ಬಾದಾಮಿ: ಆತ್ಮಹತ್ಯೆಗೆ ಶರಣಾದ ನಿವೃತ್ತ ಶಿಕ್ಷಕ ಹಿರೇಮಠ ಮನೆಗೆ ಸಿದ್ದು ಭೇಟಿ, ಧನಸಹಾಯ

Published : Mar 01, 2023, 02:38 PM IST
ಬಾದಾಮಿ: ಆತ್ಮಹತ್ಯೆಗೆ ಶರಣಾದ ನಿವೃತ್ತ ಶಿಕ್ಷಕ ಹಿರೇಮಠ ಮನೆಗೆ ಸಿದ್ದು ಭೇಟಿ, ಧನಸಹಾಯ

ಸಾರಾಂಶ

ನಿವೃತ್ತ ಶಿಕ್ಷಕ ಸಿದ್ದಯ್ಯ ಹಿರೇಮಠ ಅವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ವಯಕ್ತಿಕವಾಗಿ ರೂ.2 ಲಕ್ಷ ಚೆಕ್‌ ನೀಡುವ ಮೂಲಕ ಧನಸಹಾಯ ಮಾಡಿದ ಮಾಜಿ ಸಿಎಂ ಸಿದ್ದರಾಮಯ್ಯ. 

ಬಾದಾಮಿ(ಮಾ.01): ಅನುದಾನಿತ ಶಾಲಾ ನೌಕರರಿಗೆ ಹಳೆ ಪಿಂಚಣಿ ಯೋಜನೆ ಜಾರಿಗೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕನಲ್ಲಿ ನಡೆಯುತ್ತಿದ್ದ ಪ್ರತಿಭಟನೆ ವೇಳೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದ ತಾಲೂಕಿನ ಪಟ್ಟದಕಲ್ಲ ಗ್ರಾಮದ ನಿವೃತ್ತ ಶಿಕ್ಷಕ ಸಿದ್ದಯ್ಯ ಹಿರೇಮಠ(67) ಅವರ ಮನೆಗೆ ಮಂಗಳವಾರ ಮಾಜಿ ಸಿಎಂ, ಶಾಸಕ ಸಿದ್ದರಾಮಯ್ಯ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ವಯಕ್ತಿಕವಾಗಿ ರೂ.2 ಲಕ್ಷ ಚೆಕ್‌ ನೀಡುವ ಮೂಲಕ ಧನಸಹಾಯ ಮಾಡಿದರು.

ನಂತರ ಮಾತನಾಡಿದ ಸಿದ್ದರಾಮಯ್ಯ ಸರಕಾರಿ ನೌಕರಸ್ಥರಿಗೆ ಈ ಮೊದಲಿನಿಂದಲೂ ಹಳೆ ಪಿಂಚಣಿ ಯೋಜನೆ ಜಾರಿಯಲ್ಲಿತ್ತು. ಆದರೆ 2006 ನೇ ಇಸ್ವಿಯಲ್ಲಿ ನೂತನ ಪಿಂಚಣಿ ಯೋಜನೆ(ನ್ಯು ಪೆನ್ಶನ್‌ ಸ್ಕೀಮ್‌)ಜಾರಿಗೆ ಬಂದಿತು. ಇದನ್ನು ಕೇಂದ್ರ ಸರಕಾರ ತೀರ್ಮಾನ ಮಾಡುತ್ತದೆ. ಅವರು ಮಾಡಿದ್ದನ್ನು ರಾಜ್ಯ ಸರಕಾರ ಮಾಡುತ್ತದೆ. ನಾವು ಈ ಬಗ್ಗೆ ಪರಿಶೀಲನೆ ಮಾಡಿ ಈ ಮೊದಲಿನಂತೆ ಹಳೆ ಪಿಂಚಣಿ ಯೋಜನೆ ಜಾರಿಗೆ ತರಲು ಹೇಳಿದ್ದೇವೆ. ಈಗ ನಾವು ಸರಕಾರದಲ್ಲಿ ಇಲ್ಲ. ಸರಕಾರದಲ್ಲಿ ಇರುವವರು ಸಿಎಂ ಬಸವರಾಜ ಬೊಮ್ಮಾಯಿ. ಈಗ ಅವರು ತೀರ್ಮಾನ ಮಾಡಬೇಕು ಅಂತ ಆಗ್ರಹಿಸಿದ್ದಾರೆ. 

ಕರ್ನಾಟಕದ ಜನ ಬದಲಾವಣೆ ಬಯಸಿದ್ದಾರೆ: ಸಿದ್ದರಾಮಯ್ಯ

ನಾನು ಫ್ರೀಡಂ ಪಾರ್ಕನಲ್ಲಿ ನಡೆಯುತ್ತಿರುವ ಪ್ರತಿಭಟನೆ ವೇಳೆ ಹೋಗಿ ಭೇಟಿ ನೀಡಿದ್ದೇ. ಹಳೆ ಪಿಂಚಣಿಗಾಗಿ 141 ದಿನ ಪ್ರತಿಭಟನೆ ಮಾಡಿದ ನಂತರ ಸರಕಾರ ಸ್ಪಂದಿಸದ ಕಾರಣ ಮನನೊಂದು ಸಿದ್ದಯ್ಯ ಹಿರೇಮಠ ವಿಷ ಸೇವಿಸಿದ್ದರು. ನಂತರ ಕೂಡಲೇ ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದರು. ಸರಕಾರ ಕೂಡಲೇ ಪರಿಶೀಲನೆ ಮಾಡಿ ಹಳೆ ಪಿಂಚಣಿ ಯೋಜನೆ ಜಾರಿಗೆ ತರಬೇಕು. ಈ ಕುಟುಂಬಕ್ಕೆ ಸರಕಾರ ಎಲ್ಲ ಸೌಲಭ್ಯಗಳನ್ನು ನೀಡಬೇಕು ಎಂದು ರಾಜ್ಯ ಸರಕಾರವನ್ನು ಆಗ್ರಹಿಸಿದರು. 

ನಮ್ಮ ಸರಕಾರ ಬಂದರೆ ಮೃತ ಸಿದ್ದಯ್ಯನ ಪುತ್ರನಿಗೆ ಆರೋಗ್ಯ ಇಲಾಖೆಯಲ್ಲಿ ನೌಕರಿ ಕೊಡಿಸಲಾಗುವುದು ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಮುಖಂಡರಾದ ಎಂ.ಬಿ.ಹಂಗರಗಿ, ಡಾ.ಎಂ.ಜಿ.ಕಿತ್ತಲಿ, ಪಿ.ಆರ್‌.ಗೌಡರ, ಶಿವುಕುಮಾರ ಹಿರೇಮಠ, ಮಹೇಶ ಹೊಸಗೌಡ್ರ, ಹೊಳಬಸು ಶೆಟ್ಟರ, ಭೀಮಸೇನ ಚಿಮ್ಮನಕಟ್ಟಿ, ಸಂಜಯ ಬರಗುಂಡಿ ಸೇರಿದಂತೆ ಇತರರು ಹಾಜರಿದ್ದರು.

PREV
Read more Articles on
click me!

Recommended Stories

ಚಿನ್ನಸ್ವಾಮಿಗೆ ಅಂತಾರಾಷ್ಟ್ರೀಯ ಮತ್ತು IPL ಪಂದ್ಯಗಳು ವಾಪಸ್; ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ
ಕಾಂಗ್ರೆಸ್ ಮುಖಂಡ ಗಣೇಶ್ ಗೌಡ ಕೊಲೆ ರಹಸ್ಯ ರಿವೀಲ್: ಪೊಲೀಸರ ಬಲೆಗೆ ಬಿದ್ದ ಮೂವರು!