ಮೈಸೂರು (ಸೆ.15): ಮೈಸೂರಿನ ಎಂಜಿ ರಸ್ತೆಯಲ್ಲಿರುವ ದಿವಾನ್ ಪೂರ್ಣಯ್ಯ ಛತ್ರದ ಎದುರು ಚಾಮುಂಡೇಶ್ವರಿ ದೇವಸ್ಥಾನ ಸೇರಿದಂತೆ ಯಾವುದೇ ದೇವಸ್ಥಾನಗಳನ್ನು ತೆರವುಗೊಳಿಸದಂತೆ ಪರಿಸರ ಸ್ನೇಹಿ ಬಳಗದವರು ಮಂಗಳವಾರ ಸಾರ್ವಜನಿಕರಿಂದ ಸಹಿ ಸಂಗ್ರಹ ಅಭಿಯಾನ ಹಮ್ಮಿಕೊಂಡಿದ್ದರು.
ಈ ವೇಳೆ ನಗರ ಪಾಲಿಕೆ ನಾಮನಿರ್ದೇಶನ ಸದಸ್ಯ ಕೆ.ಜಿ. ರಮೇಶ್ ಮಾತನಾಡಿ, ದೇವಸ್ಥಾನಗಳನ್ನು ಒಡೆಯುವ ಕೆಲಸ ಅಧಿಕಾರಿಗಳು ಮಾಡುತ್ತಿರುವುದು ನಿಜಕ್ಕೂ ಬೇಸರದ ಸಂಗತಿ. ಯಾವ ದೇವರು ದೇವಸ್ಥಾನಗಳನ್ನ ಕಟ್ಟಬೇಕಾದರೆ ಯಾವುದೇ ವ್ಯಕ್ತಿ ಕಟ್ಟಲಾಗುವುದಿಲ್ಲ. ಸಾರ್ವಜನಿಕರಿಂದ ಹಣವನ್ನು ಸಂಗ್ರಹಿಸಿ ದೇವಸ್ಥಾನವನ್ನು ನಿರ್ಮಿಸಲಾಗುವುದು. ದೇವಸ್ಥಾನಗಳ ತೆರವುಗೊಳಿಸುವ ಕಾರ್ಯ ಹಿಂತೆಗೆದುಕೊಳ್ಳದಿದ್ದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
undefined
ತುಮಕೂರು : ಜಿಲ್ಲೆಯಲ್ಲಿ 46 ಅನಧಿಕೃತ ಧಾರ್ಮಿಕ ಕೇಂದ್ರಗಳು
ಬಿಜೆಪಿ ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಯುವ ಮೋರ್ಚಾ ಅಧ್ಯಕ್ಷ ಡಿ. ಲೋಹಿತ್ ಮಾತನಾಡಿ, ನಾವು ನಡೆಸುತ್ತಿರುವ ಸಹಿ ಸಂಗ್ರಹ ಅಭಿಯಾನದಲ್ಲಿ ಭಕ್ತಾದಿಗಳು ಮತ್ತು ಸಾರ್ವಜನಿಕರು ದೇವಸ್ಥಾನಗಳನ್ನು ತೆರವುಗೊಳಿಸದಂತೆ ಸಹಿ ಸಂಗ್ರಹಿಸಿ, ಈ ಪಟ್ಟಿಯನ್ನು ಜಿಲ್ಲಾಧಿಕಾರಿ ಹಾಗೂ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗುವುದು ಎಂದರು.
ಮೈಸೂರು ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ. ಪ್ರಕಾಶ್, ಮುಖಂಡರಾದ ನಾಣಿಗೌಡ, ಹರೀಶ್ ನಾಯ್ಡು, ಕಿಶೋರ್, ಸುಚೀಂದ್ರ, ಲತಾ ಬಾಲಕೃಷ್ಣ, ಲತಾ ಮೋಹನ್, ಜ್ಯೋತಿ ಮೊದಲಾದವರು ಇದ್ದರು.