17 ಜನರಿಗೆ ಕೊರೋನಾ ಸೋಂಕು: ಸುರಪುರ ಬಸ್‌ ಡಿಪೋ ಸೀಲ್‌ಡೌನ್‌

Published : Jul 06, 2020, 10:51 AM IST
17 ಜನರಿಗೆ ಕೊರೋನಾ ಸೋಂಕು: ಸುರಪುರ ಬಸ್‌ ಡಿಪೋ ಸೀಲ್‌ಡೌನ್‌

ಸಾರಾಂಶ

7 ಜನ ಸಿಬ್ಬಂದಿಗಳಿಗೆ ಕೊರೋನಾ ಸೋಂಕು| ಯಾದಗಿರಿ ಜಿಲ್ಲೆಯ ಸುರಪುರ ಬಸ್‌ ಡಿಪೋವನ್ನು ಸೀಲ್‌ಡೌನ್‌| ಆರೋಗ್ಯ ಕೇಂದ್ರದಲ್ಲಿ ಶುಶ್ರೂಶಕಿಯಾಗಿರುವ ಪತ್ನಿಯಿಂದಾಗಿ ಸುರಪುರದ ಘಟಕದಲ್ಲಿ ಕೆಲಸ ನಿರ್ವಹಿಸುತ್ತಿರುವ ನಿರ್ವಾಹಕ 7 ಜನರಿಗೆ ಸೋಂಕು|

ಯಾದಗಿರಿ(ಜು.06): ಚಾಲಕ ಕಂ. ನಿರ್ವಾಹಕರು ಸೇರಿದಂತೆ 7 ಜನ ಸಿಬ್ಬಂದಿಗಳಿಗೆ ಕೊರೋನಾ ಸೋಂಕು ದೃಢಪಟ್ಟಿದ್ದರಿಂದ ಜಿಲ್ಲೆಯ ಸುರಪುರ ಬಸ್‌ ಡಿಪೋವನ್ನು ಸೀಲ್‌ಡೌನ್‌ ಮಾಡಲಾಗಿದೆ.

ಸೋಂಕು ತಗುಲಿದ್ದ ನಿರ್ವಾಹಕರೊಬ್ಬರ ಪ್ರಾಥಮಿಕ ಸಂಪರ್ಕಕ್ಕೆ ಇವರೆಲ್ಲ ಬಂದಿದ್ದರು. ಆರೋಗ್ಯ ಕೇಂದ್ರದಲ್ಲಿ ಶುಶ್ರೂಶಕಿಯಾಗಿರುವ ಪತ್ನಿಯಿಂದಾಗಿ ಸುರಪುರದ ಘಟಕದಲ್ಲಿ ಕೆಲಸ ನಿರ್ವಹಿಸುತ್ತಿರುವ ನಿರ್ವಾಹಕ (ಪಿ-8228) ಅವರಿಗೆ ಸೋಂಕು ತಗುಲಿದೆ.

ಕೊರೋನಾಗೆ ಬಲಿ: ಯಾದಗಿರಿಯಲ್ಲೂ ಅಮಾನವೀಯ ಅಂತ್ಯಸಂಸ್ಕಾರ..! 

ಈಗ ಇವರ ಕುಟುಂಬದ 10 ಜನರು ಹಾಗೂ ಸಾರಿಗೆ ಸಂಸ್ಥೆಯ 7 ಸಿಬ್ಬಂದಿಗಳು ಸೇರಿದಂತೆ 17 ಜನರಲ್ಲಿ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ, ಬಸ್‌ ಡಿಪೋವನ್ನು ಸ್ಯಾನಿಟೈಸ್‌ ಮಾಡಲಾಗಿದ್ದು, ಸಂಚಾರ ಸ್ಥಗಿತಗೊಳಿಸಲಾಗಿದೆ. ಸೋಮವಾರದಿಂದ ಶಹಾಪುರ ಡಿಪೋ ಮೂಲಕ ಬಸ್‌ಗಳು ಸಂಚರಿಸಲಿದ್ದು, ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ಡಿಟಿಓ ರಮೇಶ್‌ ಪಾಟೀಲ್‌ ತಿಳಿಸಿದ್ದಾರೆ.
 

PREV
click me!

Recommended Stories

ತಹಸೀಲ್ದಾರ್ ಅವಮಾನಿಸಿದ ಶಾಸಕ ಬೇಳೂರು ಗೋಪಾಲಕೃಷ್ಣ ನಡೆಗೆ ಮಾಜಿ ಸಚಿವ ಹರತಾಳು ಹಾಲಪ್ಪ ಆಕ್ರೋಶ!
Shivamogga: ದುರ್ಯೋಧನನ ರೀತಿ ಸರೋವರದಲ್ಲಿ ಅಡಗಿಕೊಳ್ಳಲು ಯತ್ನಿಸಿದ ಕ್ರಿಮಿನಲ್‌ನನ್ನು ಬಂಧಿಸಿದ ಭದ್ರಾವತಿ ಪೊಲೀಸ್‌