ವಿವಿಧ ಕ್ಷೇತ್ರಗಳಲ್ಲಿ ಅಪೂರ್ವ ಸಾಧನೆಗೈದ ಬೆಳಗಾವಿ ಆವೃತ್ತಿಯ ಮೂರು ಜಿಲ್ಲೆಗಳ 24 ಗಣ್ಯರಿಗೆ ಕನ್ನಡಪ್ರಭ ಹಾಗೂ ಏಷ್ಯಾನೆಟ್ ಸುವರ್ಣ ನ್ಯೂಸ್ ಮಾಧ್ಯಮ ಸಂಸ್ಥೆಗಳ ವತಿಯಿಂದ ‘ರಜತ ಸಾಧಕರು’ ಪ್ರಶಸ್ತಿ ಪ್ರದಾನ
ಬೆಂಗಳೂರು(ಡಿ.04): ಕಳೆದ ಐದೂವರೆ ದಶಕಗಳಿಂದ ಕರ್ನಾಟಕದ ಓದುಗರ ಮನೆಮಾತಾಗಿರುವ ಕನ್ನಡಪ್ರಭ ದಿನಪತ್ರಿಕೆಯ ಬೆಳಗಾವಿ ಆವೃತ್ತಿ 25 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಇತ್ತೀಚೆಗೆ ರಾಜಧಾನಿ ಬೆಂಗಳೂರಿನ ಐಷಾರಾಮಿ ಹೋಟೆಲೊಂದರಲ್ಲಿ ಅದ್ಧೂರಿ ಸಮಾರಂಭ ಏರ್ಪಡಿಸಲಾಗಿತ್ತು. ಇದೇ ವೇಳೆ, ವಿವಿಧ ಕ್ಷೇತ್ರಗಳಲ್ಲಿ ಅಪೂರ್ವ ಸಾಧನೆಗೈದ ಬೆಳಗಾವಿ ಆವೃತ್ತಿಯ ಮೂರು ಜಿಲ್ಲೆಗಳ 24 ಗಣ್ಯರಿಗೆ ಕನ್ನಡಪ್ರಭ ಹಾಗೂ ಏಷ್ಯಾನೆಟ್ ಸುವರ್ಣ ನ್ಯೂಸ್ ಮಾಧ್ಯಮ ಸಂಸ್ಥೆಗಳ ವತಿಯಿಂದ ‘ರಜತ ಸಾಧಕರು’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಸಂದರ್ಭದಲ್ಲಿ ಐಟಿ-ಬಿಟಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್.ಅಶ್ವತ್ಥನಾರಾಯಣ ಅವರು ಏಳು ಜಾಹೀರಾತು ಸಂಸ್ಥೆಗಳಿಗೆ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿದರು.
ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಸಚಿವ ಅಶ್ವತ್ಥನಾರಾಯಣ ಅವರುಗಳು ಸಾಧಕರಿಗೆ ಪ್ರಶಸ್ತಿ ನೀಡಿ ಅಭಿನಂದಿಸಿದರು. ಅಲ್ಲದೆ, ಇನ್ನಷ್ಟುಹುಮ್ಮಸ್ಸಿನಿಂದ ಮುಂದುವರಿದು ಹೆಚ್ಚಿನ ಸಾಧನೆ ಮಾಡುವಂತೆ ಪ್ರೋತ್ಸಾಹಿಸಿದರು.
undefined
Kannada Prabha: ಕನ್ನಡಪ್ರಭ ಬೆಳಗಾವಿ ಆವೃತ್ತಿಗೆ ಬೆಳ್ಳಿಹಬ್ಬ ಸಂಭ್ರಮ
ಜಾಹೀರಾತು ಸಂಸ್ಥೆಗಳಿಗೆ ಗೌರವ:
ಕಾರ್ಯಕ್ರಮದಲ್ಲಿ ಪತ್ರಿಕೆಯೊಂದಿಗೆ ಸಹಕರಿಸುತ್ತಿರುವ ಝೇಂಕಾರ್ ಜಾಹೀರಾತು ಸಂಸ್ಥೆಯ ನರೇಶ್, ಅಡ್ವಿಟ್ ಏಜೆನ್ಸಿಯ ನಾಗೇಶ್, ಎಲ್.ಸಿ.ಕಮ್ಯುನಿಕೇಷನ್‌ನ ರಾಜಶೇಖರ್, ವಿಭಿನಿ ಮೀಡಿಯಾದ ಎಂ. ಕುಮಾರ್, ಸ್ಫೂರ್ತಿ ಆ್ಯಡ್‌್ಸನ ಬಿ.ಎಂ.ಮಹೇಶ್, ಶ್ರೀಸಾಯಿನಾಥ್ ಎಂಟರ್‌ಪ್ರೈಸೆಸ್‌ನ ರಾಧಾ ವಿಠ್ಠಲ್, ಶ್ರೀ ಶಿರಡಿ ಸಾಯಿ ಕಮ್ಯುನಿಕೇಶನ್‌ನ ವಿಶ್ವನಾಥ್ ಅವರಿಗೆ ಸಚಿವ ಅಶ್ವತ್ಥನಾರಾಯಣ ಅವರು ಪತ್ರಿಕೆ ವತಿಯಿಂದ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಕಲಾವಿದ ನಿರೂಪ್ ಮೋಹನ್ ಸ್ಟ್ಯಾಂಡ್ ಅಪ್ ಕಾಮಿಡಿ ಪ್ರದರ್ಶನ ನೀಡಿದರು. ಗಾಯಕ ಹಾಗೂ ಸಂಗೀತ ಕಲಾವಿದ ಕುಮಾರ್ ಶೈಲೇಶ್ ಅವರು ಕೊಳಲು ಹಾಗೂ ಕೀಬೋರ್ಡ್ ಸಂಗೀತ ಪ್ರಸ್ತುತಪಡಿಸಿದರು.
ರವಿ ಹೆಗಡೆ, ಕನ್ನಡಪ್ರಭ ವಿಶೇಷ ಯೋಜನೆಗಳ ಸಮನ್ವಯ ಸಂಪಾದಕ ಬಿ.ವಿ.ಮಲ್ಲಿಕಾರ್ಜುನಯ್ಯ, ಪ್ರಧಾನ ಪುರವಣಿ ಸಂಪಾದಕ ಗಿರೀಶ್‌ರಾವ್ ಹತ್ವಾರ್ (ಜೋಗಿ), ಕನ್ನಡಪ್ರಭ ಬೆಳಗಾವಿ ಆವೃತ್ತಿಯ ಮುಖ್ಯಸ್ಥ ಬ್ರಹ್ಮಾನಂದ ಹಡಗಲಿ, ಪ್ರಸರಣ, ಜಾಹೀರಾತು, ಮಾರುಕಟ್ಟೆವಿಭಾಗದ ಮುಖ್ಯಸ್ಥರು, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಕನ್ನಡಪ್ರಭ ಹಾಗೂ ಏಷ್ಯಾನೆಟ್ ಸುವರ್ಣ ನ್ಯೂಸ್ ಮಾಧ್ಯಮ ಸಂಸ್ಥೆಗಳ ವತಿಯಿಂದ ಬೆಳಗಾವಿ ಭಾಗದ 24 ಗಣ್ಯರಿಗೆ ‘ರಜತ ಸಾಧಕರು’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ನಗರದ ಐಷಾರಾಮಿ ಹೋಟೆಲೊಂದರಲ್ಲಿ ನಡೆದ ಈ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಐಟಿ-ಬಿಟಿ ಮತ್ತು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್.ಅಶ್ವತ್ಥನಾರಾಯಣ, ಕನ್ನಡಪ್ರಭ ಪ್ರಧಾನ ಸಂಪಾದಕ ರವಿ ಹೆಗಡೆ ಮತ್ತಿತರರು ಉಪಸ್ಥಿತರಿದ್ದರು.