ನಟಿ ಅನುಶ್ರೀ ವಿಚಾರಣೆ ನಡೆಸಿದ್ದ ಎಸ್‌ಐ ಮತ್ತೆ ವರ್ಗ

Kannadaprabha News   | Asianet News
Published : Nov 18, 2020, 07:46 AM IST
ನಟಿ ಅನುಶ್ರೀ ವಿಚಾರಣೆ ನಡೆಸಿದ್ದ ಎಸ್‌ಐ ಮತ್ತೆ ವರ್ಗ

ಸಾರಾಂಶ

ಡ್ರಗ್ಸ್ ಪ್ರಕರಣದಲ್ಲಿ ನಟಿ ಹಾಗೂ ನಿರೂಪಕಿ ಅನುಶ್ರೀಯನ್ನು ವಿಚಾರಣೆ ನಡೆಸಿದ್ದ ಪೊಲೀಸ್ ಅಧಿಕಾರಿಗಳನ್ನು ಮತ್ತೆ ವರ್ಗಾವಣೆ ಮಾಡಲಾಗಿದೆ. 

ಮಂಗಳೂರು (ನ.18): ಮಂಗಳೂರು ಡ್ರಗ್ಸ್‌ ಮೂಲದ ತನಿಖಾ ತಂಡದ ನೇತೃತ್ವ ವಹಿಸಿದ್ದ ಸಿಸಿಬಿ ಇನ್ಸ್‌ಪೆಕ್ಟರ್‌ ಶಿವಪ್ರಕಾಶ್‌ ಹಾಗೂ ಎಸ್‌ಐ ಕಬ್ಬಳ್‌ರಾಜ್‌ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

 ಈ ಹಿಂದೆ ಸಿಸಿಬಿ ಇನ್ಸ್‌ ಪೆಕ್ಟರ್‌ ಶಿವಪ್ರಕಾಶ್‌ ಅವರನ್ನು ವರ್ಗಾವಣೆ ಮಾಡಲಾಗಿತ್ತು. ಅವರ ಜಾಗಕ್ಕೆ ಮಹೇಶ್‌ ಪ್ರಸಾದ್‌ ಅವರನ್ನು ನಿಯೋಜಿಸಲಾಗಿತ್ತು. 

ಕಿರು ತೆರೆ ನಿರೂಪಕಿ, ನಟಿ ಅನುಶ್ರೀ ಅವರನ್ನು ಮಂಗಳೂರಿಗೆ ತನಿಖೆಗೆ ಕರೆಸಿದ ಬಳಿಕ ಶಿವಪ್ರಕಾಶ್‌ ವರ್ಗಾವಣೆ ನಡೆದಿತ್ತು. ಅವರನ್ನು ಬೆಂಗಳೂರು ಲೋಕಾಯುಕ್ತಕ್ಕೆ ವರ್ಗಾವಣೆ ಮಾಡಲಾಗಿತ್ತು.

ಪ್ರಭಾವಿಗಳ ಒತ್ತಡದ ಬೆನ್ನಲ್ಲೇ ಅನುಶ್ರೀ ವಿಚಾರಣೆ ಕ್ಲೋಸ್? .

ಬಳಿಕ ಸಾರ್ವಜನಿಕ ಆಕ್ಷೇಪದ ಹಿನ್ನೆಲೆಯಲ್ಲಿ ವರ್ಗಾವಣೆ ತಡೆಹಿಡಿಯಲಾಗಿತ್ತು. ಇದೀಗ ಮತ್ತೆ ವರ್ಗಾವಣೆ ಮಾಡಲಾಗಿದೆ. ಚಿಕ್ಕಮಗಳೂರಿಗೆ ಕಬ್ಬಳ್‌ರಾಜ್‌ರನ್ನು ವರ್ಗಾಯಿಸಲಾಗಿದೆ.

PREV
click me!

Recommended Stories

ವರುಣಾ ಜನತೆಯ ಋಣ ತೀರಿಸಲು ಸಾಧ್ಯವಿಲ್ಲ, ಆದರೂ ಶ್ರಮಿಸುವೆ: ಯತೀಂದ್ರ ಸಿದ್ದರಾಮಯ್ಯ
ಡೆಡ್ಲಿ ರಾಟ್‌ವೀಲರ್ ನಾಯಿಗಳ ದಾಳಿಗೆ ಮಹಿಳೆ ದುರ್ಮರಣ; ಮೂವರು ಮಕ್ಕಳು ಅನಾಥ