ಮೈಸೂರು: 'ಶ್ರೀನಿವಾಸಪ್ರಸಾದ್‌, ಸಿದ್ದರಾಮಯ್ಯ ವಿರೋಧಿಗಳಲ್ಲ'

By Kannadaprabha News  |  First Published Dec 21, 2019, 11:18 AM IST

ಸಂಸದ ವಿ. ಶ್ರೀನಿವಾಸಪ್ರಸಾದ್‌ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜಕೀಯ ವಿರೋಧಿಗಳಲ್ಲ, ಅವರು ಒಳ್ಳೆಯ ಸ್ನೇಹಿತರು ಎಂದು ಶಾಸಕ ಡಾ.ಎಸ್‌. ಯತೀಂದ್ರ ಹೇಳಿದ್ದಾರೆ.


ಮೈಸೂರು(ಡಿ.21): ಸಂಸದ ವಿ. ಶ್ರೀನಿವಾಸಪ್ರಸಾದ್‌ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜಕೀಯ ವಿರೋಧಿಗಳಲ್ಲ, ಅವರು ಒಳ್ಳೆಯ ಸ್ನೇಹಿತರು ಎಂದು ಶಾಸಕ ಡಾ.ಎಸ್‌. ಯತೀಂದ್ರ ಹೇಳಿದ್ದಾರೆ.

ಮೈಸೂರು ತಾಲೂಕು ವರುಣ ಕ್ಷೇತ್ರಕ್ಕೆ ಸೇರುವ ಮೋಸಂಬಾಯನ ಹಳ್ಳಿಯಲ್ಲಿ ಸುಮಾರು 9 ಲಕ್ಷ ರು. ಗೂ ಹೆಚ್ಚು ಅನುದಾನದಲ್ಲಿ ಅಂಗನವಾಡಿ ಕಟ್ಟಡ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ಬಳಿಕ ಸಿದ್ದರಾಮಯ್ಯಮತ್ತು ವಿ. ಶ್ರೀನಿವಾಸಪ್ರಸಾದ್‌ ಅವರ ಭೇಟಿ ಕುರಿತು ಅವರು ಮಾತನಾಡಿದ್ದಾರೆ.

Tap to resize

Latest Videos

'ಮೇಯರ್‌ ಚುನಾವಣೆ: ಕಾಂಗ್ರೆಸ್‌, ಜೆಡಿಎಸ್‌ ಮೈತ್ರಿಗೆ ತೊಂದರೆ ಇಲ್ಲ'

ಸಿದ್ದರಾಮಯ್ಯನವರಿಗೆ ಹೃದಯ ಚಿಕಿತ್ಸೆಗೊಳಗಾದಾಗ ಅವರ ಆರೋಗ್ಯ ವಿಚಾರಿಸಲು ಹಿರಿಯರೂ ಆದ ವಿ. ಶ್ರೀನಿವಾಸಪ್ರಸಾದ್‌ ಅವರು ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿದರು. ಈ ವಿಚಾರಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ ಎಂದರಲ್ಲದೇ, ವಿ. ಶ್ರೀನಿವಾಸ ಪ್ರಸಾದ್‌ ಅವರ ಹಾಗೂ ಸಿದ್ದರಾಮಯ್ಯನವರ ರಾಜಕೀಯ ಸಿದ್ಧಾಂತ ಒಂದೇ ಆಗಿದೆ. ಇಬ್ಬರೂ ಹಿಂದುಳಿದ ವರ್ಗದ ನಾಯಕರಾಗಿ ರಾಜಕೀಯವಾಗಿ ಬೆಳೆದಂತವಹರಾಗಿದ್ದಾರೆ ಎಂದಿದ್ದಾರೆ.

ಆ್ಯಕ್ಷನ್‌ ಇದ್ರೆ ರಿಯಾಕ್ಷನ್‌: ವಿಶ್ವನಾಥ್‌ ಜೊತೆ ಸಾರಾ ಮಹೇಶ್‌ ಕದನ ವಿರಾಮ!

ಆದ್ದರಿಂದಲೇ ಶ್ರೀನಿವಾಸ ಪ್ರಸಾದ್‌ ಅವರು ಬಿಜೆಪಿ ಸರ್ಕಾರ ಇಂದಿರಾ ಕ್ಯಾಂಟೀನ್‌ ಹೆಸರು ಬದಲಾವಣೆ ಪ್ರಸ್ತಾಪಕ್ಕೆ ವಿರೋಧ ವ್ಯಕ್ತಪಡಿಸಿ ಇಂದಿರಾ ಕ್ಯಾಂಟೀನ್‌ ಹೆಸರೇ ಮುಂದುವರೆಯಬೇಕೆಂದು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ, ಆದ್ದರಿಂದ ಈ ಇಬ್ಬರು ನಾಯಕರ ರಾಜಕೀಯ ಸಿದ್ಧಾಂತ ಒಂದೇ ಆಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಗ್ರಾಪಂ ಅಧ್ಯಕ್ಷೆ ನಿಂಗಮಣಿ, ತಾಪಂ ಸದಸ್ಯ ಮುದ್ದರಾಮೇಗೌಡ, ಕೆಪಿಸಿಸಿ ಕಾರ್ಯದರ್ಶಿ ಮಹೇಶ್‌ ಇದ್ದರು.

click me!