ಸಿದ್ದು ಸಿಎಂ ಆಗ್ತಿದ್ರು, ಆದ್ರೆ..: ಸತೀಶ್ ಹೇಳಿದ ಆ ಸತ್ಯ!

Published : Aug 25, 2018, 05:46 PM ISTUpdated : Sep 09, 2018, 10:16 PM IST
ಸಿದ್ದು ಸಿಎಂ ಆಗ್ತಿದ್ರು, ಆದ್ರೆ..: ಸತೀಶ್ ಹೇಳಿದ ಆ ಸತ್ಯ!

ಸಾರಾಂಶ

ಮಾಜಿ ಸಿಎಂ ಸಿದ್ದು ಪರ ಸತೀಶ್ ಜಾರಕಿಹೋಳಿ ಬ್ಯಾಟಿಂಗ್! 120 ಸೀಟ್ ಬಂದಿದ್ದರೆ ಸಿದ್ದು ಸಿಎಂ ಆಗುತ್ತಿದ್ದರು! ಒಳಗಿನ-ಹೊರಗಿನ ಷಡ್ಯಂತ್ರಕ್ಕೆ ಬಲಿಯಾದ ಸಿದ್ದು! ರಾಜಕಾರಣಿ ಎಚ್ಚರದಿಂದಿರಬೇಕು ಎಂದ ಸತೀಶ್  

ಬೆಳಗಾವಿ(ಆ.25): ಚುನಾವಣೆಯಲ್ಲಿ ಕಾಂಗ್ರೆಸ್ ಗೆ 120 ಸೀಟ್ ಬಂದಿದ್ದರೆ ಸಿದ್ದರಾಮಯ್ಯನವರೇ ಸಿಎಂ ಆಗುತ್ತಿದ್ದರು ಎಂದು ಸಿದ್ದು ಆಪ್ತ ಸತೀಶ ಜಾರಕಿಹೋಳಿ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸತೀಶ್ ಜಾರಕಿಹೋಳಿ, ಪಕ್ಷದ ಹೈಕಮಾಂಡ್ ಸಿದ್ದರಾಮಯ್ಯ ಅವರನ್ನೇ ಸಿಎಂ ಮಾಡಬೇಕು ಎಂದು ಬಯಸಿತ್ತು. ಆದರೆ ಸಿದ್ದರಾಮಯ್ಯ ಅವರ ಒಳಗಿನ ಮತ್ತು ಹೊರಗಿನ ಶತ್ರುಗಳೆಲ್ಲಾ ಒಂದಾಗಿ ಅವರ ವಿರುದ್ಧ ಷಡ್ಯಂತ್ರ ನಡೆಸಿದರು ಎಂದು ಸತೀಶ್ ಆರೋಪಿಸಿದ್ದಾರೆ.

ಇದೆಲ್ಲಾ ರಾಜಕಾರಣದಲ್ಲಿ ಸಾಮಾನ್ಯ ಎಂದಿರುವ ಸತೀಶ್ ಜಾರಕಿಹೋಳಿ, ಗ್ರಾಮ ಪಂಚಾಯಿತಿಯಿಂದ ಪ್ರಧಾನಿ ಹುದ್ದೆವರೆಗೆ ಎಲ್ಲ ಹಂತದಲ್ಲೂ ರಾಜಕಾರಣದಲ್ಲಿ ಷಡ್ಯಂತ್ರ ಇದ್ದೆ ಇರುತ್ತದೆ ಎಂದು ಮಾರ್ಮಿಕವಾಗಿ ಹೇಳಿದರು. 

ಇದೇ ವೇಳೆ ಹೆಚ್. ಡಿ.ಕುಮಾರಸ್ವಾಮಿ ಮತ್ತು ಡಾ. ಜಿ. ಪರಮೇಶ್ವರ ನೇತ್ರತ್ವದಲ್ಲಿ ಈ ಸಮ್ಮಿಶ್ರ ಸಕಾರ್ಕಾರ ಐದು ವರ್ಷ ಪೂರೈಸುತ್ತದೆ ಎಂದು ಮಾಜಿ ಸಚಿವ ಭರವಸೆ ವ್ಯಕ್ತಪಡಿಸಿದರು.

PREV
click me!

Recommended Stories

ರೈತರ ಮಕ್ಕಳನ್ನು ಮದುವೆ ಆಗುವ ಹೆಣ್ಮಕ್ಕಳಿಗೆ 10 ಲಕ್ಷ ಕೊಡುವ ಯೋಜನೆ ಜಾರಿ ಮಾಡಿ: ಪುಟ್ಟಣ್ಣ
ಗ್ಯಾರಂಟಿ ಹೆಸರಲ್ಲಿ ಲೂಟಿ, ಇದು ನುಂಗಣ್ಣಗಳ, ಲೂಟಿಕೋರರ ಸರ್ಕಾರ:ಆರ್ ಅಶೋಕ್ ತೀವ್ರ ವಾಗ್ದಾಳಿ