'ಅಶ್ವತ್ಥ್‌ ನಾರಾಯಣಗೆ ನಿಜವಾಗ್ಲೂ ಧಮ್‌ ಇದ್ರೆ ಮೋದಿ ಮುಂದೆ ಕೂತು ಪರಿಹಾರ ತರಲಿ'

Suvarna News   | Asianet News
Published : Oct 25, 2020, 12:58 PM ISTUpdated : Oct 25, 2020, 03:36 PM IST
'ಅಶ್ವತ್ಥ್‌ ನಾರಾಯಣಗೆ ನಿಜವಾಗ್ಲೂ ಧಮ್‌ ಇದ್ರೆ ಮೋದಿ ಮುಂದೆ ಕೂತು ಪರಿಹಾರ ತರಲಿ'

ಸಾರಾಂಶ

ರಾಜ್ಯ ಸರ್ಕಾರ ಪ್ರವಾಹ ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸಿಲ್ಲ, ಸರ್ಕಾರದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ| ವೈಮಾನಿಕ ಸಮೀಕ್ಷೆಯಿಂದ ಯಾವುದೇ ಪ್ರಯೋಜನವಿಲ್ಲ. ಜನರ ಜೊತೆ ಮಾತನಾಡಿಲ್ಲ, ನೆರೆ ಪೀಡಿತ ಪ್ರದೇಶಗಳಿಗೆ ಹೋಗಿಲ್ಲ ಎಂದ ಸಿದ್ದರಾಮಯ್ಯ|

ಕಲಬುರಗಿ(ಅ.25):  ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಅನ್ನೋದನ್ನು ಹೈ ಕಮಾಂಡ್ ನಿರ್ಧರಿಸುತ್ತದೆ. ಜನರು ಅಭಿಮಾನದಿಂದ ನನ್ನನ್ನ ಸಿಎಂ ಆಗಲಿ ಅಂತ ಹೇಳುತ್ತಾರೆ. ಉಪ ಚುನಾವಣೆಯ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. 

ಇಂದು(ಭಾನುವಾರ) ನಗರದ ವಿಮಾನ ನಿಲ್ದಾಣದಲ್ಲಿ ಮಾಧ್ಯಮವರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಪ್ರವಾಹ ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸಿಲ್ಲ. ಸರ್ಕಾರದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ಪದೇ ಪದೇ ಕಾಂಗ್ರೆಸ್ ಶಾಸಕರು ಬಿಜೆಪಿಗೆ ಬರುತ್ತಾರೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳುತ್ತಿದ್ದಾರೆ. ಆದರೆ ರಾಜಕೀಯವಾಗಿ ಅವರು ಸುಮ್ಮನೆ ಹೇಳುತ್ತಾರೆ. ಪ್ರವಾಹ ಸಂತ್ರಸ್ತರ ಬಗ್ಗೆ ಮಾತನಾಡುವದನ್ನು ಬಿಟ್ಟಿದ್ದಾರೆ. ಅದನ್ನು ಬಿಟ್ಟು ಶಾಸಕರು ಬರುತ್ತಾರೆ ಅಂತ ಹೇಳುತ್ತಿದ್ದಾರೆ ಎಂದಿದ್ದಾರೆ.

ಉತ್ತರ ಕರ್ನಾಟಕದಲ್ಲಿ ಉಂಟಾದ ಪ್ರವಾಹದ ಬಗ್ಗೆ ಸಿಎಂ ಬಿ.ಎಸ್. ಯಡಿಯೂರಪ್ಪ ನಡೆಸಿದ ವೈಮಾನಿಕ ಸಮೀಕ್ಷೆ ವಿಚಾರದ ಬಗ್ಗೆ ಮಾತನಾಡಿದ ಅವರು,  ವೈಮಾನಿಕ ಸಮೀಕ್ಷೆಯಿಂದ ಯಾವುದೇ ಪ್ರಯೋಜನವಿಲ್ಲ. ಜನರ ಜೊತೆ ಮಾತನಾಡಿಲ್ಲ, ನೆರೆ ಪೀಡಿತ ಪ್ರದೇಶಗಳಿಗೆ ಹೋಗಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಹರಿಹಾಯ್ದಿದ್ದಾರೆ. 

ತೆಪ್ಪದ ಮೇಲೆ ಪೋಸ್; ಬಿಲ್ಡಪ್ ಪೊಲೀಸಪ್ಪ ಅಮಾನತು

ಡಿಸಿಎಂ ಅಶ್ವತ್ಥ್‌ ನಾರಾಯಣ ಸಿದ್ದರಾಮಯ್ಯಗಿಂತ ಹೆಚ್ಚು ಧಮ್ ಇದೆ ಅಂತಾರೆ. ಧಮ್ ಇದ್ರೆ ಪ್ರಧಾನಿ ಮೋದಿ ಮುಂದೆ ಕೂತು ಪರಿಹಾರ ತಗೆದುಕೊಂಡು ಬರಲಿ. ರಾಜ್ಯದಲ್ಲಿ 25 ಸಂಸದರು ಇದ್ರೂ ಪ್ರಯೋಜನವಿಲ್ಲ. ಅಶ್ವತ್ಥ್‌ ನಾರಾಯಣಗೆ ಹತ್ತು ಪಟ್ಟು ಧಮ್‌ ಇರಲಿ. ಆದ್ರೆ ಪ್ರಧಾನಿ ಮೋದಿ ಬಳಿ ಹೋಗಿ ರಾಜ್ಯಕ್ಕೆ ಬರಬೇಕಾದ ಪರಿಹಾರ ತಗೆದುಕೊಂಡು ಬರಲಿ ಎಂದು ಸವಾಲ್‌ ಹಾಕಿದ್ದಾರೆ. 

ನೆರೆ ಸಂತ್ರಸ್ತರಿಗೆ ಇನ್ನು ನಯಾ ಪೈಸೆ ಹಣ ನೀಡಿಲ್ಲ. ಬಿಜೆಪಿ ಸರ್ಕಾರ ಜನವಿರೋಧಿ ಸರ್ಕಾರವಾಗಿದೆ. ಯಡಿಯೂರಪ್ಪ ಚೆಕ್ ಮೂಲಕ ಲಂಚ ಪಡೆಯುತ್ತಿದ್ದರು. ಇದೀಗ ಅವರ ಮಗ ಆರ್‌ಟಿಜಿಎಸ್ ಮೂಲಕ ಲಂಚ ಪಡೆಯುತ್ತಿದ್ದಾರೆ. ಇಂತಹ ಭ್ರಷ್ಟ ಸರ್ಕಾರವನ್ನು ನಾನು ನನ್ನ ರಾಜಕೀಯ ಜೀವನದಲ್ಲಿ ನೋಡಿಲ್ಲ ಎಂದು ಆರೋಪಿಸಿದ್ದಾರೆ. 

ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಯರಂಡಿ ಗ್ರಾಮಕ್ಕೆ ಆಗಮಿಸಿದ ಸಿದ್ದರಾಮಯ್ಯ ಅವರಿಗೆ ಅದ್ದೂರಿ ಸ್ವಾಗತ ಕೋರಲಾಗಿದೆ. ಆದರೆ, ಸ್ವಾಗತ ವೇಳೆ ಯಾವೊಬ್ಬ ಕಾರ್ಯಕರ್ತರು ಸಾಮಾಜಿಕ ಅಂತರವನ್ನ ಪಾಲನೆ ಮಾಡಿಲ್ಲ. ನೂರಾರು ಕಾರ್ಯಕರ್ತರಿಂದ ಪಟಾಕಿ ಸಿಡಿಸಿ, ಡೋಲು ಭಾರಿಸುವ ಮೂಲಕ ಸಿದ್ದರಾಮಯ್ಯ ಅವರಿಗೆ ಅದ್ದೂರಿ ಸ್ವಾಗತ ನೀಡಿದ್ದಾರೆ.

ಇತ್ತೀಚೆಗಷ್ಟೇ ಸಾವನ್ನಪ್ಪಿದ ಬಸವಕಲ್ಯಾಣ ಶಾಸಕ ದಿ. ಬಿ.ನಾರಾಯಣರಾವ್ ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ ಸಿದ್ದರಾಮಯ್ಯ ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಬಿ.ನಾರಾಯಣರಾವ್ ಅವರು 40 ವರ್ಷದಿಂದ ನನ್ನ ಜೊತೆಗೆ ಇದ್ದಿದ್ದರು.  1983 ರಲ್ಲಿ ಶಾಸಕನಾಗಿದ್ದೆ ಅಂದಿನಿಂದ ಇಂದಿನವರೆಗೂ ಅವರ ಜೊತೆ ಸಂಪರ್ಕ ಇತ್ತು. ಬೇರೆ ಬೇರೆ ಪಕ್ಷ ಆದರೂ ಕೂಡ ಸಂಪರ್ಕ ಮಾತ್ರ ಬಿಟ್ಟಿರಲಿಲ್ಲ. ನನ್ನ ಜೊತೆ ಆತ್ಮೀಯತೆ, ಸಂಬಂಧ ಅಷ್ಟರ ಮಟ್ಟಿಗೆ ಇತ್ತು, ಅವರೊಬ್ಬ ಹೋರಾಟಗಾರ, ಹೋರಾಟನೇ ಅವರ ಉಸಿರಾಗಿತ್ತು. ದಣಿವರಿಯದ ಹೋರಾಟಗಾರನಾಗಿ ನಿರಂತರವಾಗಿ ಹೋರಾಟ ಮಾಡಿಕೊಂಡು ಬಂದಿದ್ದರು. ಸಾಮಾಜಿಕ ನ್ಯಾಯದಿಂದ ವಂಚಿತರಾಗಿದ್ದ ಯಾವುದೇ ವರ್ಗದವರಾಗಿದ್ದರು ಅವರ ಪರ ಹೋರಾಟ ಮಾಡುತ್ತಿದ್ದರು. ನಾವು ಬಸವಣ್ಣನ ಕರ್ಮ ಭೂಮಿಗೆ ಯೋಗ್ಯವಾದ ವ್ಯಕ್ತಿಗೆ ಕೊಡಿಸಿದ್ದೇವೆಂಬ ಭಾವನೆ ಇತ್ತು. ಅವರು ಬಸವಣ್ಣನ ವಿಚಾರಗಳು ಹೊಂದಿದ್ದವರಾಗಿದ್ದರು ಎಂದು ನಾರಾಯಣರಾವ್ ಅವರ ಜೊತೆಗಿದ್ದ ನೆನಪುಗಳನ್ನ ಮೆಲುಕು ಹಾಕಿದ್ದಾರೆ. 

PREV
click me!

Recommended Stories

ಹುನುಗುಂದದಲ್ಲಿ ಮಂಕಿ ಕ್ಯಾಪ್ ಗ್ಯಾಂಗ್: ಒಂದೇ ರಾತ್ರಿ, 9 ಮನೆ ಕಳವು, ಪೋಲಿಸರ ಮನೆಗಳನ್ನೇ ಬಿಡದ ಖದೀಮರು!
ರೈತರಿಗೆ ಹೆಣ್ಣು ಸಿಗ್ತಿಲ್ಲ; ಬಾಸಿಂಗ ತೊಟ್ಟು, ತಾಂಬೂಲ ಹಿಡಿದು ಡಿಸಿ ಆಫೀಸಿಗೆ ಹೆಣ್ಣು ಕೇಳಲು ಬಂದ ಯುವಕರು!