ಚಳಿಗಾಲದ ರಜೆಯಲ್ಲಿ ಮೂರು ದಿನ ಕಡಿತ ಮಾಡಲಾಗಿದೆ. ಯಾರಿಗೆ ರಜೆ ಕಡಿತ...? ಎಷ್ಟು ದಿನಗಳ ರಜೆ..?
ಬೆಂಗಳೂರು (ನ.18): ಕೊರೋನಾ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನ್ಯಾಯಾಲಯಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸದ ಹಿನ್ನೆಲೆಯಲ್ಲಿ ಹೈಕೋರ್ಟ್ ಬೆಂಗಳೂರು ಪ್ರಧಾನ ಪೀಠ, ಧಾರವಾಡ ಹಾಗೂ ಕಲಬುರಗಿ ನ್ಯಾಯಪೀಠಗಳಿಗೆ ಮೂರು ದಿನ ಚಳಿಗಾಲದ ರಜೆ ಕಡಿತಗೊಳಿಸಿದೆ.
ಹೈಕೋರ್ಟ್ನ ಮೂರು ನ್ಯಾಯಪೀಠಗಳಿಗೆ ಡಿ.24ರಿಂದ ಜ.1ರವರೆಗೆ ಒಟ್ಟು 9 ದಿನಗಳ ಕಾಲ ಚಳಿಗಾಲದ ರಜೆ ಘೋಷಿಸಲಾಗಿದೆ.
ಗ್ರಾಮ ಪಂಚಾಯತಿ ಎಲೆಕ್ಷನ್ಗೆ ಗ್ರೀನ್ ಸಿಗ್ನಲ್: ಆಯೋಗಕ್ಕೆ ಕೋರ್ಟ್ ಮಹತ್ವದ ಸೂಚನೆ...
ಪೂರ್ವನಿಗದಿಯಂತೆ ಚಳಿಗಾಲದ ರಜೆ ಡಿ.21ರಿಂದ ಆರಂಭಗೊಂಡು ಜ.1ಕ್ಕೆ ಮುಕ್ತಾಯವಾಗಬೇಕಿತ್ತು. ಜನವರಿ 2 ಮತ್ತು 3 ಶನಿವಾರ ಹಾಗೂ ಭಾನುವಾರ ರಜೆಯಾಗಿದ್ದು, ಹೈಕೋರ್ಟ್ ಪೀಠಗಳು ಜ.4ರಿಂದ ಕಾರ್ಯಾರಂಭ ಮಾಡಲಿವೆ ಎಂದು ರಿಜಿಸ್ಟ್ರಾರ್ ಜನರಲ್ ರಾಜೇಂದ್ರ ಬಾದಾಮಿಕರ್ ಹೊರಡಿಸಿರುವ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಆದರೆ, ಕೊರೋನಾ ಹಿನ್ನೆಲೆಯಲ್ಲಿ ನ್ಯಾಯಾಲಯಗಳು ಪೂರ್ಣ ಸಮಯ ಕಾರ್ಯನಿರ್ವಹಿಸದ ಕಾರಣ ರಜೆ ಕಡಿತಗೊಳಿಸಲಾಗಿದೆ.