ಹಣ್ಣು-ತರಕಾರಿ ಮಾರಲು ಬಂದ್ರೆ ಕಲ್ಲೆಸೆಯುವಂತೆ ಗ್ರಾಮ ಪಂಚಾಯತ್ ಸೂಚನೆ

By Kannadaprabha NewsFirst Published May 3, 2020, 2:58 PM IST
Highlights

ದಯವಿಟ್ಟು ದಾವಣಗೆರೆ, ಹರಿಹರದಿಂದ ಹಣ್ಣು, ತರಕಾರಿ ಮಾರೋರು ಬಂದ್ರೆ ಅಂತಹವರಿಂದ ಏನೂ ತಗೋ ಬ್ಯಾಡ್ರಿ.. ಹೆಣ್ಣುಮಕ್ಕಳು ಕಲ್ಲು ತಗೊಂಡು ಅಂತಹವರನ್ನು ಊರಿಂದ ಓಡಿಸ್ರಿ...’ ಎಂದು ಗ್ರಾಪಂ ಸೂಚಿಸಿದೆ. ಗ್ರಾಮ ಪಂಚಾಯತ್ ಇಂತಹದೊಂದು ಪ್ರಚೋದನಾಕಾರಿ ಸೂಚನೆ ಕೊಟ್ಟಿದ್ದೇಕೆ.? ಇಲ್ಲಿ ಓದಿ

ದಾವಣಗೆರೆ(ಮೇ.03): ‘ಇನ್ನೊಂದು ವಿಷಯ ಏನಪಾ ಅಂದ್ರಾ... ದಯವಿಟ್ಟು ದಾವಣಗೆರೆ, ಹರಿಹರದಿಂದ ಹಣ್ಣು, ತರಕಾರಿ ಮಾರೋರು ಬಂದ್ರೆ ಅಂತಹವರಿಂದ ಏನೂ ತಗೋ ಬ್ಯಾಡ್ರಿ.. ಹೆಣ್ಣುಮಕ್ಕಳು ಕಲ್ಲು ತಗೊಂಡು ಅಂತಹವರನ್ನು ಊರಿಂದ ಓಡಿಸ್ರಿ...’

ಇಂತಹದ್ದೊಂದು ಪ್ರಚೋದನಾಕಾರಿ ಕರೆಯನ್ನು ಇಡೀ ಗ್ರಾಮಸ್ಥರಿಗೆ ನೀಡಿರುವ ಗ್ರಾಪಂ ಟಾಂ ಟಾಂ ಸಂದೇಶ ಈಗ ಸೋಷಿಯಲ್‌ ಮೀಡಿಯಾಗಳಲ್ಲಿ ವೈರಲ್‌ ಆಗಿದೆ. ಇದು ನೆರೆಯ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಕೋಡಿಯಾಲ ಹೊಸಪೇಟೆಯ ಗ್ರಾಪಂ ಇಡೀ ಊರಿನಲ್ಲಿ ಟಾಂ ಟೌಂ ಹೊಡೆಸಿರುವ ಪರಿಯಷ್ಟೇ.

ಚಿತ್ರದುರ್ಗದಲ್ಲಿ ಸರ್ಕಾರಿ ಬಸ್‌ ಸಂಚಾರ..! ಅರ್ಧದಷ್ಟುಸೀಟುಗಳಿಗೆ ಮಾತ್ರ ಅವಕಾಶ

ಹರಿಹರ ಸಮೀಪದ ಕೋಡಿಯಾಲ ಹೊಸಪೇಟೆ ಗ್ರಾ.ಪಂ.ನಿಂದ ಗ್ರಾಮಸ್ಥರಲ್ಲಿ ಅರಿವು ಮೂಡಿಸಲು ಟಾಂ ಟಾಂ ಹೊಡೆಸಲಾಗಿದೆ. ಗ್ರಾಪಂ ಪ್ರಕಟಣೆ ಸಾರಿದ ಈ ಊರಿನಿಂದ ಹರಿಹರ, ದಾವಣಗೆರೆಗೆ ಯಾರೂ ಹೋಗಬಾರದು. ಆ ಊರುಗಳಿಂದ ಯಾರಾದರೂ ನೆಂಟರಿದ್ದಾರೆಂದು ಬಂದರೆ ಮೆಡಿಕಲ್‌ ಚೆಕ್‌ಅಪ್‌ ಮಾಡಿಸಬೇಕು ಎಂದು ಗ್ರಾಪಂನಿಂದ ಸಾರಲಾಗಿದೆ. ಹರಿಹರ, ದಾವಣಗೆರೆಯಿಂದ ನೆಂಟರು ಬಂದರೆ ತಕ್ಷಣವೇ ಆಶಾ ಕಾರ್ಯಕರ್ತೆಯರು, ಗ್ರಾಪಂಗಾಗಲೀ, ಮಲೇರಿಯಾ ಅಧಿಕಾರಿಗಳ ಗಮನಕ್ಕಾಗಲೀ ತನ್ನಿ. ಅಂಥವರನ್ನು 14 ದಿನ ಮನೆಯೊಳಳಗಿಡೋಕೆ ಹೇಳ್ತಾರೆ ಎಂಬುದಾಗಿ ಗ್ರಾಪಂ ಸಿಬ್ಬಂದಿ ಸಾರುತ್ತಾರೆ.

ಲಾಕ್‌ಡೌನ್ ಉಲ್ಲಂಘನೆ: 24 ಗ್ರಾಪಂ ಸದಸ್ಯರು ಸಾಮೂಹಿಕ ರಾಜೀನಾಮೆ

ನಂತರ ಇನ್ನೊಂದು ವಿಷಯವೇನೆಂದು ಹೇಳುತ್ತಾ, ಹಣ್ಣು, ತರಕಾರಿ ಮಾರಲು ದಾವಣಗೆರೆ, ಹರಿಹರದಿಂದ ಬಂದವರಿಗೆ ಹೆಣ್ಣುಮಕ್ಕಳು ಕಲ್ಲು ತಗೊಂಡು ಓಡಿಸಿ ಎಂಬುದಾಗಿ ಸಾರುವ ವೀಡಿಯೋ ವೈರಲ್‌ ಆಗಿದೆ.

click me!