ಮೈಸೂರು ಡಿಸಿ ರೋಹಿಣಿ ವರ್ಗಾವಣೆ - ಕರ್ತವ್ಯದಿಂದ ವಜಾ?

By Kannadaprabha NewsFirst Published Nov 30, 2020, 10:47 AM IST
Highlights

ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ವಿವಿಧ ಮುಖಂಡರು ಆರೋಪಗಳ ಸುರಿಮಳೆಯನ್ನೇ ಸುರಿಸುತ್ತಿದ್ದಾರೆ. ಇದೀಗ ವರ್ಗಾವಣೆ ವಿಚಾರ ಪ್ರಸ್ತಾಪವಾಗಿದೆ. 

ಮೈಸೂರು (ನ.30): ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಅನಗತ್ಯವಾಗಿ ವಿವಾದ ಸೃಷ್ಟಿಸುತ್ತಿದ್ದಾರೆ.

 ಅವರನ್ನು ಕೂಡಲೇ ಕರ್ತವ್ಯದಿಂದ ವಜಾಗೊಳಿಸಬೇಕು ಅಥವಾ ಮೈಸೂರಿನಿಂದ ವರ್ಗಾಯಿಸಬೇಕು ಎಂದು ಆಲ್‌ ಇಂಡಿಯ ಅಂಜುಮನ್‌ ತರಿಕ್ಯೂ ಉರ್ದುವಿನ ಅಧ್ಯಕ್ಷ ಪ್ರೊ. ಸೈಯದ್‌ ಮಜೂರ್‌ ಅಹಮದ್‌ ಒತ್ತಾಯಿಸಿದ್ದಾರೆ. 

'ರಾಜವಂಶಸ್ಥರ ವಿರುದ್ಧ ಅವಮಾನ ಸಲ್ಲ : ಡಿಸಿ ರೋಹಿಣಿ ಬಗ್ಗೆ ಅಸಭ್ಯ ಪದ ಬಳಕೆ ತಪ್ಪು' ..

ಅಧಿಕಾರ ವಹಿಸಿಕೊಂಡ ದಿನದಿಂದಲೂ ಒಂದಿಲ್ಲೊಂದು ವಿವಾದವನ್ನು ಸೃಷ್ಟಿಸುತ್ತಿದ್ದು, ಶಿಷ್ಟಾಚಾರ ಉಲ್ಲಂಘನೆ ಮಾಡುತ್ತಿರುವುದು ಸರಿಯಲ್ಲ. 

ಅಲ್ಲದೆ ಹಿರಿಯ ಶಾಸಕರಿಗೆ ಗೌರವ ನೀಡುತ್ತಿಲ್ಲ. ಕೊರೋನಾ ಸಂದರ್ಭದಲ್ಲಿಯೂ ಸರಿಯಾಗಿ ತಮ್ಮ ಕರ್ತವ್ಯ ನಿರ್ವಹಿಸದೆ, ಸದಾ ಪ್ರಚಾರದಲ್ಲಿರುತ್ತಾರೆ ಎಂದು ತಿಳಿಸಿದ್ದಾರೆ.

click me!