ಬೆಂ-ಮೈ ಹೆದ್ದಾರಿ: ಬೆಂಗಳೂರು- ನಿಡಗಟ್ಟದವರೆಗೂ ಟೋಲ್ ಸಂಗ್ರಹ, ಪ್ರತಾಪ್ ಸಿಂಹ

By Girish Goudar  |  First Published Mar 1, 2023, 2:27 PM IST

ಎಸ್ಪಿಜಿ ಅನುಮತಿ ಕೊಟ್ಟರೆ ಇದೇ ರಸ್ತೆಯಲ್ಲಿ ರೋಡ್ ಶೋ ಮಾಡುತ್ತೇವೆ. ಒಟ್ಟು 2 ಕಿಮೀ ರೋಡ್ ಶೋ ಮಾಡಲು ಉದ್ದೇಶಿಸಿದ್ದೇವೆ. ರೋಡ್ ಶೋ ನಂತರ ಸಾರ್ವಜನಿಕ ಸಭೆ ನಡೆಯಲಿದೆ. ಮಂಡ್ಯದ ಮದ್ದೂರು ಬಳಿಯ ಗೆಜ್ಜೆಲಗೆರೆಯಲ್ಲಿ ಸಾರ್ವಜನಿಕ ಸಭೆ ಆಯೋಜನೆ ಮಾಡಲಾಗಿದೆ: ಪ್ರತಾಪ್ ಸಿಂಹ 


ಮೈಸೂರು(ಮಾ.01): ಮಾರ್ಚ್ 12 ಕ್ಕೆ ಬೆಂಗಳೂರು-ಮೈಸೂರು ಹೆದ್ದಾರಿಯನ್ನ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಲೋಕಾರ್ಪಣೆಗೊಳಿಸಲಿದ್ದಾರೆ ಅಂತ ಮೈಸೂರು-ಕೊಡಗು ಬಿಜೆಪಿ ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ. 

ಇಂದು(ಬುಧವಾರ) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಸ್ಪಿಜಿ ಅನುಮತಿ ಕೊಟ್ಟರೆ ಇದೇ ರಸ್ತೆಯಲ್ಲಿ ರೋಡ್ ಶೋ ಮಾಡುತ್ತೇವೆ. ಒಟ್ಟು 2 ಕಿಮೀ ರೋಡ್ ಶೋ ಮಾಡಲು ಉದ್ದೇಶಿಸಿದ್ದೇವೆ. ರೋಡ್ ಶೋ ನಂತರ ಸಾರ್ವಜನಿಕ ಸಭೆ ನಡೆಯಲಿದೆ. ಮಂಡ್ಯದ ಮದ್ದೂರು ಬಳಿಯ ಗೆಜ್ಜೆಲಗೆರೆಯಲ್ಲಿ ಸಾರ್ವಜನಿಕ ಸಭೆ ಆಯೋಜನೆ ಮಾಡಲಾಗಿದೆ ಅಂತ ಹೇಳಿದ್ದಾರೆ. 

Tap to resize

Latest Videos

'ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾ​ರಿ ಟೋಲ್‌ ಸಂಗ್ರಹ ಸದ್ಯಕ್ಕಿಲ್ಲ'

ಸರ್ವಿಸ್ ರಸ್ತೆ ಪೂರ್ಣಗೊಳ್ಳಲು ನ್ಯಾಯಾಲಯದಲ್ಲಿನ ಜಮೀನು ಕುರಿತ ಮೊಕದ್ದಮೆ ಇನ್ನೂ ಬಾಕಿ ಇದೆ‌. ಅದು ತೀರ್ಮಾನವಾದ ಮೇಲೆ ಬೇಗನೆ ಸರ್ವಿಸ್ ರಸ್ತೆ ಆರಂಭಿಸಲಾಗುತ್ತದೆ. ಹೈವೆಯ ಒಂದು ಭಾಗದ ಟೋಲ್ ಸಂಗ್ರಹವನ್ನು ಮಾರ್ಚ್ 14 ರವರೆಗೆ ಮುಂದೂಡಿದ್ದೇವೆ. ಬೆಂಗಳೂರು-ನಿಡಗಟ್ಟದವರೆಗೂ ಟೋಲ್ ಸಂಗ್ರಹ ಮಾಡಲಾಗುತ್ತದೆ ಅಂತ ತಿಳಿಸಿದ್ದಾರೆ. 

ಕಾಂಗ್ರೆಸ್ ಸರ್ಕಾರದಲ್ಲಿ ಕಾಲದಲ್ಲಿ ಆದ ಮೈಸೂರು - ಊಟಿ ಹೈವೆ ರಸ್ತೆಗೆ ಸರ್ವಿಸ್ ರಸ್ತೆಯೇ ಇಲ್ಲ. ಈಗ ಇವರೆಲ್ಲಾ ಬೆಂಗಳೂರು - ಮೈಸೂರು ಹೈವೆ ಸರ್ವಿಸ್ ರಸ್ತೆ ಬಗ್ಗೆ ಮಾತಾಡುತ್ತಿದ್ದಾರೆ. ನಾವು ಸರ್ವಿಸ್ ರಸ್ತೆಯನ್ನು ವ್ಯವಸ್ಥಿತವಾಗಿ ಮಾಡುತ್ತಿದ್ದೇವೆ. ಸರ್ವಿಸ್ ರಸ್ತೆಯೆ ಮಾಡದೆ ನೀವು ಟೋಲ್ ಸಂಗ್ರಹ ಹೇಗೆ ಆರಂಭಿಸಿದ್ರಿ ಅಂತಾ ಕಾಂಗ್ರೆಸ್‌ನ ಮಹದೇವಪ್ಪ ಅವರನ್ನು ಕೇಳಿ ಅಂತ ಲೇವಡಿ ಮಾಡಿದ್ದಾರೆ. 

click me!