ಸಿಎಂ ಸ್ಥಾನದಿಂದ ಬಿಎಸ್‌ವೈ ಬದಲಾವಣೆ : ಪ್ರತಿಕ್ರಿಯಿಸಿಲ್ಲ ಎಂದ ಶೋಭಾ

By Kannadaprabha News  |  First Published Nov 30, 2020, 12:09 PM IST

ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರಕ್ಕೆ  ಸಂಬಂಧಿಸಿದಂತೆ ತಾವು ಯಾವುದೇ ರೀತಿ ಪ್ರತಿಕ್ರಿಯೆ ನೀಡಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. 


ಚಿಕ್ಕಬಳ್ಳಾಪುರ (ನ.30): ನೀರಾವರಿ ಇಲ್ಲದಿದ್ದರೂ  ಹೆಚ್ಚು ಶ್ರಮ ಪಡುವ ರೈತರು  ಅವಿಭಜಿತ ಕೋಲಾರ  ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿದ್ದು ಈ ಭಾಗದ ರೈತರಿಗೆ ಶಾಸ್ವತ ನೀರಾವರಿ ಕಲ್ಪಿಸುವ ನಿಟ್ಟಿನಲ್ಲಿ ಕೃಷ್ಣಾ ನದಿ ನೀರನ್ನು ಈ ಭಾಗಕ್ಕೆ ಹರಿಸುವ ಇಚ್ಛಾಶಕ್ತಿಯನ್ನು ನಾವು ಪ್ರದರ್ಶಿಸಬೇಕಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದರು. 

ಜಿಲ್ಲೆಯ ಬಾಗೆಪಲ್ಲೊ ಚಿಂತಾಮಣಿ ನಗರಗಳಲ್ಲಿ ಹಮ್ಮಿಕೊಂಡಿದ್ದ ಗ್ರಾಮ ಸ್ವರಾಜ್ ಸಮಾವೇಶದಲ್ಲಿ ಭಾಗವಹಿಸಿದ್ದು ಅದಕ್ಕೂ ಮುನ್ನ ಮುದ್ದೇನಹಳ್ಳಿಯಲ್ಲಿರುವ  ಸರ್ ಎಂ ವಿ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿ ಸಮಾವೇಶಕ್ಕೆ ಚಾಲನೆ ನೀಡಿದರು. 

Tap to resize

Latest Videos

ಈ ವೇಳೆ ಮಾತನಾಡಿ ಆಲಮಟ್ಟಿ ಡ್ಯಾಂನಿಂದ ಆಂಧ್ರಕ್ಕೆ ನೀರು ಕೊಟ್ಟು ಜಿಲ್ಲೆಯ ಗಡಿ ಭಾಗದ ಲೇಪಾಕ್ಷಿವರೆಗೂ ಬಂದಿರುವ ಕೃಷ್ಣಾ ನೀರನ್ನು  ಈ ಭಾಗಕ್ಕೆ ಪಡೆಯುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುವ ವಿಶ್ವಾಸವಿದೆ ಎಂದರು.

ಬಿಜೆಪಿಯಲ್ಲಿ ಅಸಮಾಧಾನ; ಪ್ರಶಿಕ್ಷಣ ವರ್ಗ ಪ್ರಶ್ನಿಸಿ ಸಂಘದ ಪ್ರಮುಖರಿಗೆ ಕಾರ್ಯಕರ್ತರ ಪತ್ರ ...

ಪ್ರತಿಕ್ರಿಯೆಗೆ ನಕಾರ : ರಾಜ್ಯದಲ್ಲಿ ಸಿಎಂ ಕುರ್ಚಿ ಬದಲಾವಣೆ ಕುರಿತು ಕೇಳಿ ಬರುತ್ತಿರುವ ಪ್ರಶ್ನೆಗೆ ಯಾವುದೇ ಪ್ರತಿಕ್ರಿಯೆ ಕೊಡದೇ ಸಂಸದೆ ಶೋಭಾ ಕರಂದ್ಲಾಜೆ ನಿರಾಕರಿಸಿದರು. 

ಈ ಕುರಿತು ಏನು ಮಾತನಾಡುವುದಿಲ್ಲ ಎಂದರು :  ಚಿಕ್ಕಬಳ್ಳಾಪುರದ ಆದಿಚುಂಚನಗಿರಿ ಶಾಖಾ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಯಡಿಯೂರಪ್ಪ ರಾಜ್ಯದಲ್ಲಿ  ಬಿಜೆಪಿ ಪಕ್ಷವನ್ನು ಸಂಘಟಿಸಿ ಅಧಿಕಾರಕ್ಕೆ ತಂದಿದ್ದಾರೆ. 

ಅವರ ನೇತೃತ್ವದ ಸರ್ಕಾರ ಜನಪರವಾಗಿ ಆಡಳಿತ ನಡೆಸುತ್ತಿದೆ ಎಂದರು. 

click me!