇರಲಿ ಗಂಡ ಹೆಂಡತಿ ಜಗಳದ ಮಧ್ಯೆ ಪ್ರಪಂಚವೇ ಅರಿಯದ ಇಬ್ಬರು ಮಕ್ಕಳು ಬಲಿಯಾಗಿರೋದು ದುರ್ದೈವದ ಸಂಗತಿಯಾಗಿದೆ. (ವರದಿ: ನರಸಿಂಹ ಮೂರ್ತಿ, ಸುವರ್ಣ ನ್ಯೂಸ್, ಬಳ್ಳಾರಿ) 

PREV
Read more Articles on
click me!

Recommended Stories

ಕಿಚ್ಚ ಸುದೀಪ್‌ಗೆ ಸವಾಲೆಸೆದ ಮಾಜಿ ಸಂಸದ ವಿ.ಎಸ್. ಉಗ್ರಪ್ಪ; ಕ್ಷಮೆಯಾಚಿಸುವಂತೆ ಮಾಜಿ ಸಚಿವ ರಾಜುಗೌಡ ಆಗ್ರಹ!
ಕಾಂಗ್ರೆಸ್‌ ಸಂಸದನಿಂದ ಲೈಂಗಿಕ ಕಿರುಕುಳ: ಬೀದಿಗಿಳಿದು ಶಿವಮೊಗ್ಗ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚ ಪ್ರತಿಭಟನೆ