Silent Protest: ಕರ್ನಾಟಕ ಸಚಿವಾಲಯದ ನೌಕರರ ಸಂಘದಿಂದ ಮೌನ ಪ್ರತಿಭಟನೆ, ಬೇಡಿಕೆಗಳು ಏನು?

Published : Feb 23, 2022, 09:03 PM ISTUpdated : Feb 23, 2022, 09:20 PM IST
Silent Protest: ಕರ್ನಾಟಕ ಸಚಿವಾಲಯದ ನೌಕರರ ಸಂಘದಿಂದ ಮೌನ ಪ್ರತಿಭಟನೆ, ಬೇಡಿಕೆಗಳು ಏನು?

ಸಾರಾಂಶ

* ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ * ಗಾಂಧಿ ಪ್ರತಿಮೆ ಬಳಿ ಮೌನ‌ ಪ್ರತಿಭಟನೆಗೆ ನಿರ್ಧಾರ * ನೇಮಕಾತಿಯಲ್ಲಿನ ಗೊಂದಲ ಎಲ್ಲ ಪರಿಹರಿಸಿ 

ಬೆಂಗಳೂರು(ಫೆ. 23)  ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ  ಕರ್ನಾಟಕ ಸರ್ಕಾರ ಸಚಿವಾಲಯ (Karnataka Ministry employees) ನೌಕರರ ಸಂಘ ಮೌನ ಪ್ರತಿಭಟನೆಗೆ(Protest) ನಿರ್ಧಾರ ಮಾಡಿದೆ.

ಗುರುವಾರ ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಮೌನ‌ ಪ್ರತಿಭಟನೆಗೆ ನಿರ್ಧಾರ ಮಾಡಿದೆ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಸಚಿವಾಲಯದ ನೌಕರರ ಸಂಘ ಈ ಬಗ್ಗೆ ಮಾಹಿತಿ ನೀಡಿದೆ.

ಮಧ್ಯಾಹ್ನ 1:30ಕ್ಕೆ ಪ್ರತಿಭಟನೆ ನಡೆಸಲು ನೌಕರರರು ನಿರ್ಧಾರ ಮಾಡಿದ್ದಾರೆ.  ಸಚಿವಾಲಯದಲ್ಲಿನ ಕಿರಿಯ ಸಹಾಯಕ ಹುದ್ದೆಗಳನ್ನು ಕಡಿತಗೊಳಿಸುವ ಪ್ರಸ್ತಾವನೆಯನ್ನು ಕೈ ಬಿಡುವಂತೆ ಆಗ್ರಹ ಮಾಡಿದ್ದಾರೆ ಸಚಿವಾಲಯದಲ್ಲಿ ಹೊರಗುತ್ತಿಗೆ ಸೇವೆಯನ್ನು ರದ್ದುಗೊಳಿಸುವಂತೆ  ಒತ್ತಾಯ ಮಾಡಲಿದ್ದಾರೆ.

Anganwadi Workers: ಅಂಗನವಾಡಿ ಸಿಬ್ಬಂದಿಗೆ ಬಜೆಟ್‌ನಲ್ಲಿ ಬಂಪರ್ ಸುದ್ದಿ

ಸರ್ಕಾರದ (Karnataka Govt)  ನೌಕರ ವಿರೋಧಿ ಧೋರಣೆ  ತಾಳಿದೆ  ಸಚಿವಾಲಯದಲ್ಲಿನ ಗ್ರೂಪ್ ಡಿ ಮತ್ತು ವಾಹನ ಚಾಲಕರ ಹುದ್ದೆಗಳನ್ನ ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಬೇಕು. ಸಚಿವಾಲಯದಲ್ಲಿನ ಖಾಲಿ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಬೇಕು ಎಂದು ಒತ್ತಾಯ ಮಾಡಲಿದೆ. 

ಸಚಿವಾಲಯದಲ್ಲಿ ಖಾಲಿ ಇರುವ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು. ಸಚಿವಾಲಯದಲ್ಲಿ ಅವಧಿ ಮೀರಿದ ನಿಯೋಜನೆ/ಅನ್ಯಕಾರ್ಯ ನಿಮಿತ್ತ ಕಾರ್ಯ ನಿರ್ವಹಿಸುತ್ತಿರುವವರನ್ನು ಮಾತೃ ಇಲಾಖೆಗೆ ಹಿಂದಿರುಗಿಸುವುದು .ರಾಜ್ಯ ಸರ್ಕಾರಿ ಸೇವೆ ಸಲ್ಲಿಸಿ ನಿವೃತ್ತಿಯಾದ ಅಧಿಕಾರಿ, ನೌಕರರನ್ನು ಗುತ್ತಿಗೆ ಆಧಾರದ ಮೇಲೆ ಸಚಿವಾಲಯದಲ್ಲಿ ಪುನರ್ ನೇಮಕ ಮಾಡಿಕೊಳ್ಳುತ್ತಿರುವುದನ್ನು ಕೈಬಿಡಬೇಕು.ಸಚಿವಾಲಯದ ಇಲಾಖೆಗಳಲ್ಲಿ ಗ್ರೂಪ್-ಡಿ, ದತ್ತಾಂಶ ನಮೂದಕರನ್ನೊಳಗೊಂಡಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಿಂದ ಭರ್ತಿ ಮಾಡಿದ ನೌಕರರನ್ನು ಹೊರತುಪಡಿಸಿ ಕ್ಷೇತ್ರ ಇಲಾಖೆಗಳಿಂದ ಹೊರಗುತ್ತಿಗೆ ಮುಖಾಂತರ ನೇಮಕ ಮಾಡಿಕೊಂಡು ಸಚಿವಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವವರನ್ನು ಈ ಕೂಡಲೇ ಹಿಂದಿರುಗಿಸುವುದು.ಆಡಳಿತ ಸುಧಾರಣೆ ಹೆಸರಿನಲ್ಲಿ ಸಚಿವಾಲಯದ ಯಾವುದೇ ಇಲಾಖೆ, ಹುದ್ದೆಗಳ ಕಡಿತ / ಮರು ಹೊಂದಾಣಿಕೆ ಮಾಡುವ ಪ್ರಸ್ತಾವನೆಯನ್ನು ಕೈಬಿಡಬೇಕು  ಎಂಬ ಒತ್ತಾಯ ಇದೆ.

ಸಚಿವಾಲಯದ ವೃಂದ ಮತ್ತು ನೇಮಕಾತಿ ನಿಯಮಗಳನ್ವಯ ಇರುವ ಎನ್ನೇಡರ್‌ ಹುದ್ದೆಗಳಿಗೆ ನೇರವಾಗಿ ಸಚಿವಾಲಯದ ಇತರೆ ಇಲಾಖೆಗಳೇ ಭರ್ತಿ ಮಾಡುತ್ತಿರುವುದನ್ನು ಕೈಬಿಡುವ ಬಗ್ಗೆ.ಸಚಿವರ ಆಪ್ತ ಶಾಖೆಗಳಿಗೆ ಸಚಿವಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ/ನೌಕರರನ್ನು ಮಾತ್ರ ಕಡ್ಡಾಯವಾಗಿ ನೇಮಿಸಿಕೊಳ್ಳಬೇಕು  ಎಂಬ ಬೇಡಿಕೆ ಒಳಗೊಂಡಿದೆ. 

ಅಂಗನವಾಡಿ ಸಿಬ್ಬಂದಿಗೆ ಗುಡ್ ನ್ಯೂಸ್:  ಅಂಗನವಾಡಿ ಕಾರ್ಯಕರ್ತೆಯರು (Anganwadi Workers)ಮತ್ತು ಸಹಾಯಕಿಯರ ವೇತನ ಹಾಗೂ ಭತ್ಯೆಯನ್ನು ಹೆಚ್ಚಳ ಮಾಡುವ ಸಂಬಂಧ ಮುಖ್ಯಮಂತ್ರಿಗಳ (Basavaraj Bommai) ಜೊತೆ ಚರ್ಚಿಸಿದ್ದು, ಆಯವ್ಯಯದಲ್ಲಿ (Karnataka Budget) ವೇತನ ಹೆಚ್ಚಿಸಲು ಪ್ರಯತ್ನಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಹಾಲಪ್ಪ ಆಚಾರ್‌ (Halappa Achar) ಭರವಸೆ ನೀಡಿದ್ದಾರೆ.

ಬಿಜೆಪಿಯ (BJP)ಎಸ್‌.ವಿ. ಸಂಕನೂರು ಅವರ ಪ್ರಶ್ನೆಗೆ  ಉತ್ತರಿಸಿದ್ದ ಸಚಿವರು ವೇತನ ಹಾಗೂ ಭತ್ಯೆ ಹೆಚ್ಚಿಸುವುದು ಸೇರಿದಂತೆ ಅನೇಕ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಪ್ರತಿಭಟನೆ ಮಾಡುತ್ತಿದ್ದಾರೆ. ನಾನು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ದೇನೆ. ಕಾರ್ಯಕರ್ತೆಯರಿಗೆ ಕೇಂದ್ರ ಸರ್ಕಾರ 4500 ರು. ರಾಜ್ಯ ಸರ್ಕಾರ 7300 ರು. ಸೇರಿಸಿ ವೇತನ ಕೊಡುತ್ತಿದ್ದೇವೆ. ಇದನ್ನು ಇನ್ನೂ ಹೆಚ್ಚಿಗೆ ಮಾಡಲು ಯತ್ನಿಸಲಾಗುವುದು ಎಂದರು.

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿಕೊಂಡೇ ಬಂದಿದ್ದರು. ಮೂರು ತಿಂಗಳ ಹಿಂದೆ ಪ್ರತಿಭಟನೆ ನಡೆಸಿದ್ದ ನಡೆಸಿದ್ದವರಿಗೆ ಸರ್ಕಾರ ಭರವಸೆ ನೀಡಿತ್ತು. ಆದರೆ ಸ್ಪಂದಿಸದ ಕಾರಣ ಮತ್ತೆ ಪ್ರತಿಭಟನೆ ದಾರಿ ಹಿಡಿದಿದ್ದರು. 

PREV
Read more Articles on
click me!

Recommended Stories

PSI ಹಗರಣದ ಕಿಂಗ್‌ ಆರ್.ಡಿ.ಪಾಟೀಲ್‌ಗೆ ಜೈಲಿಗೋದ್ರೂ ಬುದ್ಧಿ ಬಂದಿಲ್ಲ, ಪೊಲೀಸರ ಮೇಲೆ ಹಲ್ಲೆ, ವಿಡಿಯೋ ರಿಲೀಸ್!
Dharmasthala Case: ನೂರಾರು ಶವ ಹೂತಿರುವ ಆರೋಪ ಧರ್ಮಸ್ಥಳ ಪ್ರಕರಣದಲ್ಲಿ ಸ್ಪೋಟಕ ತಿರುವು