ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಅನೇಕ ಭರವಸೆ ಈಡೇರಿಸಿದ್ದಾರೆ : ಸೋಮಶೇಖರ್

By Kannadaprabha News  |  First Published Mar 29, 2023, 7:47 AM IST

  ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಪ್ರಣಾಳಿಕೆಯಲ್ಲಿ ನೀಡಿದ್ದ ಅನೇಕ ಭರವಸೆ ಈಡೇರಿಸಿದರು. ಮತ್ತೆ ಅಧಿಕಾರಕ್ಕೆ ಬಂದರೆ ಈಗ ಘೋಷಿಸಿರುವ ನಾಲ್ಕು ಗ್ಯಾರೆಂಟಿಯನ್ನೂ ಜಾರಿಗೊಳಿಸುವುದಾಗಿ ಮಾಜಿ ಶಾಸಕ ಎಂ.ಕೆ. ಸೋಮಶೇಖರ್‌ ತಿಳಿಸಿದರು.


  ಮೈಸೂರು :  ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಪ್ರಣಾಳಿಕೆಯಲ್ಲಿ ನೀಡಿದ್ದ ಅನೇಕ ಭರವಸೆ ಈಡೇರಿಸಿದರು. ಮತ್ತೆ ಅಧಿಕಾರಕ್ಕೆ ಬಂದರೆ ಈಗ ಘೋಷಿಸಿರುವ ನಾಲ್ಕು ಗ್ಯಾರೆಂಟಿಯನ್ನೂ ಜಾರಿಗೊಳಿಸುವುದಾಗಿ ಮಾಜಿ ಶಾಸಕ ಎಂ.ಕೆ. ಸೋಮಶೇಖರ್‌ ತಿಳಿಸಿದರು.

ನಗರದ ಕಾಂಗ್ರೆಸ್‌ ಕಚೇರಿಯಲ್ಲಿ ಮಂಗಳವಾರ ನಡೆದ ನಗರ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಆರ್‌. ನಾಗೇಶ್‌ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.

Latest Videos

undefined

ಸರ್ಕಾರಿ ನೌಕರ ಗೃಹಿಣಿಯರು ಸೇರಿ ಎಲ್ಲಾ ಮಹಿಳೆಯರಿಗೂ ಮಾಸಿಕ .2 ಸಾವಿರ ನೀಡಲಾಗುವುದು. ರಾಜ್ಯ ಬಜೆಟ್‌ 3.9 ಲಕ್ಷ ಕೋಟಿ ಗಾತ್ರ ಹೊಂದಿದೆ. ಗೃಹಿಣಿಯರಿಗೆ ಮಾಸಿಕ  2 ಸಾವಿರ ಕೊಡಲು 35 ಸಾವಿರ ಕೋಟಿ ರೂ. ತೆಗೆದಿಡಲಾಗುತ್ತದೆ. 200 ಯೂನಿಟ್‌ ವಿದ್ಯುತ್‌, ಉಚಿತವಾಗಿ 10 ಕೆಜಿ ಅಕ್ಕಿ ನೀಡಲಾಗುತ್ತದೆ ಎಂದರು.

ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಪ್ರಣಾಳಿಕೆಯಲ್ಲಿ ನೀಡಿದ್ದ ಎಲ್ಲ ಭರವಸೆಗಳನ್ನು ಈಡೇರಿಸಿದರು. ಈಗ ಘೋಷಿಸಿರುವ 4 ಗ್ಯಾರಂಟಿಗಳನ್ನು ಪ್ರತಿ ಕಾರ್ಯಕರ್ತರಿಗೆ 10 ಜನರಿಗೆ ತಿಳಿಸಬೇಕು. ಅವರಿಗೆ ಮನವರಿಕೆ ಮಾಡಬೇಕು ಎಂದ ಅವರು, ರಾಜ್ಯದಲ್ಲಿ ಕಾಂಗ್ರೆಸ್‌ ಸದೃಢವಾಗಿದೆ. 2023ರಲ್ಲಿ ಅಧಿಕಾರಕ್ಕೆ ಬರುವುದು ನಿಶ್ಚಿತ. ಹಾಗಂತ ಪಕ್ಷದಲ್ಲಿ ವಿವಿಧ ಹುದ್ದೆ ಪಡೆದವರು ಕಾಂಗ್ರೆಸ್‌ ಕಚೇರಿಯಲ್ಲಿ ಕೂರದೇ ಪಕ್ಷ ಸಂಘಟನೆಗೆ ಶ್ರಮಿಸಬೇಕು ಎಂದು ಸಲಹೆ ನೀಡಿದರು.

ಯಾರೇ ಅಭ್ಯರ್ಥಿಯಾಗಲಿ ಪಕ್ಷದ ಪರವಾಗಿ ದುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಚುನಾವಣೆಗೆ ನಿಂತವನ ಮನೆ ಹಾಳಾಗಿರುತ್ತದೆ. ಚುನಾವಣೆ ವೇಳೆ ಯಾರು ಪ್ರಾಮಾಣಿಕವಾಗಿ ಕೆಲಸ ಮಾಡುವವರನ್ನು ಗುರುತಿಸಿ ಅಧಿಕಾರ ಕೊಡಲಾಗುತ್ತದೆ ಎಂದು ಭರವಸೆ ನೀಡಿದರು.

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ರಾಜ್ಯಾಧ್ಯಕ್ಷ ಕೆ.ಎಸ್‌.ಶಿವರಾಮ್‌ ಮಾತನಾಡಿ, ಇವತ್ತಿನ ಪರಿಸ್ಥಿತಿಯಲ್ಲಿ ಹಿಂದುಳಿದ ವರ್ಗಗಳ ಜನರು ಸಂಘಟಿತರಾಗಬೇಕು. ಹಿಂದುಳಿದ ವರ್ಗಗಳ ವಿರೋಧಿ ಧೋರಣೆ ಅನುಸರಿಸುತ್ತಿರುವ ಬಿಜೆಪಿ ಪಕ್ಷಕ್ಕೆ ಪಾಠ ಕಲಿಸಬೇಕು ಎಂದರು.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಹತ್ತಾರು ಯೋಜನೆ, ಕಾರ್ಯಕ್ರಮ ಜಾರಿಗೊಳಿಸಿದರು. ಈ ಬಿಜೆಪಿ ಸರ್ಕಾರ ಬಹುತೇಕ ಕಾರ್ಯಕ್ರಮಗಳನ್ನು ರದ್ದು ಮಾಡಿದೆ. ಉಳಿದ ಕಾರ್ಯಕ್ರಮಗಳನ್ನು ನಿಲ್ಲಿಸಿದೆ. ಹಾಗಾಗಿ ಈ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತಂದು ಸಿದ್ದರಾಮಯ್ಯ ಕೈ ಬಲಪಡಿಸಬೇಕು ಎಂದು ನುಡಿದರು.

ನಗರ ಕಾಂಗ್ರೆಸ್‌ ಅಧ್ಯಕ್ಷ ಆರ್‌. ಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಶಿವಣ್ಣ, ಮುಖಂಡರಾದ ಕೆ. ಹರೀಶ್‌ ಗೌಡ, ನಗರ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಪುಷ್ಪಲತಾ ಚಿಕ್ಕಣ್ಣ, ಮುಖಂಡರಾದ ಪ್ರದೀಪ್‌ ಕುಮಾರ್‌, ಮಾಜಿ ಮೇಯರ್‌ ಚಿಕ್ಕಣ್ಣ, ಚಂದ್ರು, ಶ್ರೀಕಾಂತ್‌, ಎಂ.ಎನ್‌. ಮಹದೇವ, ಕೆ.ಎಸ್‌. ಮಲ್ಲೇಗೌಡ, ಮೊಗಣ್ಣಚಾರ್‌, ಗಿರೀಶ್‌, ನಾಗಭೂಷಣ್‌ ತಿವಾರಿ, ಅಶೋಕ್‌, ರೋಹಿತ್‌, ಎಸ್‌.ಟಿ. ಗಿರೀಶ್‌, ಸೋಮಶೇಖರ್‌, ಬಸವಣ್ಣ, ಹರೀಶ್‌ ಮೊಗಣ್ಣ, ಗೋಪಿನಾಥ್‌ ಮೊದಲಾದವರು ಇದ್ದರು.

ಕೈ ಮೊದಲ ಪಟ್ಟಿ ರಿಲೀಸ್

2023 ರ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಯಾಗುವ ಮುನ್ನವೇ ಕಾಂಗ್ರೆಸ್‌ ತನ್ನ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಕಳೆದ 3 - 4 ದಿನಗಳಿಂದ ಪಟ್ಟಿ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದ್ದು, ಈವರೆಗೆ ಪಟ್ಟಿ ಬಿಡುಗಡೆಯಾಗಿರಲಿಲ್ಲ. ಆದರೆ, ಪ್ರಧಾನಿ ಮೋದಿ ರಾಜ್ಯಕ್ಕೆ ಆಗಮಿಸುವ ದಿನವೇ ಕಾಂಗ್ರೆಸ್‌ 124 ವಿಧಾನಸಭಾ ಕ್ಷೇತ್ರಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಪ್ರಮುಖವಾಗಿ, ಮಾಜಿ ಸಿಎಂ ಸಿದ್ದರಾಮಯ್ಯ ಎಲ್ಲಿಂದ ಸ್ಪರ್ಧಿಸುತ್ತಾರೆ ಎಂಬುದು ಕುತೂಹಲ ಮೂಡಿಸಿತ್ತು. ಈಗ ಸಿದ್ದರಾಮಯ್ಯ ವರುಣಾದಿಂದಲೇ ಸ್ಪರ್ಧಿಸುವುದು ಸ್ಪಷ್ಟವಾಗಿದೆ. ಅಲ್ಲದೆ, ಮೊದಲ ಪಟ್ಟಿಯಲ್ಲಿ ಕೋಲಾರ ಹಾಗೂ ಬಾದಾಮಿ ಕ್ಷೇತ್ರದ ಅಭ್ಯರ್ಥಿ ಹೆಸರಿಲ್ಲ. ಸಿದ್ದರಾಮಯ್ಯ 2 ಕ್ಷೇತ್ರ ಸ್ಪರ್ಧೆ ಸುಳಿವು ಬೆನ್ನಲ್ಲೇ ಮೊದಲ ಪಟ್ಟಿಯಲ್ಲಿ ಕೋಲಾರ, ಬಾದಾಮಿಗೆ ಕಾಂಗ್ರೆಸ್ ಅಭ್ಯರ್ಥಿಯನ್ನು ಘೋಷಿಸಿರದಿರುವುದು ಕುತೂಹಲ ಮೂಡಿಸಿದೆ.

ಇದನ್ನು ಓದಿ: ಕೋಲಾರ, ವರುಣಾ ಎರಡೂ ಕಡೆ ಸ್ಪರ್ಧೆಗೆ ಸಿದ್ದರಾಮಯ್ಯ ಸಿದ್ಧತೆ: ಹೈಕಮಾಂಡ್‌ನಿಂದಲೂ ಒಪ್ಪಿಗೆ ಸಾಧ್ಯತೆ

click me!