ಕೊಪ್ಪಳ: 200 ಬಡ ಹೆಣ್ಣುಮಕ್ಕಳ ಖಾತೆ ತೆರೆದು ಮಾದರಿಯಾದ ಅಂಚೆಪಾಲಕ

By Kannadaprabha News  |  First Published Feb 16, 2023, 12:43 PM IST

ಅಂಚೆ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾಗುವ ವೇಳೆ ಸುಕನ್ಯಾ ಸಮೃದ್ಧಿ ಯೋಜನೆ ಅಡಿ 200 ಬಡ ಹೆಣ್ಣುಮಕ್ಕಳ ಖಾತೆ ತೆರೆಯುವ ಮೂಲಕ ಮಾದರಿಯಾಗಿದ್ದಾರೆ. ಉಪ ಅಂಚೆಪಾಲಕ ಯಲ್ಲಪ್ಪ ಕೋಳೂರು


ಕೊಪ್ಪಳ (ಫೆ.16) : ಅಂಚೆ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾಗುವ ವೇಳೆ ಸುಕನ್ಯಾ ಸಮೃದ್ಧಿ ಯೋಜನೆ(Sukanya Samriddhi Yojana) ಅಡಿ 200 ಬಡ ಹೆಣ್ಣುಮಕ್ಕಳ ಖಾತೆ ತೆರೆಯುವ ಮೂಲಕ ಮಾದರಿಯಾಗಿದ್ದಾರೆ.

ಅಂಚೆ ಇಲಾಖೆಯಿಂದ ಮಾರ್ಚ್‌ನಲ್ಲಿ ನಿವೃತ್ತರಾಗಲಿರುವ ಉಪ ಅಂಚೆಪಾಲಕ ಯಲ್ಲಪ್ಪ ಕೋಳೂರು(Yallappa Koluru) ಅವರು ತಮ್ಮ ನಿವೃತ್ತಿಯ ಸಮಾರಂಭವನ್ನು ವಿಶೇಷವಾಗಿ ಆಚರಿಸಿಕೊಳ್ಳಲಿದ್ದಾರೆ.

Tap to resize

Latest Videos

undefined

ನಿವೃತ್ತಿಯ ಹಣದಿಂದ 200 ಬಡ ಹೆಣ್ಣುಮಕ್ಕಳಿಗೆ ಸುಕನ್ಯಾ ಸಮೃದ್ಧಿ ಖಾತೆಗಳಿಗೆ ಹಣ ಹಾಕುವ ಮೂಲಕ ಔದಾರ್ಯ ಮೆರೆದಿದ್ದಾರೆ. .50000 ಸಾವಿರ ದೇಣಿಗೆ ನೀಡುವ ಮೂಲಕ ಕೊಪ್ಪಳದ 200 ಹೆಣ್ಣುಮಕ್ಕಳ ಸುಕನ್ಯಾ ಸಮೃದ್ಧಿ ಖಾತೆ ತೆರೆಯಲು ಅನುವು ಮಾಡಿಕೊಟ್ಟಿದ್ದಾರೆ.

Pocso case: ಅಪ್ರಾಪ್ತೆಗೆ ಮಗು ಜನನ; ತಲೆಮರೆಸಿಕೊಂಡಿದ್ದ ಆರೋಪಿ ಬಂಧನ 

ತಳಸಮುದಾಯದ ಬವಣೆ ಅನುಭವಿಸುತ್ತ ಬೆಳೆದ ಕೋಳೂರು ಅವರಿಗೆ ದೀನ​- ದಲಿತರ ಬಗ್ಗೆ ವಿಶೇಷ ಕಾಳಜಿ ಇದೆ. ಅದಕ್ಕಾಗಿ ನಿವೃತ್ತಿಯ ಹಣವನ್ನು ಮೋಜು ಮಸ್ತಿಗಾಗಿ ಹಾಳು ಮಾಡದೆ ಬಡಮಕ್ಕಳಿಗೆ ವಿನಿಯೋಗಿಸಿದ್ದು ಮೆಚ್ಚುಗೆಗೆ ಪಾತ್ರವಾಗಿದೆ. ಅವರ ಈ ಸೇವೆಯನ್ನು ಭಾರತದ ಡೆಪ್ಯುಟಿ ಡೈರೆಕ್ಟರ್‌ ಜನರಲ್‌ ಅವರು ಶ್ಲಾಘಿಸಿದ್ದಾರೆ. ಇದೊಂದು ಮಾದರಿಯ ನಡೆ ಎಂದು ಕೊಪ್ಪಳದ ಹಿರಿಯ ನಾಗರಿಕರು ಅಭಿಮಾನದಿಂದ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕೋಳೂರು ಅವರು ಈ ದೇಣಿಗೆಯನ್ನು ಇಲಾಖೆಗೆ ಮತ್ತು ಬಡಮಕ್ಕಳಿಗೆ ಒಂದು ಅಳಿಲು ಸೇವೆ ಎಂದಿದ್ದಾರೆ. ಇಲಾಖೆಯು ನನಗೆ ಬದುಕು ಭವಿಷ್ಯವನ್ನು ನೀಡಿದೆ ಎಂದು ಕೃತಜ್ಞತೆಯಿಂದ ಸ್ಮರಿಸಿದ್ದಾರೆ.

ಇದೊಂದು ಮಾದರಿ ನಡೆ. ತಮ್ಮ ನಿವೃತ್ತಿಯ ವೇಳೆಯಲ್ಲಿ ಭರ್ಜರಿ ಪಾರ್ಟಿ ಮಾಡದೆ, ಈ ರೀತಿಯ ಸೇವೆ ಮಾಡುವ ಮೂಲಕ ಹೊಸ ಮಾರ್ಗವನ್ನು ಹಾಕಿಕೊಟ್ಟಿದ್ದಾರೆ.

ರವಿ ಕಾಂತನವರ, ಡಿಪಿಎಂ ಪ್ರಧಾನ ಅಂಚೆ ಕಚೇರಿ, ಕೊಪ್ಪಳ

click me!