ಸಿದ್ದುವನ್ನು ತಾಲಿಬಾನ್‌ಗೆ ಕಳುಹಿಸಿ : ಬಿಜೆಪಿ ಮುಖಂಡ

By Kannadaprabha NewsFirst Published Oct 24, 2021, 10:26 AM IST
Highlights
  • ಆಡಳಿತ ಪಕ್ಷದಷ್ಟೇ ಜವಾಬ್ದಾರಿ ವಿರೋಧ ಪಕ್ಷಕ್ಕೂ ಇರುತ್ತದೆ
  •  ಪ್ರತಿಪಕ್ಷದ ನಾಯಕನಿಗೆ ಬಹಳ ತಾಳ್ಮೆ ಇರಬೇಕು
  • ಸಂಸದ ವಿ.ಶ್ರೀನಿವಾಸಪ್ರಸಾದ್‌ ಆಕ್ರೋಶ 

ಮೈಸೂರು (ಅ.24): ಆಡಳಿತ ಪಕ್ಷದಷ್ಟೇ ಜವಾಬ್ದಾರಿ ವಿರೋಧ ಪಕ್ಷಕ್ಕೂ ಇರುತ್ತದೆ. ಪ್ರತಿಪಕ್ಷದ ನಾಯಕನಿಗೆ ಬಹಳ ತಾಳ್ಮೆ ಇರಬೇಕು. ಆದರೆ ಉದ್ವೇಗದಿಂದ ವಿವೇಚನೆ ಕಳೆದುಕೊಂಡು ಮಾತನಾಡುವ ಸಿದ್ದರಾಮಯ್ಯ (Siddaramaiah) ಅವರನ್ನು ತಾಲಿಬಾನ್‌ಗೆ ಕಳುಹಿಸಿಕೊಡಬೇಕು ಎಂದು ಸಂಸದ ವಿ.ಶ್ರೀನಿವಾಸಪ್ರಸಾದ್‌ (Shrinivas Prasad) ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಬಿಜೆಪಿ (BJP) ಆಡಳಿತವನ್ನು ಸಿದ್ದರಾಮಯ್ಯ ಅವರು ತಾಲಿಬಾನಿಗೆ ಹೋಲಿಸಿರುವುದಕ್ಕೆ ನಗರದಲ್ಲಿ ಶನಿವಾರ ಸುದ್ದಿಗಾರರ ಪ್ರಶಸ್ತಿಗಳಿಗೆ ಪ್ರತಿಕ್ರಿಯಿಸಿ. ತಾಲಿಬಾನ್‌ (Taliban) ಬಗ್ಗೆ ಮಾತನಾಡುವುದು ಸರಿಯಲ್ಲ. 

ಇಡೀ ರಾಷ್ಟ್ರದಲ್ಲಿ ಯಾರೂ ಮಾತನಾಡುವುದಿಲ್ಲ. ನನ್ನ ಮನಸ್ಸಿಗೆ ಬಹಳ ನೋವಾಗುತ್ತದೆ. ಈ ಸಂಬಂಧ ಕೇಂದ್ರ ಸರ್ಕಾರಕ್ಕೆ (Central Govt) ಮನವಿ ಮಾಡುತ್ತೇನೆ. ಒಂದು ತಿಂಗಳು ಸಿದ್ದರಾಮಯ್ಯರನ್ನು (Siddaramaih) ತಾಲಿಬಾನ್‌ಗೆ (Taliban) ಕಳುಹಿಸಿ ಕೊಡಿ. ಅಷ್ಘಾನಿಸ್ತಾನದಲ್ಲಿ ತಾಲಿಬಾನ್‌ ಪರಿಸ್ಥಿತಿ ನೋಡಿ ಆನಂತರ ಮಾತನಾಡಲಿ. ಇದು ಮಾತನಾಡುವ ಸಮಯ ಅಲ್ಲ ಎಂದು ಅವರು ಹೇಳಿದರು.

ಅನೇಕ ಭಾಗ್ಯಗಳನ್ನು ನೀಡಿದ್ದೆ, ಬಿಜೆಪಿ ಎಲ್ಲ ಕಸಿಯಿತು: ಸಿದ್ದರಾಮಯ್ಯ

ಸಿದ್ದರಾಮಯ್ಯ ಉದ್ವೇಗದಿಂದ ವಿವೇಚನೆ ಕಳೆದುಕೊಂಡು ಮಾತನಾಡುತ್ತಿದ್ದಾರೆ. ವಿರೋಧ ಪಕ್ಷದ ನಾಯಕನ ಭಾಷಣವನ್ನು ಯಾರಾದರೂ ಕೇಳಿಸಿಕೊಂಡಿದ್ದೀರಾ? ಅದನ್ನು ಯಾರಾದರೂ ಸಹಿಸುತ್ತಾರೆಯೇ? ಅವರ ಮಾತಿನಿಂದ ಆಡಳಿತ ಪಕ್ಷದವರೂ ತಾಳ್ಮೆ ಕಳೆದುಕೊಳ್ಳುತ್ತಾರೆ ಎಂದರು.

ಪ್ರತಿ ಪಕ್ಷದ ನಾಯಕ ತನ್ನ ಜವಾಬ್ದಾರಿ ಅರಿತು ಸರ್ಕಾರದ ವೈಫಲ್ಯವನ್ನು ಎತ್ತಿ ತೋರಿಸುವ ಪ್ರಯತ್ನವನ್ನು ಸರಿಯಾಗಿ ಮಾಡಬೇಕು. ಅದನ್ನು ಬಿಟ್ಟು ಅವಹೇಳನಕಾರಿಯಾಗಿ ಮಾತನಾಡುವುದು, ಪ್ರಧಾನ ಮಂತ್ರಿಗಳ ಬಗ್ಗೆ ಏಕವಚನದಲ್ಲಿ ಮಾತನಾಡುವುದು ಎಷ್ಟುಸರಿ?

ಸಿದ್ದರಾಮಯ್ಯ ವಿರುದ್ಧ ಅಸಮಾಧಾನ : 

ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳ(Irrigation Projects in North Karnataka) ವಿಚಾರವಾಗಿ ಕಾಂಗ್ರೆಸ್ಸಿಗರು(Congress) ಎ, ಬಿ ಸ್ಕೀಮ್‌ ಎಂದು ಕಳೆದ 40 ವರ್ಷಗಳಿಂದ ಸುಳ್ಳು ಹೇಳುತ್ತಾ ಜನರಿಗೆ ಮೋಸ ಮಾಡಿದ್ದಾರೆ. ಆದರೆ ಉತ್ತರ ಕರ್ನಾಟಕ ಅಭಿವೃದ್ಧಿಗೆ(Development Of Uttara Karnataka) ನಮ್ಮ ಯೋಜನೆಗಳು ಸಾಕ್ಷಿಯಾಗಿವೆ. ಕೆರೆ ತುಂಬಿಸುವ ಯೋಜನೆ ವಿಜಯಪುರ ಜಿಲ್ಲೆಯಿಂದಲೇ ಪ್ರಾರಂಭವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(CM Badsavaraj Bommai) ತಿರುಗೇಟು ನೀಡಿದ್ದಾರೆ.

ಬೈ ಎಲೆಕ್ಷನ್ ಅಖಾಡದಲ್ಲಿ 'ಜನನಾಯಕರ' ಬಾಯಲ್ಲಿ ಹಳಿ ತಪ್ಪಿದ ಮಾತುಗಳು!

ವಿಜಯಪುರ ಜಿಲ್ಲೆಯ ಆಲಮೇಲದ ಎ.ಕೆ.ನಂದ ಕಾಲೇಜು ಆವರಣದಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ್‌ ಭೂಸನೂರು ಪರವಾಗಿ ಆಯೋಜಿಸಿದ್ದ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳ ವಿಚಾರವಾಗಿ ಪ್ರತಿಪಕ್ಷ ಕಾಂಗ್ರೆಸ್‌ ಅನ್ನು ತೀವ್ರವಾಗಿ ಟೀಕಿಸಿದರು. ಈ ವೇಳೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಅವರನ್ನೂ ತರಾಟೆಗೆ ತೆಗೆದುಕೊಂಡರು. ಕೃಷ್ಣೆ ವಿಚಾರವಾಗಿ ಆಣೆ ಮಾಡಿ ಮಾತು ತಪ್ಪಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇದೀಗ ಪ್ರಧಾನಿ ಮೋದಿ(PM Narendra Modi) ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ ಎಂದು ದೂರಿದರು.

ಮುಳವಾಡ, ರೇವಣಸಿದ್ದ ಏತ ನೀರಾವರಿ ಸೇರಿದಂತೆ ಇತರೆ ನೀರಾವರಿ ಯೋಜನೆಗಳಿಗೆ ನಾನು ನೀರಾವರಿ ಮಂತ್ರಿ ಆಗಿದ್ದಾಗ ಅನುದಾನ ಮಂಜೂರು ಮಾಡಿದ್ದೇನೆ. ಕಾಂಗ್ರೆಸ್‌ನವರು ಎ, ಬಿ ಸ್ಕೀಮ್ ಎಂದು 40 ವರ್ಷಗಳಿಂದ ಬರೀ ಸುಳ್ಳು ಹೇಳುತ್ತಾ ಜನರಿಗೆ ಮೋಸ ಮಾಡಿದ್ದಾರೆ ಎಂದರು.

click me!