ನದಿ ದಂಡೆಯಲ್ಲಿರುವ ಸಾರ್ವಜನಿಕರು ನದಿಯ ದಡದಲ್ಲಿ ಹೋಗದಂತೆ ಮತ್ತು ಜಾನುವಾರುಗಳನ್ನು ಬಿಡದಂತೆ ಎಚ್ಚರಿಕೆ ವಹಿಸಲು ಸೂಚನೆ| ಸೊನ್ನ ಬ್ರಿಡ್ಜ್ ಕಂ. ಬ್ಯಾರೇಜಿನ ಕೆಳಗಡೆ ನದಿ ಪಾತ್ರದಲ್ಲಿ ಬರುವ ಬ್ರಿಡ್ಜ್ ಕಂ ಬ್ಯಾರೇಜ್‌ಗಳು ಸಹ ಸುಸ್ಥಿತಿಯಲ್ಲಿಡುವಂತೆ ತಿಳಿಸಿದ ಭೀಮಾ ಏತ ನೀರಾವರಿ ಯೋಜನೆಯ ಕಾರ್ಯಪಾಲಕ ಅಭಿಯಂತ ಅಶೋಕ ಕಲಾಲ್|
ಕಲಬುರಗಿ(ಜು.06): ಕರ್ನಾಟಕ ಮತ್ತು ಮಹಾರಾಷ್ಟ್ರದ ಭೀಮಾ ಜಲಾನಯನ ಪ್ರದೇಶದಲ್ಲಿ ನಿರಂತರ ಮಳೆಯಾಗುತ್ತಿರುವ ಕಾರಣ ಅಫಜಲ್ಪುರ ತಾಲೂಕಿನ ಸೊನ್ನ ಬ್ಯಾರೇಜಿಗೆ ನೀರಿನ ಒಳ ಪ್ರವಾಹ ಹೆಚ್ಚಿದ್ದು, ಯಾವುದೇ ಕ್ಷಣದಲ್ಲಿ ಭೀಮಾ ನದಿಗೆ ಗೇಟ್ ಮೂಲಕ ನೀರು ಹರಿಬಿಡುವ ಸಾಧ್ಯತೆಯಿದೆ.
ಹೀಗಾಗಿ ನದಿ ದಂಡೆಯಲ್ಲಿರುವ ಸಾರ್ವಜನಿಕರು ನದಿಯ ದಡದಲ್ಲಿ ಹೋಗದಂತೆ ಮತ್ತು ಜಾನುವಾರುಗಳನ್ನು ಬಿಡದಂತೆ ಎಚ್ಚರಿಕೆ ವಹಿಸಬೇಕು ಎಂದು ಭೀಮಾ ಏತ ನೀರಾವರಿ ಯೋಜನೆಯ ಕಾರ್ಯಪಾಲಕ ಅಭಿಯಂತ ಅಶೋಕ ಕಲಾಲ್ ತಿಳಿಸಿದ್ದಾರೆ. ಸೊನ್ನ ಬ್ರಿಡ್ಜ್ ಕಂ. ಬ್ಯಾರೇಜಿನ ಕೆಳಗಡೆ ನದಿ ಪಾತ್ರದಲ್ಲಿ ಬರುವ ಬ್ರಿಡ್ಜ್ ಕಂ ಬ್ಯಾರೇಜ್‌ಗಳು ಸಹ ಸುಸ್ಥಿತಿಯಲ್ಲಿಡುವಂತೆ ಅವರು ತಿಳಿಸಿದ್ದಾರೆ.
ಜೇವರ್ಗಿ: ಒಂದೇ ಕುಟುಂಬದ 12 ಜನರಿಗೆ ಕೊರೋನಾ, ಬೆಚ್ಚಿಬಿದ್ದ ಗ್ರಾಮಸ್ಥರು..!
ಬ್ಯಾರೇಜ್ ವ್ಯಾಪ್ತಿಯ ಅಳ್ಳಗಿ(ಬಿ) ಮತ್ತು ಬಳ್ಳೂಂಡಗಿ ಏತ ನೀರಾವರಿಯ ಮುಖ್ಯ ಕಾಲುವೆ ಮತ್ತು ಉಪ ಕಾಲುವೆಗಳಿಗೆ ನೀರು ಹರಿಸಲಾಗುತ್ತಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅಶೋಕ್ ಕಲಾಲ್ ಅವರು ಪ್ರದೇಶದ ರೈತರಲ್ಲಿ ಮನವಿ ಮಾಡಿಕೊಂಡಿದ್ದಾರೆ.