'ಸಿಗಂದೂರು ಚೌಡೇಶ್ವರಿ ದೇಗುಲ ಈಡಿಗ ಸಮಾಜದ್ದು'

By Kannadaprabha News  |  First Published Oct 31, 2020, 12:16 PM IST

ದೇಗುಲ ಹಿಂದುಳಿದ ಈಡಿಗ ಸಮಾಜಕ್ಕೆ ಸೇರಿದೆ. ಈ ಸಮಾಜಕ್ಕೆ ದೇವಸ್ಥಾನ ಬಿಟ್ಟುಕೊಡಲು ತಾವು ಸಿದ್ಧ. ಆದರೆ ಸರ್ಕಾರ ಈ ವಿಷಯದಲ್ಲಿ ಮಧ್ಯ ಪ್ರವೇಶಿಸಿರುವುದು, ಸಮಿತಿ ರಚಿಸಿರುವುದು ಸರಿಯಲ್ಲ ಎಂದು ತಿಳಿಸಿದ ದೇವಸ್ಥಾನದ ಧರ್ಮದರ್ಶಿ ರಾಮಪ್ಪ 


ಶಿವಮೊಗ್ಗ(ಅ.31):  ಸಿಗಂದೂರು ಶ್ರೀ ಚೌಡೇಶ್ವರಿ ದೇವಸ್ಥಾನ ಈಡಿಗ ಸಮಾಜಕ್ಕೆ ಸೇರಿದ್ದು, ಈ ವಿಷಯದಲ್ಲಿ ಸರ್ಕಾರ ಮಧ್ಯ ಪ್ರವೇಶಿಸಿ ಸಮಿತಿ ರಚಿಸಿರುವುದು ಸರಿಯಲ್ಲ. ಇದರ ವಿರುದ್ಧ ಈಡಿಗ ಸಮಾಜ ಹೋರಾಟ ನಡೆಸಬೇಕು ಎಂದು ಸಿಗಂದೂರು ದೇವಸ್ಥಾನದ ಧರ್ಮದರ್ಶಿ ರಾಮಪ್ಪ ಹೇಳಿದ್ದಾರೆ. 

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ದೇಗುಲ ಹಿಂದುಳಿದ ಈಡಿಗ ಸಮಾಜಕ್ಕೆ ಸೇರಿದೆ. ಈ ಸಮಾಜಕ್ಕೆ ದೇವಸ್ಥಾನ ಬಿಟ್ಟುಕೊಡಲು ತಾವು ಸಿದ್ಧ. ಆದರೆ ಸರ್ಕಾರ ಈ ವಿಷಯದಲ್ಲಿ ಮಧ್ಯ ಪ್ರವೇಶಿಸಿರುವುದು, ಸಮಿತಿ ರಚಿಸಿರುವುದು ಸರಿಯಲ್ಲ ಎಂದು ತಿಳಿಸಿದ್ದಾರೆ. 

Tap to resize

Latest Videos

ಸಿಗಂದೂರು ಚೌಡೇಶ್ವರಿ ಸನ್ನಿಧಿ ಭಾರೀ ಉದ್ವಿಗ್ನ

ಇದರ ವಿರುದ್ಧ ಆರ್ಯ ಈಡಿಗ ಮಠದ ಶ್ರೀ ರೇಣುಕಾನಂದ ಶ್ರೀಗಳು ಮತ್ತು ಈಡಿಗ ಸಮುದಾಯ ಹೋರಾಟಕ್ಕೆ ಮುಂದಾಗಬೇಕು. ಇದಕ್ಕೆ ತಾವು ಎಲ್ಲ ರೀತಿಯ ಬೆಂಬಲ ನೀಡುವುದಾಗಿ ಹೇಳಿದ್ದಾರೆ. 
 

click me!