ಬೀದರ್: ಕಲುಷಿತ ನೀರಿಗೆ ಜನ ಅಸ್ವಸ್ತ: ಕರ​ಕ್ಯಾಳ ಗ್ರಾಮ​ಕ್ಕೆ ಸಚಿವ ಖಂಡ್ರೆ ಭೇಟಿ

By Kannadaprabha News  |  First Published Jun 23, 2023, 5:31 AM IST

ಔರಾದ್‌ ತಾಲೂ​ಕಿನ ಕರಕ್ಯಾಳ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಜನರು ಅಸ್ವಸ್ತರಾಗಿರುವುದು ವಿಷಾಧನೀಯ ಸಂಗತಿಯಾಗಿದ್ದು, ಇಂಥ ಘಟನೆಗಳು ಮರುಕಳಿಸಬಾರದು ಮತ್ತು ಶುದ್ಧ ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಬೇಕೆಂದು ಅರಣ್ಯ, ಪರಿಸರ ಮತ್ತು ಜೀವನ ಶಾಸ್ತ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಖಂಡ್ರೆ ಸೂಚಿ​ಸಿ​ದರು.


ಬೀದ​ರ್‌ (ಜೂ.23) : ಔರಾದ್‌ ತಾಲೂ​ಕಿನ ಕರಕ್ಯಾಳ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಜನರು ಅಸ್ವಸ್ತರಾಗಿರುವುದು ವಿಷಾಧನೀಯ ಸಂಗತಿಯಾಗಿದ್ದು, ಇಂಥ ಘಟನೆಗಳು ಮರುಕಳಿಸಬಾರದು ಮತ್ತು ಶುದ್ಧ ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಬೇಕೆಂದು ಅರಣ್ಯ, ಪರಿಸರ ಮತ್ತು ಜೀವನ ಶಾಸ್ತ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಖಂಡ್ರೆ ಸೂಚಿ​ಸಿ​ದರು.

ಅವರು ಗುರುವಾರ ಕಲುಷಿತ ನೀರು ಸೇವಿಸಿ ಅಸ್ವಸ್ಥರಾದ ಔರಾದ್‌ ತಾಲೂಕಿನ ಕರಕ್ಯಾಳ ಗ್ರಾಮದ ಶಿವಾಜಿ ತೊಂಬುರಲೆ ಅವರ ಮನೆಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿದ ನಂತರ ಅಧಿಕಾರಿಗಳೊಂದಿಗೆ ಮಾತನಾಡಿದರು.

Tap to resize

Latest Videos

undefined

ಸಿದ್ದರಾಮಯ್ಯ ಸಿಎಂ ಎಂದು ಗುರು​ತಿಸಿ, ‘ಮೋದಿ’ಗೆ ರಾಷ್ಟ್ರ​ಪತಿ ಎಂದ ಮಕ್ಕ​ಳು!

ಜಿಪಂ ಸಿಇಒ. ತಾಪಂ ಇಒ, ಪಿಡಿಒ, ತಹಸೀಲ್ದಾರ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ಕಲುಷಿತ ನೀರಿಗೆ ಏನು ಕಾರಣ, ಕೊಳ​ವೆ​ಬಾ​ವಿಯ ನೀರಿನಿಂದ ಆಗಿದೆಯೇ ಅಥವಾ ಪೈಪ್‌ಲೈನ್‌ ಒಡೆ​ದು ​ನೀರು ಕಲುಷಿತವಾಗಿದೆಯೇ ಎಂಬುವದನ್ನು ಪರಿಶೀಲಿಸಿ ಇದನ್ನು ಸರಿಪಡಿಸಿ ಮುಂದೆ ಇಂತಹ ಘಟನೆ ಮರುಕಳಿಸಬಾರದು, ಒಂದು ವೇಳೆ ಹಾಗೇನಾದರೂ ಆದರೆ ಸಂಬಂಧಿಸಿದ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದರು.

ಈಗಾಗಲೇ ಈ ಗ್ರಾಮದಲ್ಲಿ 25 ಜನರು ಅಸ್ವಸ್ಥರಾಗಿದ್ದು, ಎಲ್ಲರೂ ಗುಣಮುಖರಾಗಿದ್ದಾರೆ. ಒಬ್ಬರು ಮಾತ್ರ ಆಸ್ಪತ್ರೆಯಲ್ಲಿದ್ದಾರೆ. ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಕಲುಷಿತ ನೀರು ಸೇವನೆಯಿಂದ ಜನರು ಸಾವನ್ನಪ್ಪಿದ್ದು, ಇಂತಹ ಘಟನೆಗಳು ನಮ್ಮ ಜಿಲ್ಲೆಯಲ್ಲಿ ನಡೆಯಬಾರದು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸ್ವಚ್ಛತೆ ಕಡೆಗೆ ಸಾರ್ವಜನಿಕರು ಗಮನ ಕೊಡಬೇಕು. ಸರ್ಕಾರ ಮಾಡುವುದು ಮಾತ್ರವಲ್ಲ, ನಾವು ಜಾಗೃತರಾದಾಗ ಮಾತ್ರ ಸ್ವಚ್ಛತೆಯ ಅರಿವು ನಮ್ಮಲ್ಲಿ ಬರುತ್ತದೆ. ಚರಂಡಿ ಎಲ್ಲಿ ಮಾಡಬೇಕು, ಕೊ​ಳ​ವೆ​ಬಾವಿ ಎಲ್ಲಿ ಹಾಕಬೇಕು ಎಂಬುವು​ದ​ರ ಯೋಜನೆ ರೂಪಿಸಿ ಕೆಲಸ ಮಾಡಬೇಕು. ಕಲುಷಿತ ಇರುವಲ್ಲಿ ಹಾಕಿದರೆ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಎಚ್ಚ​ರಿ​ಸಿ​ದ​ರು.

ಕರಕ್ಯಾಳ ಗ್ರಾಮದಲ್ಲಿ ಆದ ಘಟನೆಗೆ ನಮ್ಮ ಅಧಿಕಾರಿಗಳು ತಕ್ಷಣ ಸ್ಪಂದನೆ ಮಾಡಿದ್ದರಿಂದ ಯಾವುದೇ ಜೀವ ಹಾನಿಯಾಗಿಲ್ಲ. ಈ ಸಂದೇಶ ಜಿಲ್ಲೆಯಾದ್ಯಂತ ಹೋಗಬೇಕು. ನಮ್ಮ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಸ್ವಚ್ಛ ಊರು, ಸ್ವಚ್ಛ ನೀರು ನಮ್ಮದಾಗಬೇಕು ಎಂದು ಸಚಿ​ವರು ತಿಳಿ​ಸಿ​ದ​ರು.

ಕಾಂಗ್ರೆಸ್‌ ಗ್ಯಾರಂಟಿ ಜಾರಿಯಿಂದ ಬಿಜೆಪಿಗೆ ನಡುಕ: ಸಚಿವ ಈಶ್ವರ ಖಂಡ್ರೆ

ಈ ಸಂದರ್ಭದಲ್ಲಿ ವಿಧಾನಪರಿಷತ್‌ ಸದಸ್ಯ ಅರವಿಂದಕುಮಾರ ಅರಳಿ, ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿ.ಪಂ ಸಿಇಒ ಶಿಲ್ಪಾ ಎಂ., ಎಸ್‌ಪಿ ಚನ್ನಬಸವಣ್ಣ ಎಸ್‌ಎಲ…, ಔರಾದ್‌ ತಹ​ಸೀಲ್ದಾರ ಮಲ್ಲಿಕಾರ್ಜುನ, ಭೀಮಸೇನರಾ​ವ್‌ ಶಿಂಧೆ ತಾಲೂಕು ಆರೋಗ್ಯ ಅಧಿಕಾರಿ ಗಾಯತ್ರಿ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

click me!