ಅನುಗ್ರಹ ಸಂಗೀತ ವಿದ್ಯಾಲಯಕ್ಕೆ ರಜತ ಮಹೋತ್ಸವ ಸಂಭ್ರಮ: 3 ದಿನ ಪುತ್ತಿಗೆ ಮಠದಲ್ಲಿ ಸಂಗೀತ, ನೃತ್ಯ, ವೀಣಾವಾದನ

Published : Feb 17, 2025, 06:18 PM ISTUpdated : Feb 17, 2025, 06:42 PM IST
ಅನುಗ್ರಹ ಸಂಗೀತ ವಿದ್ಯಾಲಯಕ್ಕೆ ರಜತ ಮಹೋತ್ಸವ ಸಂಭ್ರಮ: 3 ದಿನ ಪುತ್ತಿಗೆ ಮಠದಲ್ಲಿ ಸಂಗೀತ, ನೃತ್ಯ, ವೀಣಾವಾದನ

ಸಾರಾಂಶ

ನಗರದ ಶ್ರೀ ಅನುಗ್ರಹ ಸಂಗೀತ ಮಹಾ ವಿದ್ಯಾಲಯದ 25ನೇ ವರ್ಷದ ರಜತ ಮಹೋತ್ಸವ ಮತ್ತು ಪುರಂದರ, ತ್ಯಾಗರಾಜ ಸ್ವಾಮಿಗಳ ಆರಾಧನಾ ಮಹೋತ್ಸವದ ಅಂಗವಾಗಿ ಬಸವನಗುಡಿಯ ಪುತ್ತಿಗೆ ಮಠದಲ್ಲಿ ಹಲವು ಕಾರ್ಯಕ್ರಮಗಳು ನಡೆದವು. 

ಬೆಂಗಳೂರು (ಫೆ.17): ನಗರದ ಶ್ರೀ ಅನುಗ್ರಹ ಸಂಗೀತ ಮಹಾ ವಿದ್ಯಾಲಯದ 25ನೇ ವರ್ಷದ ರಜತ ಮಹೋತ್ಸವ ಮತ್ತು ಪುರಂದರ, ತ್ಯಾಗರಾಜ ಸ್ವಾಮಿಗಳ ಆರಾಧನಾ ಮಹೋತ್ಸವದ ಅಂಗವಾಗಿ ಬಸವನಗುಡಿಯ ಪುತ್ತಿಗೆ ಮಠದಲ್ಲಿ ಹಲವು ಕಾರ್ಯಕ್ರಮಗಳು ನಡೆದವು. ವಿದ್ಯಾಲಯದ ಪ್ರಾಚಾರ್ಯ, ಕರ್ನಾಟಕ ಶಾಸ್ತ್ರೀಯ ಸಂಗೀತದ  ವಿದ್ವಾನ್ ಜೆ.ಎಸ್. ಶ್ರೀಕಂಠ ಭಟ್ ನೇತೃತ್ವದಲ್ಲಿ ಹಿರಿಯ ಮತ್ತು ಕಿರಿಯ ಗಾಯಕರು ಏಕಕಂಠದಲ್ಲಿ ನವರತ್ನ ಮಾಲಿಕೆಗಳನ್ನು ಹಾಡಿ ರಂಜಿಸಿದರು. 

ವಿದುಷಿಯರಾದ ದೀಪ್ತಿ ಪ್ರಸಾದ್ ಮತ್ತು ರಮಾ ರಮಾ ಪ್ರಸನ್ನ ಅವರ ನೇತೃತ್ವದಲ್ಲಿ ಏಕಕಾಲದಲ್ಲಿ 25 ವೀಣಾ ಕಲಾವಿದರಿಂದ ವೀಣಾ ವಾದನ ಝೇಂಕಾರ ಸಭಿಕರನ್ನು ರಂಜಿಸಿತು. ವಿದ್ಯಾಲಯದ ವಿದ್ಯಾರ್ಥಿಗಳಿಂದ ಪುರಂದರ ದಾಸರ ದೇವರನಾಮಗಳ ಗೋಷ್ಠಿ ಗಾಯನ, ಶ್ರೀ ಲಕ್ಷ್ಮೀ ಯದುನಂದನ ಅವರ ಭರತನಾಟ್ಯ, ನಂತರ ವಿದುಷಿ ನಾಗಶ್ರೀ ಸಾತ್ವಿಕ್ ಮತ್ತು ಶಿಷ್ಯರು ಭರತನಾಟ್ಯ ಪ್ರಸ್ತುತಿಪಡಿಸಿದ್ರು.

ಶ್ರೀ ಪುರಂದರ- ತ್ಯಾಗರಾಜರ ಆರಾಧನೋತ್ಸವ: ನಗರದ ಪ್ರತಿಷ್ಠಿತ ಶ್ರೀ ಅನುಗ್ರಹ ಸಂಗೀತ ಮಹಾವಿದ್ಯಾಲಯದ ಬೆಳ್ಳಿ ಮಹೋತ್ಸವದ ಅಂಗವಾಗಿ ನಗರದಲ್ಲಿ ಶನಿವಾರ ಕರ್ನಾಟಕ ಸಂಗೀತ ಪಿತಾಮಹ ಶ್ರೀ ಪುರಂದರ ದಾಸರ - ಸದ್ಗುರು ಶ್ರೀ ತ್ಯಾಗರಾಜರ ಸ್ವಾಮಿಗಳ 25ನೇ ವರ್ಷದ ಆರಾಧನಾ ಸಂಗೀತ ಕಾರ‍್ಯಕ್ರಮ ಸಂಭ್ರಮದಿಂದ ನೆರವೇರಿತು. 

ಪ್ರೇಮಿಗಳ ದಿನದ ಪ್ರಯುಕ್ತ ಬೆಂಗಳೂರು ಏರ್‌ಪೋರ್ಟ್‌ನಿಂದ 44 ಮಿಲಿಯನ್ ಗುಲಾಬಿ ರಫ್ತು: ದಾಖಲೆ ನಿರ್ಮಾಣ

ವಿವೇಕಾನಂದ ರಸ್ತೆ ಮಾಕಂ ಕಲ್ಯಾಣ ಮಂಟಪದಲ್ಲಿ ವಿಶೇಷ ಸಂಗೀತ ಮಹೋತ್ಸವದಲ್ಲಿ ವಿದ್ಯಾಲಯದ ವಿದ್ಯಾರ್ಥಿಗಳಿಂದ ವಂದೇ ಮಾತರಂ- ಸಂಪೂರ್ಣ ಸಾಹಿತ್ಯದ ಸಾಮೂಹಿಕ ಗಾಯನ ಗಮನ ಸೆಳೆಯಿತು. ಶ್ರೀ ತ್ಯಾಗರಾಜರ ಆರಾಧನೋತ್ಸವ ಅಂಗವಾಗಿ ವಿದ್ಯಾಲಯದ ವಿದ್ಯಾರ್ಥಿಗಳಿಂದ ದೇವರನಾಮ ಗಾಯನ, ಯುವ ಕಲಾವಿದ ಶಶಾಂಕ ಚಿನ್ಯರಿಂದ ಕೊಳಲು ವಾದನರಂಜಿಸಿತು. ಶ್ರೀ ತ್ಯಾಗರಾಜ ಸ್ವಾಮಿಗಳ ‘ಘನರಾಗ ಪಂಚ ರತ್ನ’ ಕೃತಿಗಳ ಗೋಷ್ಠಿ ಗಾಯನವು .ವಿದ್ವಾನ್ ಜೆ.ಎಸ್. ಶ್ರೀಕಂಠ ಭಟ್ ನೇತೃತ್ವದಲ್ಲಿ ವಿಜೃಂಭಿಸಿತು.ಮೃದಂಗದಲ್ಲಿ ವಿದ್ವಾನ್ ಮೈಸೂರು ಪಿ.ಎಸ್. ಶ್ರೀ ಧರ್, ಪಿಟೀಲು ವಾದನದಲ್ಲಿ ವಿದ್ವಾನ್ ಸಂಜೀವ ಕುಮಾರ್ ಸಹಕಾರ ನೀಡಿದರು.

PREV
click me!

Recommended Stories

ಚಿಕ್ಕಮಗಳೂರು: ಬ್ಯಾನರ್ ಗಲಾಟೆ, ಕಾಂಗ್ರೆಸ್ ಮುಖಂಡನ ಬರ್ಬರ ಹತ್ಯೆ, ಬಜರಂಗದಳ ಕಾರ್ಯಕರ್ತರ ಮೇಲೆ ಶಂಕೆ!
ಮಹಾಮೇಳಾವ್ ಅನುಮತಿ ನಿರಾಕರಣೆ: ನಾಡದ್ರೋಹಿ ಎಂಇಎಸ್ ‌ಪುಂಡರಿಗೆ ಶಾಕ್ ಕೊಟ್ಟ ಬೆಳಗಾವಿ ಜಿಲ್ಲಾಡಳಿತ