ತಂಬಾಕು ಮಾರಾಟ ಅಂಗಡಿಗಳ ಮೇಲೆ ದಾಳಿ: 48 ಪ್ರಕರಣ ದಾಖಲು

By Kannadaprabha News  |  First Published Jul 26, 2019, 12:39 PM IST

ಅಂಗಡಿಗಳಲ್ಲಿ ತಂಬಾಕು ಉತ್ಪನ್ನ ಮಾರಾಟ ಮಾಡಬಾರದು ಎಂಬ ನಿಯಮವಿದ್ದರೂ ಅಕ್ರಮವಾಗಿ ಮಾರಾಟ ನಡೆಯುತ್ತಲೇ ಇರುತ್ತದೆ. ಚಿಕ್ಕಮಗಳೂರಿನ ಕೊಪ್ಪದ ಅಧಿಕಾರಿಗಳು ತಂಬಾಕು ಮಾರಾಟ ಮಾಡುವ ಅಂಗಡಿಗಳಿಗೆ ದಿಢೀರ್ ಭೇಟಿ ನೀಡಿ ಉತ್ಪನ್ನ ವಶಪಡಿಸಿಕೊಂಡಿದ್ದಾರೆ. ಹಾಗೆಯೇ ಪ್ರಕರಣಗಳನ್ನೂ ದಾಖಲಿಸಿಕೊಂಡಿದ್ದಾರೆ.


ಚಿಕ್ಕಮಗಳೂರು(ಜು.26): ಕೊಪ್ಪದಲ್ಲಿ ತಂಬಾಕು ಉತ್ಪನ್ನ ಮಾರಾಟ ಮಾಡುವ ಅಂಗಡಿಗಳಿಗೆ ಗುರುವಾರ ಕೊಪ್ಟಾಕಾಯಿದೆಯಡಿ ಅಧಿಕಾರಿಗಳು ದಾಳಿ ನಡೆಸಿ, ನಿಮಯ ಉಲ್ಲಂಘಟನೆ ಆರೋಪದಡಿ ಉತ್ಪನ್ನಗಳನ್ನು ವಶಪಡಿಸಿಕೊಂಡು ದಂಡ ವಿಧಿಸಿದ್ದಾರೆ.ಪ್ರಕರಣ

48 ಪ್ರಕರಣ ದಾಖಲು:

Latest Videos

ಸಾರ್ವಜನಿಕ ಸ್ಥಳಗಳಲ್ಲಿ ಮುಕ್ತವಾಗಿ ತಂಬಾಕು ಉತ್ಪನ್ನಗಳ ಮಾರಾಟ ಮತ್ತು ಉಪಯೋಗಿಸುವುದನ್ನು ಕಾಯಿದೆಯಡಿ ನಿಷೇಧಿಸಲಾಗಿದೆ. ಕೊಪ್ಪ ದಂಡಾಧಿಕಾರಿಗಳ ಕಚೇರಿಯಿಂದ ಬಾಳಗಡಿ ರಸ್ತೆ, ಸಾರ್ವಜನಿಕ ಆಸ್ಪತ್ರೆ, ಎಂ.ಎಸ್‌.ಡಿ. ಸರ್ಕಲ್‌, ಬಸ್‌ ನಿಲ್ದಾಣ, ಮಾರ್ಕೆಟ್‌ ರಸ್ತೆ, ಮೇಲಿನಪೇಟೆ, ತೀರ್ಥಹಳ್ಳಿ ರಸ್ತೆ ಮತ್ತು ಕೊಪ್ಪ ಗ್ರಾಮಾಂತರ ವ್ಯಾಪ್ತಿಗಳಲ್ಲಿ ಆಸ್ಪತ್ರೆ, ಶಾಲಾ- ಕಾಲೇಜುಗಳು, ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ದಾಳಿ ನಡೆಸಿದ ಅಧಿಕಾರಿಗಳ ತಂಡ ತಂಬಾಕು ಉತ್ಪನ್ನವನ್ನು ಮಾರಾಟ ಮಾಡುತ್ತಿದ್ದ ಸುಮಾರು 48 ಪ್ರಕರಣಗಳನ್ನು ದಾಖಲಿಸಿದೆ.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

undefined

ಚಿಕ್ಕಮಗಳೂರು ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಅಧಿಕಾರಿಗಳೊಂದಿಗೆ ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು ಸೇರಿ ದಾಳಿಯಲ್ಲಿ ಭಾಗವಹಿಸಿದ್ದರು.

ಭರ್ಜರಿ ಕಾರ್ಯಾಚರಣೆ: ಲಕ್ಷಾಂತರ ಮೌಲ್ಯದ ಸಿ.ಎಚ್. ಪೌಡರ್ ಜಪ್ತಿ

ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಲಹೆಗಾರ ದಿನೇಶ್‌ ಆರ್‌., ರಾಘವೇಂದ್ರ ಎಂ., ಸಾರ್ವಜನಿಕ ಶಿಕ್ಷಣ ಇಲಾಖೆಯ ಡಿಡಿಪಿಐ ಪತ್ತರ್‌, ಕೊಪ್ಪ ಬಿಇಓ ಗಣಪತಿ, ಕೊಪ್ಪ ತಹಸೀಲ್ದಾರ್‌ ಎರ್ರಿಸ್ವಾಮಿ, ಪಿಎಸ್‌ಐ ಪುಟ್ಟೇಗೌಡ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಲಿಸ್ಸಿ, ತಾಲೂಕು ಆರೋಗ್ಯ ಇಲಾಖೆಯ ಸಿಬ್ಬಂದಿ ಪಾಲ್ಗೊಂಡಿದ್ದರು.

click me!