* ಅಗ್ನಿಪಥ್ ಯೋಜನೆ ಸ್ಥಗಿತಗೊಳಿಸಿ: ಸಿದ್ದರಾಮಯ್ಯ
* ಶಾಂತಿಯುತವಾಗಿ ಪ್ರತಿಭಟನೆ ಮಾಡಬೇಕು. ಅದನ್ನು ಬಿಟ್ಟು ಹಿಂಸಾತ್ಮಕ ಕೃತ್ಯಕ್ಕೆ ಮುಂದಾಗಬಾರದು
* ಪ್ರತಿಭಟನಾಕಾರರ ಜೊತೆ ಸರ್ಕಾರ ಮಾತನಾಡಬೇಕು
ಹುಬ್ಬಳ್ಳಿ(ಜೂ.19): ಕೇಂದ್ರ ಸರ್ಕಾರ ಕೂಡಲೇ ಅಗ್ನಿಪಥ ಯೋಜನೆ ಸ್ಥಗಿತಗೊಳಿಸಿ ಪ್ರತಿಭಟನಕಾರರ ಜೊತೆ ಮಾತನಾಡಲಿ ಎಂದಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಅನ್ಯಾಯದ ವಿರುದ್ಧ ಶಾಂತಿಯುತ ಪ್ರತಿಭಟನೆ ಮಾಡಬೇಕು ಎಂದಿದ್ದಾರೆ.
ನಗರದಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕೇಂದ್ರದ ಅಗ್ನಿಪಥ ಯೋಜನೆಗೆ ನಮ್ಮ ವಿರೋಧವಿದೆ. ನಾಲ್ಕು ವರ್ಷದ ಬಳಿಕ ಆಯ್ಕೆ ಆದ ಅಭ್ಯರ್ಥಿಗಳ ಪರಿಸ್ಥಿತಿ ಏನು? ಎಂದು ಪ್ರಶ್ನಿಸಿದರು. ಶಾಂತಿಯುತವಾಗಿ ಪ್ರತಿಭಟನೆ ಮಾಡಬೇಕು. ಅದನ್ನು ಬಿಟ್ಟು ಹಿಂಸಾತ್ಮಕ ಕೃತ್ಯಕ್ಕೆ ಮುಂದಾಗಬಾರದು. ಪ್ರತಿಭಟನಾಕಾರರ ಜೊತೆ ಸರ್ಕಾರ ಮಾತನಾಡಬೇಕು. ಕೂಡಲೇ ಸರ್ಕಾರ ಅಗ್ನಿಪಥ ಯೋಜನೆಯನ್ನು ಕೈಬಿಡಬೇಕು ಎಂದರು.
undefined
ಇಡಿ ಬಳಸಿ ಬಿಜೆಪಿ ದ್ವೇಷ ರಾಜಕಾರಣ: ಸಿದ್ದರಾಮಯ್ಯ
ತಮ್ಮ ವಿರುದ್ಧ ಛಲವಾದಿ ನಾರಾಯಣಸ್ವಾಮಿ ಜಾತಿ ನಿಂದನೆ ಪ್ರಕರಣ ದಾಖಲು ವಿಚಾರವಾಗಿ ಪ್ರತಿಕ್ರಿಯಿಸಿ, ಇದು ಬಿಜೆಪಿ ಹುನ್ನಾರ. ನಾನು ವಕೀಲ, ನನಗೆ ಕಾನೂನು ತಿಳಿದಿದೆ. ಛಲವಾದಿ ನಾರಾಯಣಸ್ವಾಮಿ ಅವರ ಮೇಲೆ ಹಳೆ ಚಡ್ಡಿಗಳನ್ನು ಹೋರಿಸಿದವರು ಬಿಜೆಪಿಯವರು. ನಾರಾಯಣಸ್ವಾಮಿ ತಾವಾಗೇ ಮಾಡಿಲ್ಲ. ನಾನು ಜಾತಿ ನಿಂದನೆ ಮಾಡಿಯೇ ಇಲ್ಲ, ಅಂದಮೇಲೆ ನಿಂದನೆ ಹೇಗಾಗುತ್ತದೆ. ಇದು ಆರ್‌ಎಸ್‌ಎಸ್ ಹಾಗೂ ಬಿಜೆಪಿಯವರ ಹುನ್ನಾರ ಎಂದರು.