ಜನರಿಗೆ ಕೇಂದ್ರ,ರಾಜ್ಯ ಸರ್ಕಾರದ ಸಾಧನೆ ತಿಳಿಸಲು ಶೋಭಾ ಕರಂದ್ಲಾಜೆ ಕರೆ

By Kannadaprabha News  |  First Published Jan 13, 2023, 6:39 AM IST

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಾಧನೆಗಳನ್ನು ಬಿಜೆಪಿ ಕಾರ್ಯಕರ್ತರು ಮತದಾರರಿಗೆ ತಿಳಿಸಬೇಕು ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಕರೆ ನೀಡಿದರು.


ನರಸಿಂಹರಾಜಪುರ (ಜ.13) : ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಾಧನೆಗಳನ್ನು ಬಿಜೆಪಿ ಕಾರ್ಯಕರ್ತರು ಮತದಾರರಿಗೆ ತಿಳಿಸಬೇಕು ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಕರೆ ನೀಡಿದರು.

ಬುಧವಾರ ಸಂಜೆ ಸೀತೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮಲ್ಲಂದೂರಿನಲ್ಲಿ ಬಿಜೆಪಿ(BJP) ಬೂತ್‌ ಕಮಿಟಿ ಅಧ್ಯಕ್ಷ ಮಂಜುನಾಥ್‌ ಅವರ ಮನೆಯಲ್ಲಿ ಬೂತ್‌ ವಿಜಯಿ ಅಭಿಯಾನದಲ್ಲಿ ನಾಮ ಫಲಕ ವಿತರಿಸಿ ಮಾತನಾಡಿದರು.ಬೂತ್‌ಗಳನ್ನು ಸಶಕ್ತಗೊಳಿಸುವ ಮೂಲಕ ಬಿಜೆಪಿ ಪಕ್ಷದ ಬಲವರ್ಧನೆಗೆ ಶ್ರಮಿಸಬೇಕು.ಹೊಸದಾಗಿ ಸೇರಬೇಕಾಗಿರುವ ಮತದಾರರು ಯಾರು ಎಂದು ಗುರುತಿಸಿ ಅವರನ್ನು ಸಂಪರ್ಕಿಸಿ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಸರ್ಕಾರದಿಂದ ಆಗಿರುವ ಒಳ್ಳೆಯ ಕೆಲಸಗಳನ್ನುಮತದಾರರಿಗೆ ನೆನಪಿಸಬೇಕು.ದೇಶದ ರಕ್ಷಣೆಗೆ ಬಿಜೆಪಿ ಸರ್ಕಾರ ಹೆಚ್ಚು ಆದ್ಯತೆ ನೀಡುತ್ತಿದೆ.ಸೈನಿಕರಿಗೆ ಕೇಳಿದಷ್ಟುವೇತನ ನೀಡುತ್ತಿದ್ದೇವೆ.ಪ್ರಧಾನಿ ಮೋದಿಯವರು ತಮ್ಮ ಸ್ವಂತಕ್ಕಾಗಿ ಏನನ್ನು ಬಯಸುವುದಿಲ್ಲ ಎಂದರು.

Latest Videos

undefined

ಚೀನಾ ವಶದಲ್ಲಿರುವ ವ್ಯಾಪಾರ ಸ್ಥಾನ ಭಾರತ ಪಡೆಯಬೇಕು: ಸಚಿವೆ ಶೋಭಾ

ಪ್ರಧಾನಿ ಮೋದಿ(PM Narendra Modi)ಯವರು ಯಾವುದೇ ಜಾತಿ, ಧರ್ಮ ಎನ್ನದೆ ತೆರಿಗೆದಾರರನ್ನು ಹೊರತು ಪಡಿಸಿ ಎಲ್ಲಾ ಬಡವರಿಗೆ ಆಯುಷ್ಮಾನ್‌ ಕಾರ್ಡು(Ayushman card), ರೈತ ಸಮ್ಮಾನ ನಿಧಿ(Rata samman nidhi), ರಸ್ತೆ,ರೇಲ್ವೆ ಯೋಜನೆಗಳು ಹಾಗೂ ಅಗ್ಗದ ದರದಲ್ಲಿ ಜನರಿಕ್‌ ಔಷದಿ ನೀಡುತ್ತಿದ್ದಾರೆ. ಪ್ರಧಾನಿ ದಕ್ಷತೆಯಿಂದ ವಿದೇಶಗಳಿಗೆ ಅಕ್ಕಿ ಮತ್ತು ತರಕಾರಿಯನ್ನು ರಪ್ತು ಮಾಡುತ್ತಿದ್ದೇವೆ. ಕೋವಿಡ್‌ ಸಂಕಷ್ಟದಲ್ಲಿ ಭಾರತ ದೇಶದಲ್ಲಿ ಕಂಡು ಹಿಡಿದ ಲಸಿಕೆಯನ್ನು ಅಮೆರಿಕಾದಂತಹ ದೊಡ್ಡ ದೇಶಕ್ಕೆ ರಪ್ತು ಮಾಡಲಾಯಿತು ಎಂದರು.

ಮುಖ್ಯ ಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ.ಎನ್‌.ಜೀವರಾಜ್‌ ಮಾತನಾಡಿ,ಬೂತ್‌ಗಳಲ್ಲಿ ಗೆದ್ದರೆ ಇಡೀ ಕ್ಷೇತ್ರ ಗೆದ್ದಂತೆ.ಪೇಜ್‌ ಪ್ರಮುಖರು ಹಾಗೂ ಎಲ್ಲಾ ಕಾರ್ಯಕರ್ತರು ಒಟ್ಟಾಗಿ ಬಿಜೆಪಿ ಸರ್ಕಾರದ ಸಾಧನೆಯನ್ನು ಜನರಿಗೆ ತಿಳಿಸಬೇಕು.ಗ್ರಾಮದ ಯಾವುದೇ ಸಮಸ್ಯೆ ಇದ್ದರೂ ಅದನ್ನು ಬಗೆಹರಿಸಲು ಪ್ರಯತ್ನ ನಡೆಸುತ್ತೇನೆ ಎಂದು ಭರವಸೆ ನೀಡಿದರು.

ಇದೇ ಸಂದರ್ಭದಲ್ಲಿ ಗ್ರಾಮಸ್ಥರು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಮನವಿ ಸಲ್ಲಿಸಿ, ವಿದ್ಯುತ್‌ ಸಮಸ್ಯೆಯಿಂದಾಗಿ ಬಿಎಸ್‌ಎನ್‌ಎಲ್‌ ನೆಟ್‌ವರ್ಕ್ ಪದೇ,ಪದೇ ಕಡಿತವಾಗುತ್ತಿದೆ. ಆದ್ದರಿಂದ ಮಲ್ಲಂದೂರು ಹಾಗೂ ಕೊನೋಡಿ ಗ್ರಾಮಕ್ಕೆ ಜಿಯೋ ಟವರ್‌ ನಿರ್ಮಿಸಿಕೊಡಿ ಎಂದು ಕೋರಿದರು. ಮಲ್ಲಂದೂರು ಗ್ರಾಮದಲ್ಲಿ ಅರಣ್ಯದಲ್ಲಿ ಮನೆ ಕಟ್ಟಿಸಿಕೊಂಡವರ ಸಮಸ್ಯೆ, ಆಟದ ಮೈದಾನ,ಸ್ಮಶಾನ ಜಾಗದ ಬಗ್ಗೆ ಗ್ರಾಮಸ್ಥರು ಚರ್ಚೆ ನಡೆಸಿದರು.

Udupi: ನರೇಂದ್ರ ಮೋದಿ ಸರ್ಕಾರದ ಹಣ ಸಿದ್ದರಾಮಯ್ಯರದ್ದು ಹೆಸರು: ಶೋಭಾ ಕೆರಂದ್ಲಾಜೆ ಕಿಡಿ

ಸಭೆಯ ಅಧ್ಯಕ್ಷತೆಯನ್ನು ಮಲ್ಲಂದೂರು ಬೂತ್‌ ಅಧ್ಯಕ್ಷ ಮಂಜುನಾಥ್‌ ವಹಿಸಿದ್ದರು. ಸಭೆಯಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ ಅರುಣ್‌ ಕುಮಾರ್‌ ವಹಿಸಿದ್ದರು.ವೇದಿಕೆಯಲ್ಲಿ ಸೀತೂರು ಗ್ರಾಪಂ ಅಧ್ಯಕ್ಷೆ ರೇಖಾ,ಸದಸ್ಯ ಎಚ್‌.ಇ.ದಿವಾಕರ,ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೆಸವಿ ಮಂಜುನಾಥ್‌ ಇದ್ದರು.

click me!