ಹುನಗುಂದ: ಸಂಭ್ರಮದಿಂದ ಜರುಗಿದ ಸಿದ್ಧೇಶ್ವರ ರಥೋತ್ಸವ

Kannadaprabha News   | Asianet News
Published : Jan 17, 2020, 09:13 AM IST
ಹುನಗುಂದ: ಸಂಭ್ರಮದಿಂದ ಜರುಗಿದ ಸಿದ್ಧೇಶ್ವರ ರಥೋತ್ಸವ

ಸಾರಾಂಶ

ಸಂಭ್ರಮದಿಂದ ಜರುಗಿದ ಸಿದ್ದನಕೊಳ್ಳದ ಸಿದ್ಧೇಶ್ವರ ರಥೋತ್ಸವ| ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನಲ್ಲಿರುವ ಸಿದ್ದನಕೊಳ್ಳದ ಸಿದ್ಧೇಶ್ವರ ದೇವಸ್ಥಾನ|

ಅಮೀನಗಡ(ಜ.17): ಜಿಲ್ಲೆಯ ಹುನಗುಂದ ತಾಲೂಕಿನ ಸಿದ್ದನಕೊಳ್ಳದ ಸಿದ್ಧೇಶ್ವರ ರಥೋತ್ಸವ ಹೆಲಿಕಾಪ್ಟರ್‌ನಿಂದ ಪುಷ್ಪವೃಷ್ಠಿ ಹಾಗೂ ಅಪಾರ ಭಕ್ತ ವೃಂದದ ಮಧ್ಯೆ ವಿಜೃಂಭನೆಯಿಂದ ನಡೆಯಿತು.

ಚಿತ್ರನಟ ಪ್ರವೀಣ ಪ್ರತಿ(ಪಿ.ದೀಕ್ಷಿತ್‌) ಹಾಗೂ ಹುನಗುಂದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ರಥೋತ್ಸವಕ್ಕೆ ಹೆಲಿಕಾಪ್ಟರ್‌ನಲ್ಲಿ ಪುಷ್ಪವೃಷ್ಠಿ ಮಾಡಿದರು. 

ಜನಪದ ಸಾಂಗ್ ಹಾಡಿ ಭಕ್ತರನ್ನ ರಂಜಿಸಿದ ಡಾ. ಶಿವುಕುಮಾರ ಸ್ವಾಮೀಜಿ

ಈ ವೇಳೆ ಸಾವಿರಾರು ಭಕ್ತರು ಉತ್ತತ್ತಿ, ಖರ್ಜೂರಗಳನ್ನು ಎಸೆದು ಭಕ್ತಿ ಪರವಶರಾದರು. ಶ್ರೀಮಠದ ಧರ್ಮಾಧಿಕಾರಿ ಡಾ.ಶಿವಕುಮಾರ ಶ್ರೀ, ಗುಳೇದಗುಡ್ಡ ಕಾಡಶಿದ್ದೇಶ್ವರ ಶಿವಾಚಾರ್ಯ ಶ್ರೀ, ಮುರನಾಳದ ಮಳಿಯಪ್ಪಜ್ಜನವರು ಸಾನ್ನಿಧ್ಯ ವಹಿಸಿದ್ದರು. ಅಮೀನಗಡ, ಸೂಳೇಬಾವಿ, ಕುಣಬೆಂಚಿ, ಗುಡೂರ, ಹುನಗುಂದ, ಇಳಕಲ್‌, ಗಜೇಂದ್ರಗಡ, ಐಹೊಳೆ,ಬೆನಕನವಾರಿ, ಸಿದ್ದನಕೊಳ್ಳ, ಪಟ್ಟದಕಲ್‌, ಮುರಡಿ, ಬಾಗಲಕೋಟೆ, ಗುಳೇದಗುಡ್ಡ ಮುಂತಾದವುಗಳೆಡೆಯಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಪಾಲ್ಗೊಂಡಿದ್ದರು.
 

PREV
click me!

Recommended Stories

ಲೀಚೆಟ್ ಸಂಸ್ಕರಣಾ ಘಟಕ:ಬೆಂಗಳೂರಲ್ಲಿ ಜಟಿಲವಾಗಿರುವ ಕಸದ ಸಮಸ್ಯೆಗೆ ಕೊನೆಗೂ ಮುಕ್ತಿ !
ಇಂಡಿಗೋ ವಿಮಾನ ರದ್ದು, ಬೆಂಗ್ಳೂರು ಏರ್‌ಪೋರ್ಟ್‌ನಲ್ಲಿ ನೂಕು ನುಗ್ಗಲು, ಟಿಕೆಟ್ ಬೆಲೆ 15ರಿಂದ 80,000ಕ್ಕೆ ಏರಿಕೆ