ಮಾಜಿ ಸಿಎಂ ಸಿದ್ದರಾಮಯ್ಯ ಅವರೇ ಸ್ಯಾಡಿಸ್ಟ್, ಆದ್ದರಿಂದ ರಾಜ್ಯದಲ್ಲಿ ಯಾರು ಸ್ಯಾಡಿಸ್ಟ್ ಎಂಬುದು ಜನತೆಗೆ ಗೊತ್ತಿದೆ. ರಾಜ್ಯದಲ್ಲಿ ಗಲಭೆ, ಬೆಂಕಿ ಹಾಕುವ ಕೃತ್ಯಗಳಿಗೆ ಕಾಂಗ್ರೆಸ್ ಕಾರಣ. ಇದೇ ಕಾರಣಕ್ಕೆ ಮಂಗಳೂರಿಗೆ ಇನ್ನಷ್ಟುಬೆಂಕಿ ಹಾಕಲು ಸಿದ್ದರಾಮಯ್ಯ ಬರುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ತಿರುಗೇಟು ನೀಡಿದ್ದಾರೆ.
ಮಂಗಳೂರು(ಡಿ.22): ಮಾಜಿ ಸಿಎಂ ಸಿದ್ದರಾಮಯ್ಯ ಅವರೇ ಸ್ಯಾಡಿಸ್ಟ್, ಆದ್ದರಿಂದ ರಾಜ್ಯದಲ್ಲಿ ಯಾರು ಸ್ಯಾಡಿಸ್ಟ್ ಎಂಬುದು ಜನತೆಗೆ ಗೊತ್ತಿದೆ. ರಾಜ್ಯದಲ್ಲಿ ಗಲಭೆ, ಬೆಂಕಿ ಹಾಕುವ ಕೃತ್ಯಗಳಿಗೆ ಕಾಂಗ್ರೆಸ್ ಕಾರಣ. ಇದೇ ಕಾರಣಕ್ಕೆ ಮಂಗಳೂರಿಗೆ ಇನ್ನಷ್ಟುಬೆಂಕಿ ಹಾಕಲು ಸಿದ್ದರಾಮಯ್ಯ ಬರುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ತಿರುಗೇಟು ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಸಿದ್ದರಾಮಯ್ಯ ಅವರು, ಕಫä್ರ್ಯ ಪೀಡಿತ ಮಂಗಳೂರು ಭೇಟಿಗೆ ಕಾಂಗ್ರೆಸ್ ನಾಯಕರಿಗೆ ಅವಕಾಶ ನೀಡದ ರಾಜ್ಯ ಸರ್ಕಾರದ ಕ್ರಮವನ್ನು ಸ್ಯಾಡಿಸ್ಟ್ ಎಂದು ಆರೋಪಿಸಿದ್ದರು. ಈ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ನಳಿನ್ ಕುಮಾರ್ ಕಟೀಲ್ ಈ ಉತ್ತರ ನೀಡಿದ್ದಾರೆ.
ಮಂಗಳೂರು ಅಘೋಷಿತ ಬಂದ್ ವಾತಾವರಣ: KSRTCಗೆ ನಷ್ಟ
ನಾವು ಸಾಮರಸ್ಯ ಸಂದೇಶ ನೀಡಿದ್ದೇವೆ. ಆದರೆ ಕಾಂಗ್ರೆಸ್ ರಾಜಕೀಯ ಲಾಭದ ಉದ್ದೇಶದಿಂದ ಘಟನೆಯನ್ನು ನೋಡುತ್ತಿದೆ. ಕಲ್ಲಡ್ಕದಲ್ಲಿ ನಡೆದ ಘಟನೆ ಹಾಗೂ ಶಾಸಕ ಯು.ಟಿ.ಖಾದರ್ ಹೇಳಿಕೆ ವಿರುದ್ಧ ದೂರು ದಾಖಲಾಗಿದೆ. ಈ ಹಿಂದೆ ನಾನು ಹೊತ್ತಿ ಉರಿಯುವ ಹೇಳಿಕೆ ನೀಡಿರುವುದಕ್ಕೂ ಈಗ ಖಾದರ್ ಅವರು ನೀಡಿದ ಹೇಳಿಕೆ ಹಾಗೂ ಸಂದರ್ಭಕ್ಕೆ ವ್ಯತ್ಯಾಸ ಇದೆ. ನನ್ನ ಪ್ರಕರಣ ನ್ಯಾಯಾಲಯದಲ್ಲಿ ಖುಲಾಸೆಗೊಂಡಿದೆ ಎಂದು ಸುದ್ದಿಗಾರರ ಪ್ರಶ್ನೆಗೆ ಸ್ಪಷ್ಟಪಡಿಸಿದ್ದಾರೆ.
ದೇಶಾದ್ಯಂತ ಗಲಭೆ ಹುನ್ನಾರ:
ರಾಜಕಾರಣದ ಚದುರಂಗ ಆಟಕ್ಕೆ ಮುಂದಾಗಿರುವ ಕಾಂಗ್ರೆಸ್, ಗಲಭೆ ಸೃಷ್ಟಿಸಿ ರಾಜಕೀಯ ಲಾಭಕ್ಕೆ ಪ್ರತಿಭಟನೆಗೆ ಪ್ರೇರಣೆ ನೀಡಿದೆ. ದೇಶದಲ್ಲಿ ಕಾಂಗ್ರೆಸ್ ಆಡಳಿತದ ವೇಳೆ ಪೌರತ್ವ ತಿದ್ದುಪಡಿಯನ್ನು ಪ್ರಸ್ತಾಪಿಸಿ ಬೆಂಬಲಿಸಿ, ಈಗ ವಿರೋಧಿಸುತ್ತಿದ್ದಾರೆ. ಈ ಮೂಲಕ ದೇಶದಾದ್ಯಂತ ಗಲಭೆ ಸೃಷ್ಟಿಸುವ ಹುನ್ನಾರವನ್ನು ಕಾಂಗ್ರೆಸ್ ಮಾಡುತ್ತಿದೆ. ಮಂಗಳೂರು ಘಟನೆ ಹಿಂದೆ ಪೂರ್ತಿಯಾಗಿ ಕಾಂಗ್ರೆಸ್‌ನ ಪೂರ್ವಯೋಜಿತ ಕೃತ್ಯ ಅಡಗಿದೆ ಎಂದು ನಳಿನ್ ಕುಮಾರ್ ಕಟೀಲ್ ಆರೋಪಿಸಿದ್ದಾರೆ.
ಈ ಪೌರತ್ವ ಕಾಯ್ದೆ ತಿದ್ದುಪಡಿಯಿಂದ ಪಾಕಿಸ್ತಾನ, ಅಪಘಾನಿಸ್ತಾನ, ಬಂಗ್ಲಾಗಳಲ್ಲಿ ಅಲ್ಪಸಂಖ್ಯಾತರಾಗಿ ಇಲ್ಲಿಗೆ ಆಗಮಿಸಿರುವ ಭಾರತೀಯರಿಗೆ ಪೌರತ್ವ ನೀಡಲು ಸಾಧ್ಯವಾಗಲಿದೆ. ಇದರಿಂದ ದೇಶವಾಸಿಗಳಿಗೆ ಯಾವುದೇ ತೊಂದರೆ ಇಲ್ಲ. ಈ ವಿಚಾರ ಗೊತ್ತಿದ್ದರೂ ಕಾಂಗ್ರೆಸಿಗರು ವಿನಾ ಕಾರಣ ಹೋರಾಟ ನಡೆಸುತ್ತಿದ್ದಾರೆ. ಈ ಬಗ್ಗೆ ಸಂಶಯ ಇದ್ದರೆ ಕಾಯ್ದೆಯ ಅಂಶಗಳನ್ನು ತಿಳಿದುಕೊಳ್ಳಲಿ ಎಂದು ನಳಿನ್ ಕುಮಾರ್ ಹೇಳಿದ್ದಾರೆ.
ಖಾದರ್ ಹೇಳಿಕೆ ಮರುದಿನ ಗಲಭೆ:
ಕಾಂಗ್ರೆಸ್ ಶಾಸಕ ಯು.ಟಿ.ಖಾದರ್ ಅವರು ಪೌರತ್ವ ತಿದ್ದುಪಡಿ ಜಾರಿಗೊಳಿಸಿದರೆ, ರಾಜ್ಯದಲ್ಲಿ ಬೆಂಕಿ ಉರಿಯುತ್ತದೆ ಎಂದು ಹೇಳಿದ ಮರುದಿನವೇ ಗಲಭೆ ನಡೆದಿದೆ. ನಗರದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರುವಾಗ ಅಹಿತಕರ ಘಟನೆ ನಡೆಯದಂತೆ ಮುಸ್ಲಿಮ್ ಮುಖಂಡರನ್ನು ಕರೆಸಿ ಪೊಲೀಸ್ ಅಧಿಕಾರಿಗಳು ಮಾತುಕತೆ ನಡೆಸಿದ್ದಾರೆ. ಆದರೂ ಕೆಲವರು ಘಟನೆಯ ಲಾಭ ಪಡೆದುಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ಆದ್ದರಿಂದ ಮಂಗಳೂರು ಗಲಭೆಗೆ ಕಾಂಗ್ರೆಸ್ ಕಾರಣವಾಗಿದೆ ಎಂದು ನಳಿನ್ ಕುಮಾರ್ ಆರೋಪಿಸಿದರು.
6 ತಿಂಗಳ ಸಾಧನೆ ಏನು?: ಸಚಿವರಿಗೆ 9 ತಾಸು ಮೋದಿ ಪರೀಕ್ಷೆ
ಮಂಗಳೂರಿನಲ್ಲಿ ಗಲಭೆ ಆದ ತಕ್ಷಣ ಸಿಎಂ ಆಗಮಿಸಿ ಪರಿಸ್ಥಿತಿಯ ಅವಲೋಕನ ನಡೆಸಿದ್ದಾರೆ. ಅಲ್ಲದೆ ಸಾವಿಗೀಡಾದ ಕುಟುಂಬಕ್ಕೆ ನ್ಯಾಯಯುತ ಪರಿಹಾರ ಹಾಗೂ ಸೂಕ್ತ ತನಿಖೆ ನಡೆಸುವ ಭರವಸೆ ನೀಡಿದ್ದಾರೆ. ಮುಖ್ಯಮಂತ್ರಿಗಳ ಈ ಕಾಳಜಿಯನ್ನು ಅಭಿನಂದಿಸುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.