ಇನ್ಸುಲಿನ್‌ಗೆ ಏರ್ಪೋರ್ಟಲ್ಲಿ ಕಾಯ್ದು ಕುಳಿತ ಸಿದ್ದರಾಮಯ್ಯ!

Kannadaprabha News   | Asianet News
Published : Oct 20, 2020, 03:52 PM IST
ಇನ್ಸುಲಿನ್‌ಗೆ ಏರ್ಪೋರ್ಟಲ್ಲಿ ಕಾಯ್ದು ಕುಳಿತ ಸಿದ್ದರಾಮಯ್ಯ!

ಸಾರಾಂಶ

ಇನ್ಸುಲಿನ್‌ಗಾಗಿ ಸಿದ್ದರಾಮಯ್ಯ ವಿಮಾನ ನಿಲ್ದಾಣದಲ್ಲಿ ಗಂಟೆಗಟ್ಟಲೆ ಕಾಯ್ದು ಕುಳಿತಿದ್ದರು.

ಬೆಳಗಾವಿ (ಅ.20): ಬಾದಾಮಿ ಕ್ಷೇತ್ರದ ಜನರ ಅಹವಾಲು ಸ್ವೀಕರಿಸಲು ಆಗಮಿಸಿದ ಸಿದ್ದರಾಮಯ್ಯ ಇನ್ಸುಲಿನ್‌ ಮರೆತು ಬಂದಿದ್ದ ಹಿನ್ನೆಲೆಯಲ್ಲಿ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಒಂದೂವರೆ ಗಂಟೆ ಕಾಯ್ದು ಕುಳಿತ ಪ್ರಸಂಗ ನಡೆಯಿತು.

ಕಂದಾಯ ಸಚಿವ ಆರ್‌.ಅಶೋಕ ಜೊತೆ ಒಂದೇ ವಿಮಾನದಲ್ಲಿ ಬಂದ ವಿಪಕ್ಷ ನಾಯಕ ಸಿದ್ದರಾಮಯ್ಯ ಇನ್ಸುಲಿನ್‌ ಮರೆತು ಬಂದಿದ್ದರಿಂದ ಅದನ್ನು ತರುವವರೆಗೂ ನಿಲ್ದಾಣದಲ್ಲಿಯೇ ಕಾಲ ಕಳೆಯುವಂತಾಯಿತು. 

ನಂತರ ಮಾಜಿ ಶಾಸಕ ಅಶೋಕ ಪಟ್ಟಣ ಕಾರು ಚಾಲಕ ಇನ್ಸುಲಿನ್‌ ತಂದುಕೊಟ್ಟನಂತರ ಸಿದ್ದರಾಮಯ್ಯ ಅಲ್ಲಿಂದ ಹೊರಟರು.

'ಯಡಿಯೂರಪ್ಪನವರನ್ನು ಕೆಳಗಿಳಿಸೋ ಬಗ್ಗೆ ಚಚೆ೯ ನಡೀತಾ ಇರೋದು ನಿಜ' .

ಈ ವೇಳೆ ‘ಹೌ ಆರ್‌ ಯು ಯಂಗ್‌, ಎವರಿಬಡಿ, ನಾನು ಆರಾಮವಾಗಿಯೇ ಇದ್ದೇನೆ. ನಾನು ಡಯಾಬಿಟಿಸ್‌ಗೆ ಇನ್ಸುಲಿನ್‌ ತೆಗೆದುಕೊಳ್ಳಬೇಕಿತ್ತು. ಅದನ್ನು ಮನೆಯಲ್ಲಿ ತೆಗೆದುಕೊಳ್ಳಲಿಲ್ಲ. ಅದಕ್ಕೆ ಇಲ್ಲಿ ತರಸೋಕೆ ಕಳಿಸಿದ್ದೆ. ಅವರು ತಂದುಕೊಟ್ಟರು. ಪೆನ್ಸಿಲ್ಲೇ ಕೊಟ್ಟಿಲ್ಲ’ ಎಂದು ಚಟಾಕಿ ಹಾರಿಸಿದರು.

PREV
click me!

Recommended Stories

ಹುನುಗುಂದದಲ್ಲಿ ಮಂಕಿ ಕ್ಯಾಪ್ ಗ್ಯಾಂಗ್: ಒಂದೇ ರಾತ್ರಿ, 9 ಮನೆ ಕಳವು, ಪೋಲಿಸರ ಮನೆಗಳನ್ನೇ ಬಿಡದ ಖದೀಮರು!
ರೈತರಿಗೆ ಹೆಣ್ಣು ಸಿಗ್ತಿಲ್ಲ; ಬಾಸಿಂಗ ತೊಟ್ಟು, ತಾಂಬೂಲ ಹಿಡಿದು ಡಿಸಿ ಆಫೀಸಿಗೆ ಹೆಣ್ಣು ಕೇಳಲು ಬಂದ ಯುವಕರು!