ಆಳಂದ ದರ್ಗಾದಲ್ಲಿ ಒಂದೇ ದಿನ ಶಿವರಾತ್ರಿ, ಉರುಸ್‌ಗೆ ಅನುಮತಿ!

By Kannadaprabha News  |  First Published Feb 15, 2023, 12:18 AM IST

ಜಿಲ್ಲೆಯ ಅಳಂದ ಪಟ್ಟಣದ ಲಾಡ್ಲೆ ಮಶಾಕ್‌ ದರ್ಗಾದಲ್ಲಿರುವ ರಾಘವ ಚೈತನ್ಯ ಶಿವಲಿಂಗ ಪೂಜೆಗೆ ಕಲಬುರಗಿ  ಟ್ರಿಬ್ಯುನಲ್‌ ಕೋರ್ಟ್ ಅನುಮತಿ ನೀಡಿದೆ. ನ್ಯಾಯಾಲಯ ಹಿಂದೂ ಮತ್ತು ಮುಸ್ಲಿಮರಿಗೆ ಧಾರ್ಮಿಕ ವಿಧಿವಿಧಾನಗಳಿಗೆ ಪ್ರತ್ಯೇಕ ಸಮಯ ನಿಗದಿ ಮಾಡಿದೆ.


ಕಲಬುರಗಿ (ಫೆ.15) : ಜಿಲ್ಲೆಯ ಅಳಂದ ಪಟ್ಟಣದ ಲಾಡ್ಲೆ ಮಶಾಕ್‌ ದರ್ಗಾದಲ್ಲಿರುವ ರಾಘವ ಚೈತನ್ಯ ಶಿವಲಿಂಗ ಪೂಜೆಗೆ ಕಲಬುರಗಿ  ಟ್ರಿಬ್ಯುನಲ್‌ ಕೋರ್ಟ್ ಅನುಮತಿ ನೀಡಿದೆ. ನ್ಯಾಯಾಲಯ ಹಿಂದೂ ಮತ್ತು ಮುಸ್ಲಿಮರಿಗೆ ಧಾರ್ಮಿಕ ವಿಧಿವಿಧಾನಗಳಿಗೆ ಪ್ರತ್ಯೇಕ ಸಮಯ ನಿಗದಿ ಮಾಡಿದೆ.

ಫೆ.18ರ ಶಿವರಾತ್ರಿ ಹಬ್ಬ(Shivaratri Festival)ದಂದೇ ಉರುಸ್‌ ಇರುವ ಹಿನ್ನಲೆ ಬೆ.8 ಗಂಟೆಯಿಂದ 2ರ ವರೆಗೆ ಮುಸ್ಲಿಂ(Muslim)ರಿಗೆ ಪೂಜೆಗೆ ಅವಕಾಶ ನೀಡಲಾಗಿದೆ. ಅದೇದಿನ ಮ.2ರಿಂದ ಸಂಜೆ 6ರ ವರೆಗೆ ಹಿಂದೂಗಳಿಗೆ ಶಿವಲಿಂಗ ಪೂಜೆ(Shivalinga puje)ಗೆ ಅವಕಾಶ ನೀಡಿದೆ. ಅಲ್ಲದೇ ಪೂಜೆಗೆ ಕೇವಲ 15 ಜನ ಹಿಂದೂಗಳು ಮಾತ್ರ ತೆರಳಿ ಪೂಜೆ ನೆರವೇರಿಸುವಂತೆ ಆದೇಶ ಹೊರಡಿಸಿದೆ. ಅದೇ ರೀತಿ 15 ಜನ ಮುಸ್ಲಿಂ ಬಾಂಧವರಗಷ್ಟೇ ಉರುಸ್‌ಗೆ ಅವಕಾಶ ನೀಡಲಾಗಿದೆ.

Tap to resize

Latest Videos

undefined

ಗಂಗಾವತಿ ದರ್ಗಾಕ್ಕೆ 6 ಕೋಟಿ ಅನುದಾನ: ಜನಾರ್ದನ ರೆಡ್ಡಿ ಭರವಸೆ

ಕಳೆದ ವರ್ಷ ಶಿವರಾತ್ರಿ ಹಬ್ಬದಂದು ಜಿಲ್ಲಾಡಳಿತದ ಆದೇಶದ ಮೇಲೆ ಕೇಂದ್ರ ಸಚಿವ ಭಗವಂತ ಖೂಬಾ, ಶಾಸಕರಾದ ರಾಜಕುಮಾರ್‌ ಪಾಟೀಲ್‌ ತೇಲ್ಕೂರ್‌(MLA Raja kumar telkur), ಬಸವರಾಜ್‌ ಮತ್ತುಮಡು, ಕಡಗಂಚಿ ಮಠದ ಸ್ವಾಮೀಜಿ ಸೇರಿದಂತೆ 10 ಜನರು, ದರ್ಗಾದಲ್ಲಿರುವ ಲಿಂಗಕ್ಕೆ ಪೂಜೆ ಸಲ್ಲಿಸಲು ಹೋಗುತ್ತಿದ್ದರು. ಈ ವೇಳೆ ದುಷ್ಕರ್ಮಿಗಳು, ಇದ್ದಕ್ಕಿದ್ದಂತೆ ಕಲ್ಲು ತೂರಾಟ ನಡೆಸಿದರು. ಕಲಬುರಗಿ ಜಿಲ್ಲಾಧಿಕಾರಿ ಕಾರು, ಶಾಸಕ ಸುಭಾಷ್‌ ಗುತ್ತೇದಾರ್‌ ಅವರ ಕಾರು ಸೇರಿದಂತೆ ಅನೇಕ ಕಾರಿನ ಗಾಜುಗಳು ಪುಡಿಪುಡಿಯಾಗಿದ್ದವು.

ಆಂದೋಲಾ ಸಿದ್ದಲಿಂಗ ಸ್ವಾಮಿಜಿ(Andolana siddalinga swamiji) ಅಲ್ಲಿಗೆ ಬಂದರೆ ಶಾಂತಿ ಭಂಗವಾಗುತ್ತದೆ ಹಾಗಾಗಿ ಶಿವರಾತ್ರಿ ಪೂಜೆಗೆ ಅನುಮತಿ ಬೇಡ ಎಂದು ಅಲ್ಪಸಂಖ್ಯಾತ ಮುಖಂಡರು ವಕ್ಫ ಬೋರ್ಡ್‌(Wakf Board) ಕೋರ್ಟ್ ಮೆಟ್ಟಿಲೇರಿದ್ದರು. ಅವರ ಅರ್ಜಿ ವಿಚಾರಣೆ ನಡೆಸಿರುವ ಕೋರ್ಟ್ ಪೂಜೆಗೆ ಸೀಮಿತ ಜನರಿಗೆ ಅನುಮತಿಸಿದೆ.

ಏನಿದು ವಿವಾದ:

ಅಳಂದ ಪಟ್ಟಣದಲ್ಲಿ ಸೂಫಿ ಸಂತ ಲಾಡ್ಲೆ ಮಶಾಕ್‌ ದರ್ಗಾ(Ladle Mashak Dargah)ವಿದೆ. ಇದೇ ದರ್ಗಾದ ಆವರಣದಲ್ಲಿ, ಛತ್ರಪತಿ ಶಿವಾಜಿ ಮಹಾರಾಜ(Chhatrapati Shivaji Maharaja)ರ ಗುರುಗಳಾದ , ಸಮರ್ಥ ರಾಮದಾಸ(Samartha ramadas)ರ ಗುರು ರಾಘವ ಚೈತನ್ಯ(Raghav Chaitanya)ರ ಸಮಾಧಿಯಿದೆ. ಸಮಾಧಿ ಮೇಲೆ ಶಿವಲಿಂಗವಿದೆ. ದರ್ಗಾಕ್ಕೆ ಹೋಗುತ್ತಿದ್ದ ಅನೇಕ ಹಿಂದೂ ಭಕ್ತರು, ರಾಘವ ಚೈತನ್ಯರ ಸಮಾಧಿ ಮತ್ತು ಶಿವಲಿಂಗಕ್ಕೆ ನಮಸ್ಕರಿಸಿ, ಪೂಜೆ ಮಾಡಿ ಬರುತ್ತಿದ್ದರು. ಜೊತೆಗೆ ಸ್ಥಳೀಯ ಅರ್ಚಕ ಕುಟುಂಬದವರು ಲಿಂಗಕ್ಕೆ ಪ್ರತಿದಿನ ಪೂಜೆ ಸಲ್ಲಿಸುತ್ತಿದ್ದರು.

ಶಿವಲಿಂಗಕ್ಕೆ ಅಪಮಾನ:

ಆದರೆ, ಕಳೆದ ವರ್ಷ ಶಿವಲಿಂಗದ ಮೇಲೆ ಅನ್ಯ ಕೋಮಿನ ಕೆಲವರು ಮಲಮೂತ್ರ ವಿಸರ್ಜನೆ ಮಾಡಿದ್ದರು. ಇದು ಹಿಂದೂ ಧರ್ಮಿಯರ ಆಕ್ರೋಶಕ್ಕೆ ಕಾರಣವಾಗಿತ್ತು. ಶಿವಲಿಂಗದ ಮೇಲೆ ಮಲಮೂತ್ರ ವಿಸರ್ಜನೆ ಮಾಡಿದ್ದನ್ನು, ಅಳಂದ ಬಿಜೆಪಿ ಶಾಸಕ ಸುಭಾಷ್‌ ಗುತ್ತೇದಾರ್‌, 2021ರ ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಪ್ರಸ್ತಾಪಿಸಿ, ಐತಿಹಾಸಿಕ ಮಹತ್ವಹೊಂದಿರುವ ರಾಘವ ಚೈತನ್ಯರ ಸಮಾಧಿ ಮತ್ತು ಶಿವಲಿಂಗಕ್ಕೆ ರಕ್ಷಣೆ ನೀಡಬೇಕು ಅಂತ ಸರ್ಕಾರಕ್ಕೆ ಆಗ್ರಹಿಸಿದ್ದರು. ಇದು ಅನ್ಯಕೋಮಿನ ಆಕ್ರೋಶಕ್ಕೆ ಕಾರಣವಾಗಿತ್ತು.

ಹೀಗಾಗಿ ಶಾಸಕ ಸುಭಾಷ್‌ ಗುತ್ತೇದಾರ್‌(MLA Subhash Guttedar) ವಿರುದ್ಧವೇ ಅವಹೇಳನಕಾರಿ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಇದು ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿತ್ತು. ಹೀಗಾಗಿ ಕಳೆದ ವರ್ಷ ನವೆಂಬರ್‌ ತಿಂಗಳಲ್ಲಿ, ಆಳಂದದಲ್ಲಿ ಬೃಹತ್‌ ಪ್ರತಿಭಟನೆ ಕೂಡ ಹಿಂದೂಪರ ಸಂಘಟನೆಗಳ ಮುಖಂಡರು ನಡೆಸಿದ್ದರು. ಆಗ ಶಿವರಾತ್ರಿ ದಿನವೇ, ರಾಘವ ಚೈತನ್ಯ ಸಮಾಧಿ ಮತ್ತು ಶಿವಲಿಂಗವನ್ನು ಶುಚಿ ಗೊಳಿಸಿ, ಅಲ್ಲಿ ಪೂಜೆ ಮಾಡುವದಾಗಿ ಘೋಷಿಸಿದ್ದರು.

ಮುಂದುವರಿದ ಶಿವಮಾಲೆ ವ್ರತ:

ಕಳೆದ ವರ್ಷ ಸಾಂಕೇತಿಕವಾಗಿ ಶುರುವಾಗಿದ್ದ ಶಿವಮಾಲೆ ವೃತ್ತ ಈ ಬಾರಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ವಿಸ್ತರಿಸಿದೆ. ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಅವರ ನೇತೃತ್ವದಲ್ಲಿ ಕಲಬುರಗಿಯಲ್ಲಿ ರಾಮ ಮಂದಿರದಲ್ಲಿ ಮಂಗಳವಾರ ಗಣಹೋಮದೊಂದಿಗೆ ವಿದ್ಯುಕ್ತವಾಗಿ ಶಿವಮಾಲೆ ವ್ರತವನ್ನು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಪ್ರಾರಂಭಿಸಿದ್ದಾರೆ. 9 ಜನ ಹಿಂದು ಕಾರ್ಯಕರ್ತರಿಗೆ ಆಂದೋಲಾ ಶ್ರೀಗಳು ಶಿವಮಾಲೆ ದೀಕ್ಷೆ ನೀಡಿದರು.

ಇಂದು ಶಿವಮಾಲೆ ಧಾರಣೆ ಮಾಡಿದವರು ಎಲ್ಲರೂ ಫೆ.18ರ ಶಿವರಾತ್ರಿ ದಿನ ರಾಘವ ಚೈತನ್ಯರ ಶಿವಲಿಂಗಕ್ಕೆ ಪೂಜಾದಿಗಳನ್ನು ನೆರವೇರಿಸಿಯೇ ತಮ್ಮ ವಋುತ ಸಮಾಪ್ತಿ ಮಾಡಲಿದ್ದಾರೆಂದರು.

ನ್ಯಾಯಾಲಯ 15 ಜನಕ್ಕೆ ಪೂಜೆಗೆ ಅವಕಾಶ ನೀಡಿದೆ. ಹೈದಾಬಾದ್‌ನ ಘೋಶಾ ಮಹಲ್‌ ಶಾಸಕ ರಾಜಶಿಂಗ್‌ ಠಾಕೂರ್‌ ಅವರಿಗೆ ಆಳಂದ ಶಿವಲಿಂಗ ಪೂಜೆಗೆ ವಿಶೇಷ ಆಹ್ವಾನ ನೀಡುತ್ತಿದ್ದೇವೆ. ಇವರೊಂದಿಗೆ ಸ್ಥಳೀಯವಾಗಿ ಯಾರ್ಯಾರು ಪೂಜೆಗೆ ಇರಬೇಕು ಎಂಬುದನ್ನು ಪಟ್ಟಿಮಾಡುತ್ತೇವೆ. ಸ್ಥಳೀಯವಾಗಿ ಎಲ್ಲೊಂದಿಗೂ ಚರ್ಚಿಸಿ ಏಂತಿಮ ನಿರ್ಣಯ ಕೈಗೊಳ್ಳುತ್ತೇವೆಂದು ಆಂದೋಲಾ ಶ್ರೀಗಳು ಹೇಳಿದ್ದಾರೆ.

ಶಿವರಾತ್ರಿ ದಿನ ರಾಘವ ಚೈತನ್ಯರ ಸಮಾಧಿ ಮೇಲಿರುವ ಶಿವಲಿಂಗವನ್ನು ಶುಚಿಗೊಳಿಸಿ, ಪೂಜೆ ಮಾಡುತ್ತೇವೆ. ಪೂಜೆಗಾಗಿ ಅಲ್ಲಿನ ಪರಿಸರ ಶುದ್ದಿಗೊಳಿಸಲು ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದರು. ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್‌ ಮುತಾಲಿಕ…, ಚೈತ್ರಾ ಕುಂದಾಪುರಗೆ ಆಹ್ವಾನ ನೀಡುವ ಬಗ್ಗೆ ಇನ್ನೂ ತ ತೀರ್ಮಾನವಾಗಿಲ್ಲ, ಅವರೂ ಅನ್ಯ ಕಾರ್ಯಕ್ರಮಗಳಲ್ಲಿ ಮಗ್ನರಾಗಿರೋದರಿಂದ ಅವರ ಆಹ್ವಾನ ವಿಚಾರದಲಿ ಚರ್ಚೆ ಸಾಗಿದೆ ಎಂದರು.

ದತ್ತಪೀಠ ಮಾದರಿಯಲ್ಲಿ ಹೋರಾಟ

ದತ್ತಪೀಠ ಮಾದರಿಯಲ್ಲೇ ಆಳಂದದ ರಾಘವ ಚೈತನ್ಯ ಶಿವಲಿಂಗ ಪೂಜೆ, ಅಲ್ಲಿನ ಮದಿರ ನಿರ್ಮಾಣ ವಿಷಯವಾಗಿ ಹಂತಹಂತವಾದಂತಹ ಹೋರಾಟ ನಡೆಸೋದಾಗಿ ಸಿದ್ದಲಿಂಗ ಶ್ರೀಗಳು ಘೋಷಿಸಿದ್ದಾರೆ. ಕಳೆದ ಶಿವರಾತ್ರಿ ಆಳಂದಕ್ಕೆ ಆಗಮಿಸಿದ್ದ ಕೇಂದ್ರ ಸಚಿವ ಭಗವಂತ ಖೂಬಾ, ಶಾಸಕರಾದ ಸುಭಾಷ್‌ ಗುತ್ತೇದಾರ್‌, ರಾಜಕುಮಾರ್‌ ಪಾಟೀಲ್‌ ತೇಲ್ಕೂರ್‌, ಗ್ರಾಮೀಣ ಶಾಸಕ ಬಸವರಾಜ ಮತ್ತಿಮಡು ಸೇರಿದಂತೆ ಅನೇಕ ಮುಖಂಡರು ಇದೇ ವಿಚಾರವಾಗಿ ಸಿಎಂ ಬಲಿ ನಿಯೋಗ ಹೋಗಣವೆಂದಿದ್ದರು. ಅದಿನ್ನೂ ಭರವಸೆಯಾಗಿಯೇ ಉಳಿದಿದೆ. ಗೃಹ ಸಚಿವರು ಮಾತನಾಡಿದ ಶಿವಲಿಂಗಕ್ಕೆ ಪ್ರತ್ಯೇಕ ಬಾಗಿಲು ಮಾಡಿಕೊಡೋದಾಗಿ ನೀಡದ್ದ ಭರವಸೆ ಹಾಗೇ ಇದೆ ಎಂದು ತಮ್ಮ ಅಸಮಾಧಾನ ಹೊರಹಾಕಿದರು.

ಅಫಜಲ್ಪುರ: ಖಾಜಾಸಾಬ್ ಉರುಸ್, ಹಿಂದೂ- ಮುಸ್ಲಿಮ್‌ ಭಕ್ತರ ಸಂಗಮ

ಆಳಂದ ಲಾಡ್ಲೆ ಮಶಾಕ್‌ ದರ್ಗದಲ್ಲಿರುವ ರಾಘವ ಚೈತನ್ಯ ದೇವಸ್ಥಾನಕ್ಕೆ ಪೂಜೆ ಸಲ್ಲಿಸಲು ನ್ಯಾಯಾಲಯ ಅನುಮತಿ ಹಿನ್ನಲೆಯಲ್ಲಿ ಎರಡನೇ ದತ್ತ ಪೀಠದ ರೀತಿಯಲ್ಲಿ ಹೋರಾಟ ಮುಂದುವರೆಸಲಾಗುವುದು. ರಾಘವ ಚೈತನ್ಯ ದೇವಸ್ಥಾನ ಜೀರ್ಣೋದ್ದಾರಕ್ಕೆ ಆಗ್ರಹಿಸಿ ಹೋರಾಟ ಮುಂದುವರೆಸಲಾಗುವುದು. ಇದು ಮೂಲತಃ ಹಿಂದೂ ದೇವತೆಯ ತಾಣವಾಗಿತ್ತು. ಮೊಘಲರು ಮತ್ತು ಬಹಮನಿ ಸುಲ್ತಾರನರ ಆಕ್ರಮಣದಿಂದ ದೇವಸ್ಥಾನ ದ್ವಂಸವಾಗಿದೆ. ಮುಂದೆ ಮುಸ್ಲಿಂ ಅರಸರು ಲಾಡ್ಲೆ ಮಶಾಕ್‌ ದರ್ಗಾ ನಿರ್ಮಾಣ ಮಾಡುತ್ತಾರೆ. ನಂತರ ದೇವಸ್ಥಾನದ ಕುರುಹು ಇಲ್ಲದ ಹಾಗೆ ಮಾಡುವ ನಿರಂತರ ಪ್ರಯತ್ನ ನಡೆದಿವೆ. ಕಳೆದ ವರ್ಷ ನಮಗೆ ಪೂಜೆ ಸಲ್ಲಿಸಲು ಅವಕಾಶ ನೀಡಿರಲಿಲ್ಲ. ಈ ಬಾರಿ ಅವಕಾಶ ಸಿಕ್ಕಿದೆ. ಶಿಸ್ತಿನಿಂದ ಪೂಜಾದಗಳನ್ನು ನೆರವೇರಿಲಾಗುತ್ತದೆ ಎಂದು ಸಿದ್ದಲಿಂಗ ಶ್ರೀ ಹೇಳಿದ್ದಾರೆ.

ಜಿಲ್ಲಾಡಳಿತ, ಜಿಲ್ಲಾ ಪೊಲೀಸರಿಗೆ ಆಳಂದ ದರ್ಗಾ ಸುತ್ತುತ್ತಲಿನ ಬೆಳವಣಿಗೆ ಗೊತ್ತಾಗುತ್ತದೆ. ಈ ಬಾರಿಯಾದರೂ ಮೈತುಂಬಾ ಕಣ್ಣಾಗಿಸಿಕೊಂಡು ನೋಡಲಿ. ಕಳೆದ ಬಾರಿಯಂತೆ ಅಲಕ್ಷತನ ಬೇಡವೆಂದರು. ಫಿರ್ದೋಸ ಅನ್ಸಾರಿ ಗಡಿಪಾರನ್ನು ಸ್ವಾಗತಿಸಿದ ಅವರು ಕಲಬುರಗಿ ಕಾಂಗ್ರೆಸ್‌ ಮುಖಂಡ, ಆಳಂದ ಗಲಭೆಗೆ ಪ್ರಚೋದನೆ ನೀಡಿದ್ದ ವಾಹಜ್‌ ಬಾಬಾ ಇವರ ವಿರುದ್ಧವೂ ಕ್ರಮಕ್ಕೆ ಆಗ್ರಹಿಸಿದರು.

click me!