
ಬೆಂಗಳೂರು (ಫೆ.17): ಮಳೆಗಾಲದ ವೇಳೆ ಪದೇ ಪದೆ ದುರಸ್ತಿಗೊಳ್ಳುವ ವಿದ್ಯುತ್ ಲೈನ್‌ಗಳ ದುರಸ್ತಿ ಕಾಮಗಾರಿಯನ್ನು ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ನಾಳೆ (ಫೆ.18ರಂದು) ಅರ್ಧ ಬೆಂಗಳೂರಿಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ. ನಾಳೆ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ವಿದ್ಯುತ್ ಕಡಿತವಾಗಲಿದ್ದು, ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಮಾಡಿಕೊಳ್ಳುವಂತೆ ಸೂಚಿಸಲಾಗಿದೆ.
ಕೆ.ವಿ ಎನ್.ಆರ್.ಎಸ್ ಸ್ಟೇಷನ್‌ನಲ್ಲಿ 220/66/11ರ ತುರ್ತುನಿರ್ವಹಣಾ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಮಂಜುನಾಥ ನಗರ, ಶಿವನಗರ, ವಿಜಯನಗರ, ರಾಜಾಜಿನಗರ 2ನೆ ಬ್ಲಾಕ್ ಮತ್ತು 6ನೆ ಬ್ಲಾಕ್, ಗಾಯತ್ರಿ ನಗರ, ಪ್ರಕಾಶನಗರ, ಎಲ್.ಎನ್ ಪುರ, ಸುಬ್ರಂಮಣ್ಯನಗರ, ಅಗ್ರಹಾರ, ದಾಸರಹಳ್ಳಿ, ಇಂದಿರಾನಗರ, ಶಂಕರಮಠ, ಬ್ರೀಗೆಡ್ ಅಪಾರ್ಟ್‌ಮೆಂಟ್, ಮಾಗಡಿ ರಸ್ತೆ 9ನೇ ಕ್ರಾಸ್, ಮಾಗಡಿ ರಸ್ತೆ 10ನೇ ಕ್ರಾಸ್, ಮಾಗಡಿ ರಸ್ತೆ 1ನೇ ಕ್ರಾಸ್‌ನಿಂದ 8ನೇ ಕ್ರಾಸ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ರಾಜನಕುಂಟೆ ಸಬ್‌ಸ್ಟೇಷನ್ ಕೆಪಿಟಿಸಿಎಲ್ ವತಿಯಿಂದ 66/11 kV ತುರ್ತು ನಿರ್ವಹಣಾ ಕಾಮಗಾರಿ ಕೈಗೆತ್ತಿಕೊಳ್ಳುತ್ತಿದ್ದು, ಹೆಬ್ಬಾಳ ವಿಭಾಗದ ಸಿ-7 ಉಪ ವಿಭಾಗದ ಪ್ರದೇಶಗಳಾದ ಮಾರಸಂದ್ರ, ಶ್ರೀರಾಮನಹಳ್ಳಿ, ನೆಲಕುಂಟೆ, ಚೆಲ್ಲಹಳ್ಳಿ, ಹೊನ್ನೇನಹಳ್ಳಿ, ಸಿಂಗನಾಯಕನಹಳ್ಳಿ, ರಾಜನಕುಂಟೆ, ಅಡ್ದೇವಿಶ್ವನಾಥಪುರ, ಕರ್ಲಾಪುರ, ಕೆಎಂಎಫ್, ಬೈರಾಪುರ, ಬೂದಮನಹಳ್ಳಿ, ದಿಬ್ಬೂರು, ಕಾಕೋಲು, ಇಟಗಲ್‌ಪುರ, ಅರ್ಕೇರಿ, ಸೊನ್ನೇನಹಳ್ಳಿ ಹಾಗೂ ಸೆಂಚುರಿ ಲೇಔಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಕಡಿತವಾಗಲಿದೆ.
ಇದನ್ನೂ ಓದಿ: ಬೆಂಗಳೂರಿಗೆ ಜಲಕ್ಷಾಮ ಆರಂಭ: ಈ 6 ಚಟುವಟಿಕೆಗೆ ಕಾವೇರಿ ನೀರು ಬಳಕೆ ನಿಷೇಧಿಸಿದ ಜಲಮಂಡಳಿ!
ಬಾಣಸವಾಡಿ ಸ್ಟೇಷನ್‌ನಲ್ಲಿ 66/11ಕೆ.ವಿ ತುರ್ತುನಿರ್ವಹಣಾ ಕಾಮಗಾರಿ ಕೈಗೆತ್ತಿಕೊಳ್ಳುತ್ತಿರುವುದರಿಂದ ಜ್ಯೋತಿನಗರ, ಆಗರ, ಬಾಲಾಜಿ ಲೇಔಟ್, ಹೊರಮಾವು ಪಿ & ಟಿ ಲೇಔಟ್, ನಿಸರ್ಗ ಕಾಲೋನಿ, ನಂದನ ಕಾಲೋನಿ, ಆಶೀರ್ವಾದ್ ಕಾಲೋನಿ, ಚಿನ್ನಸ್ವಾಮಪ್ಪ ಲೇಔಟ್, ಕೋಕೋನಟ್ ಗ್ರೋವ್, ದೇವಮತ ಶಾಲೆ, ಕಮ್ಮನಹಳ್ಳಿ ಮುಖ್ಯರಸ್ತೆ, ಹೆಣ್ಣೂರು ಗ್ರಾಮ, ಚೆಳ್ಳಿಕೆರೆ, ಮೇಘನ ಪಾಳ್ಯ, ಗೆದ್ದಲಹಳ್ಳಿ, ಕೊತ್ತನೂರು, ವಡ್ಡರ ಪಾಳ್ಯ, ಜಾನಕೀರಾಮ್ ಲೇಔಟ್, ಬಿ.ಡಿ.ಎಸ್. ಗಾರ್ಡನ್, ಸತ್ಯಎನ್ ಕ್ಲೇವ್, ಪ್ರಕೃತಿ ಲೇಔಟ್ ಹೊಯ್ಸಳನಗರ, ಬೃಂದಾವನ ಲೇಔಟ್, ವಿನಾಯಕ ಲೇಔಟ್, ವಿವೇಕಾನಂದ ಲೇಔಟ್, ಮಂಜುನಾಥನಗರ ರಸ್ತೆ, ಎನ್.ಆರ್.ಐ ಲೇಔಟ್, ರಿಚಸ್ ಗಾರ್ಡನ್, ಸುಂದರಾಜನೇಯ ದೇವಸ್ಥಾನ, ಡಬಲ್ ರಸ್ತೆ, ಪುಣ್ಯಭೂಮಿ ಲೇಔಟ್, ಕಲ್ಯಾಣನಗರ, ಬಿ.ಡಬ್ಲ್ಯೂ.ಎಸ್.ಎಸ್.ಬಿ ವಾಟರ್ ಟ್ಯಾಂಕ್, ವಿಜಯ ಬ್ಯಾಂಕ್ ಕಾಲೋನಿ ಹೆಚ್.ಆರ್.ಬಿ.ಆರ್. ಲೇಔಟ್, 1ನೇ ಬ್ಲಾಕ್, 2ನೇ ಬ್ಲಾಕ್, 3ನೇ ಬ್ಲಾಕ್‌ಗಳಲ್ಲಿ ವಿದ್ಯುತ್ ಸಂಪರ್ಕ ಇರುವುದಿಲ್ಲ.