Davanagere: ಹೊಲದಲ್ಲಿ ಉಳುಮೆ ಮಾಡಿದ ಶ್ವಾಸಗುರು ವಚನಾನಂದ ಶ್ರೀ

By Govindaraj S  |  First Published Jul 27, 2022, 9:27 PM IST

ಹರಿಹರದ ವೀರಶೈವ ಪಂಚಮಸಾಲಿ ಜಗದ್ಗುರು ಪೀಠದ ಪೀಠಾಧಿಪತಿ, ಶ್ವಾಸಗುರು ಖ್ಯಾತಿಯ ಶ್ರೀ ವಚನಾನಂದ ಸ್ವಾಮೀಜಿ ಉಳುಮೆ ಮಾಡಿ ಗಮನ ಸೆಳೆದಿದ್ದಾರೆ‌. 


ದಾವಣಗೆರೆ (ಜು.27): ಹರಿಹರದ ವೀರಶೈವ ಪಂಚಮಸಾಲಿ ಜಗದ್ಗುರು ಪೀಠದ ಪೀಠಾಧಿಪತಿ, ಶ್ವಾಸಗುರು ಖ್ಯಾತಿಯ ಶ್ರೀ ವಚನಾನಂದ ಸ್ವಾಮೀಜಿ ಉಳುಮೆ ಮಾಡಿ ಗಮನ ಸೆಳೆದಿದ್ದಾರೆ‌. ಹಾವೇರಿ ಜಿಲ್ಲೆ ಬ್ಯಾಡಗಿಯಲ್ಲಿ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸಮಾಜದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಪಾಲ್ಗೊಂಡು ಹರಿಹರದ ಪೀಠಕ್ಕೆ ವಾಪಾಸು ಆಗುತ್ತಿರುವ ಸಂದರ್ಭದಲ್ಲಿ ಚಳಗೇರಿ ಸಮೀಪ ಮೆಕ್ಕೆ ಜೋಳದ ಹೊಲದಲ್ಲಿ ರೈತರು ಬಳಗುಂಟೆ ಮಾಡುತ್ತಿರುವುದನ್ನು ಕಂಡೊಡನೆ ಕಾರಿನಿಂದ ಇಳಿದ ಶ್ರೀ ಗಳು ಹೊಲಕ್ಕೆ ಹೋಗಿ ರೈತರ ಬಳಿ ಸಮಾಲೋಚನೆ ಮಾಡಿದರು. 

ನಂತರ ಶ್ರೀಗಳು ಕೆಲ ಕಾಲ ಬಳಗುಂಟೆ ಹೊಡೆಯುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದರು. ಆ ಮೂಲಕ ಕೃಷಿಯನ್ನೇ ಅವಲಂಬಿ ಸಿರುವ ವೀರಶೈವ ಪಂಚಮಸಾಲಿ ಸಮಾಜದ ಗುರುಗಳೂ ಕೃಷಿ ಚಟುವಟಿಕೆ ಮಾಡಬಲ್ಲರು ಎಂಬುದರ ಸಾಕ್ಷಿಯಾದರು. ಯಾರಾದರೂ ನಿಮಗೆ ನೆಮ್ಮದಿ ಎಲ್ಲಿ ಸಿಗುತ್ತೆ ಅಂತೇನಾದರೂ ಕೇಳಿದರೆ ಅದಕ್ಕೆ ಉತ್ತರವಾಗಿ ನಾವು ಕೃಷಿ ಚಟುವಟಿಕೆಯಲ್ಲಿ, ಭೂಮಿ ಉಳುಮೆ ಮಾಡುವುದರಲ್ಲಿ ಎನ್ನುತ್ತೇವೆ. ಯಾಕೆಂದರೆ ಅದು ಪ್ರತಿಯೊಬ್ಬ ನೇಗಿಲ ಯೋಗಿಯ ಹುಟ್ಟು ಗುಣ. ಕೃಷಿ ನಮ್ಮ ಡಿಎನ್‌ಎಯಲ್ಲಿ ಬೆರೆತುಹೋಗಿದೆ. 

Tap to resize

Latest Videos

ಸಿದ್ದುಗೆ ಅಧಿಕಾರಕ್ಕಾಗಿ ನಮಾಜ್‌ ಆದ ಬಳಿಕ ಪ್ರಾರ್ಥಿಸಿ: ಜಮೀರ್‌ ಅಹಮ್ಮದ್‌

ಮಣ್ಣು ನಮ್ಮ ಕರ್ಮಭೂಮಿ. ಭೂತಾಯಿಯೇ ನಮ್ಮ ದೇವರು ಎಂದು ಶ್ರೀ ಗಳು ಹೇಳಿದರು. ಮಳೆ ಬೆಳೆ ಭೂಮಿ ಬಗ್ಗೆ ಕೃಷಿಕರಿಗಿಂತ ದೊಡ್ಡ ಎನ್‌ಸೈಕ್ಲೋಪೀಡಿಯಾ ಇನ್ನೊಂದಿಲ್ಲ. ಕೃಷಿಕರ ಪ್ರೀತಿಗೆ ಓಗೊಟ್ಟು ನಾವೂ ನೇಗಿಲಿಡಿದು ಸ್ವಲ್ಪ ಹೊತ್ತು ಬಳಗುಂಟಿ ಉಳುಮೆ ಮಾಡಿದೆವು. ಮಣ್ಣು ಸ್ಪರ್ಶಿಸಿದ ಪಾದ ಪುಳಕಗೊಂಡಿತು. ಕೈಗಳು ನೇಗಿಲು ಹಿಡಿದು ಆನಂದಪಟ್ಟವು. ನಮ್ಮ ಪಾಲಿಗೆ ಅತ್ಯಂತ ಸುಖದಾಯಕ , ನೆಮ್ಮದಿದಾಯಕ ಕ್ಷಣಗಳವು. ಅಂತ ಯಾವುದೇ ಅಮೂಲ್ಯ ಕ್ಷಣಗಳನ್ನು ಕಳೆದುಕೊಳ್ಳಲು ನಾವು ಇಷ್ಟಪಡುವುದಿಲ್ಲ. ಯಾಕೆಂದರೆ ಕೃಷಿ ದೇವರ ಕಾಯಕ. ಆ ಕಾಯಕ ಮಾಡುವ ಕೃಷಿಕರೇ ನಮಗೆ ಸಾಕ್ಷಾತ್ ದೇವರು ಎಂದು ಶ್ರೀಗಳು ಸ್ಮರಿಸಿದರು.

ಅವಕಾಶ ವಂಚಿತ ಪಂಚಮಸಾಲಿಗಳಿಗೆ ನ್ಯಾಯ ಒದಗಿಸುವ ಬದ್ಧ: ಲಿಂಗಾಯತ ಪಂಚಮಸಾಲಿ ಸಮುದಾಯದ ಜನರು ಶಿಕ್ಷಣ ಪ್ರೇಮಿಗಳು ಎಂಬುದಕ್ಕೆ ರಾಜ್ಯದೆಲ್ಲೆಡೆ ಆರಂಭಿಸಿರುವ ಶೈಕ್ಷಣಿಕ ಸಂಸ್ಥೆಗಳೇ ಸಾಕ್ಷಿ. ಆದರೆ, ಇತ್ತೀಚೆಗೆ ಅದೇ ಸಮುದಾಯದ ಬಡವರು ಶೈಕ್ಷಣಿಕ ಮೀಸಲಾತಿಗೆ ಬೀದಿಗಿಳಿದಿರುವುದು ದುರಂತ. 2ಏ ಮೀಸಲಾತಿ ಹೋರಾಟದ ಹಿಂದೆ, ಅವಕಾಶ ವಂಚಿತ ಇಂತಹ ಪಂಚಮಸಾಲಿಗಳಿಗೆ ನ್ಯಾಯ ಒದಗಿಸುವ ಉದ್ದೇಶವಿದೆ ಎಂದು ಹರಿಹರ ಪೀಠದ ವಚನಾನಂದ ಶ್ರೀಗಳು ಹೇಳಿದರು. ತಾಲೂಕಿನ ಕದರಮಂಡಲಗಿ ಕಾಂತೇಶ ದೇವಸ್ಥಾನದ ಆವರಣದಲ್ಲಿ ಬ್ಯಾಡಗಿ ಮತಕ್ಷೇತ್ರದ ವ್ಯಾಪ್ತಿಯ ಪಂಚಮಸಾಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸುಳ್ಳು ಜಾತಿ ಪ್ರಮಾಣ ಪತ್ರದ ವಿರುದ್ಧ ಜು.28 ರಂದು ಫ್ರೀಡಂಪಾರ್ಕ್‌ನಲ್ಲಿ ಪ್ರತಿಭಟನೆ

ಲಿಂಗಾಯತ ಪಂಚಮಸಾಲಿಗಳು ರಾಜ್ಯದೆಲ್ಲೆಡೆ ಆರಂಭಿಸಿರುವ ಶಿಕ್ಷಣ ಸಂಸ್ಥೆಗಳು ಕಳೆದ ನೂರಾರು ವರ್ಷಗಳಿಂದ ದೇಶಾದ್ಯಂತ ಎಲ್ಲ ವರ್ಗದ ಜನರಿಗೆ ಶಿಕ್ಷಣದ ಸೌಲಭ್ಯವನ್ನು ಕಲ್ಪಿಸಿದ್ದರಿಂದ ವಿದ್ಯಾರ್ಜನೆ ಪಡೆದುಕೊಂಡ ಲಕ್ಷಾಂತರ ಯುವಕರು ತಮ್ಮ ಬದುಕಿನಲ್ಲಿ ಶಾಶ್ವತವಾಗಿ ಅನ್ನದ ಮಾರ್ಗವನ್ನು ಕಂಡುಕೊಂಡಿದ್ದಾರೆ. ಲಿಂಗಾಯತ ಪಂಚಮಸಾಲಿ ಯಾವಾಗಲೂ ಸಹಾಯಹಸ್ತ ನೀಡುವವರೆ ಹೊರತು ಕೈಚಾಚುವರಲ್ಲ ಎನ್ನಲು ಹೆಮ್ಮೆಯಾಗುತ್ತದೆ ಎಂದರು.

click me!