ಶಿವಾನಂದ ನೀಲಣ್ಣವರನ ಸಾವಿರಾರು ಕೋಟಿ ರಹಸ್ಯ ಬಯಲು; FIR ನಂತ್ರವೂ ಜನರಿಂದ ಹೂಡಿಕೆ

Published : Jun 07, 2026, 01:19 PM IST
Shivam Associates Shivanand Neelannavar

ಸಾರಾಂಶ

ಬೆಳಗಾವಿಯ ಶಿವಂ ಅಸೋಸಿಯೇಟ್ ಕಂಪನಿಯು ಸಾವಿರಾರು ಕೋಟಿ ರೂಪಾಯಿ ವಂಚನೆ ಎಸಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಮಹತ್ವದ ಮಾಹಿತಿ ಬಹಿರಂಗಪಡಿಸಿದೆ. ಹೆಚ್ಚಿನ ಲಾಭದ ಆಮಿಷವೊಡ್ಡಿ 2,400 ಕೋಟಿ ಸಂಗ್ರಹಿಸಿ, ಹೊಸಬರ ಹಣವನ್ನು ಹಳಬರಿಗೆ ಬಡ್ಡಿಯಾಗಿ ನೀಡುತ್ತಿದ್ದ ವಂಚನೆಯ ಜಾಲವನ್ನು ಸಿಐಡಿ ವಿವರಿಸಿದೆ. 

ಬೆಳಗಾವಿ: ಶಿವಂ ಅಸೋಶಿಯೇಟ್ ಕಂಪನಿಯಿಂದ ಸಾವಿರಾರು ಕೋಟಿ ವಂಚನೆ ಪ್ರಕರಣ ಸಂಬಂಧ ಬೆಳಗಾವಿ ಅತಿಥಿ ಗೃಹದಲ್ಲಿ ಸಿಐಡಿ ಡಿಐಜಿ ಡಾ. ಭೀಮಾಶಂಕರ್ ಗುಳೇದ್ ಮಹತ್ವದ ಸುದ್ಧಿಗೋಷ್ಠಿ ನಡೆಸಿ, ಕೆಲವು ಮಾಹಿತಿಯನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡರು. ಇಪ್ಪತ್ತು ದಿನಗಳ ಹಿಂದೆ ಶಿವಂ ಅಸೋಸಿಯೇಟ್ ಕಂಪನಿ ಮೇಲೆ ದಾಳಿ ಆಗಿತ್ತು. ಅಕ್ರಮವಾಗಿ ಠೇವಣಿ ಸಂಗ್ರಹ, ಆಮಿಷವೊಡ್ಡಿ ಹಣ ಸಂಗ್ರಹ ಮಾಡ್ತಿದ್ದಾರೆಂಬ ಮಾಹಿತಿ ಮೇರೆಗೆ ಈ‌ ದಾಳಿ ನಡೆಸಲಾಗಿತ್ತು. ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯಿಂದ ದಾಳಿ ನಡೆದಿದ್ದು, ಇದೀಗ ಪ್ರಕರಣ ಸಿಐಡಿಗೆ ಹಸ್ತಾಂತರ ಆಗಿತ್ತು. ಸಾಮಾನ್ಯವಾಗಿ ತನಿಖೆ ನಡೆಯುವಾಗ ಸುದ್ಧಿಗೋಷ್ಠಿ ಮಾಡಲ್ಲ. ಇವತ್ತಿಗೂ ಶಿವಂ ಅಸೋಸಿಯೇಟ್ ಕಂಪನಿಗೆ ಜನರು ಹಣ ಹಾಕ್ತಿದಾರೆ. ಎಫ್ಐಆರ್ ಆದ ಬಳಿಕ ಈವರೆಗೆ ಐದು ಕೋಟಿ ಮತ್ತೇ ಹೂಡಿಕೆ ಆಗಿದೆ. ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಸುದ್ದಿಗೋಷ್ಠಿ ಮಾಡ್ತಿದ್ದೇವೆ ಎಂದು ಹೇಳಿದರು.

ಶಿವಂ ಅಸೋಸಿಯೇಟ್ ಕಂಪನಿಯಲ್ಲಿ ದುಡ್ಡು ಹಾಕಿದವರು ಬೇರೊಬ್ಬರಿಗೆ ಪ್ರೇರೇಪಣೆ ನೀಡಿ ಹಣ ಹಾಕಿಸುತ್ತಿದ್ದಾರೆ.ಇದೇ ಕಾರಣಕ್ಕೆ ಅನಿವಾರ್ಯವಾಗಿ ಸುದ್ಧಿಗೋಷ್ಠಿ ನಡೆಸುತ್ತಿದ್ದೇವೆ. ಶಿವಾನಂದ ನೀಲಣ್ಣವರ್ ಇಲ್ಲಿವರೆಗೂ ಸಾರ್ವಜನಿಕರಿಗೆ ದುಡ್ಡು ತಲುಪಿಸುತ್ತಿದ್ದನು. ಜಿಲ್ಲಾಡಳಿತ ಪಿತೂರಿ ಮಾಡಿ ದಾಳಿ ಮಾಡಿದೆ ಎಂದು ಬಿಂಬಿಸುವ ಯತ್ನ ಎಂದು ಸೋಶಿಯಲ್ ಮಿಡಿಯಾದಲ್ಲಿ ಚರ್ಚೆ ಮಾಡಲಾಗ್ತಿದೆ. ಈ ರೀತಿ ಚರ್ಚೆ ಮಾಡೋರಿಗೂ ನೋಟೀಸ್ ಕೊಟ್ಟು ವಿಚಾರಣೆಗೆ ಕರೆಯುತ್ತೇವೆ ಎಂದು ಎಚ್ಚರಿಕೆ ನೀಡಿದರು.

ದೂರು ನೀಡುವಂತೆ ಮನವಿ

ಆರ್.ಬಿ.ಐ ದಿಂದ ಅನುಮತಿ ಪಡೆಯದೇ ಠೇವಣಿ ತೆಗೆದುಕೊಳ್ಳುವುದು ಅಪರಾಧ. ಎರಡು ದಿನದ ಹಿಂದೆ ಮತ್ತೊಂದು ಇದೇ ರೀತಿ ಪ್ರಕರಣ ಬೆಳಗಾವಿಯಲ್ಲಿ ಪತ್ತೆಯಾಗಿದೆ. ಪ್ರಕರಣ ದಾಖಲು ಮಾಡಿಕೊಂಡಿದ್ದು ಅದು ಸಿಐಡಿಗೆ ಬರುತ್ತೆ. ಆರ್‌ಬಿಐ ದಿಂದ ಅವಶ್ಯಕ ಬ್ಯಾಂಕಿಂಗ್ ಅನುಮತಿ ಪಡೆಯದೇ ಹಣ ಸಂಗ್ರಹಿಸಲಾಗಿದೆ. ನೀಲಣ್ಣವರ್ ಮತ್ತು ಆದಿತ್ಯರಾಜ ಕ್ಯಾಪಿಟಲ್ ಎರಡು ಕಂಪನಿ ಅನುಮತಿ ಪಡೆದಿಲ್ಲ. 36 ಪರ್ಸೆಂಟ್, 60 ಪರ್ಸೆಂಟ್ ಲಾಭ ಕೊಡುವ ಬ್ಯಾಂಕಿಂಗ್ ವ್ಯವಹಾರ ಯಾವೂದು ಇಲ್ಲ. ಹೆಚ್ಚಿನ ‌ಲಾಭದ ಆಮೀಷವೊಡ್ಡುವವರಿಂದ ಸಾರ್ವಜನಿಕರು ದೂರ ಇರಬೇಕು. ಇಂತವರು ಯಾರಾದರೂ ಬಂದು ಪ್ರೇರೇಪಣೆ ಮಾಡಿದ್ರೇ ದೂರು ನೀಡಿ ಎಂದು ಡಾ. ಭೀಮಾಶಂಕರ್ ಗುಳೇದ್ ಮನವಿ ಮಾಡಿಕೊಂಡರು.

ಹೂಡಿಕೆ ಎಷ್ಟು? ಎಲ್ಲಿದೆ ಸಾವಿರಾರು ಕೋಟಿ?

ಪ್ರಾಥಮಿಕ ತನಿಖೆಯಲ್ಲಿ ಶಿವಾನಂದ ನೀಲಣ್ಣವರ್ ವಂಚನೆ ಮಾಡಿರುವುದು ಸಾಬೀತಾಗಿದೆ. ಹೊಸದಾಗಿ ಬಂದ ಹಣವನ್ನ ಹಳಬರಿಗೆ ಬಡ್ಡಿ ಕೊಡ್ತಿದ್ದನು. ಆತ ಸಂಗ್ರಹಿಸುತ್ತಿದ್ದ ಹಣಕ್ಕಿಂತ ಬಡ್ಡಿ ಕೊಡುವ ಹಣ ಹೆಚ್ಚಾದ್ರೇ ಆಗ ನಿಂತು ಹೋಗ್ತಿತ್ತು. ಇಲ್ಲಿವರೆಗೂ ಸಾರ್ವಜನಿಕರಿಂದ 2,400 ಕೋಟಿ ಹಣವನ್ನ ಸಂಗ್ರಹಿಸಿದ್ದಾನೆ. ಇದರಲ್ಲಿ ಸುಮಾರು ದುಡ್ಡು ಸಾರ್ವಜನಿಕರಿಗೆ ಹಿಂದಿರುಗಿಸಿದ್ದಾನೆ. 540 ಕೋಟಿ ಹಣ ಸ್ಟಾಕ್ ಮಾರ್ಕೆಟ್ ನಲ್ಲಿ ಹಾಕಿದ್ದಾನೆ. ಇದರಲ್ಲಿ 170 ಕೋಟಿ ಹಣವನ್ನ ಕಳೆದುಕೊಂಡಿದ್ದಾನೆ. ಇಲ್ಲಿವರೆಗೂ ತನಿಖೆಯಲ್ಲಿ 660ಕೋಟಿ ಹಣ ಶಾರ್ಟೇಜ್ ಕಂಡು ಬಂದಿದೆ. ಈ ಪೈಕಿ‌330 ಕೋಟಿ ರಿಕವರಿ ಆಗುತ್ತೆ ಎಂದು ಮಾಹಿತಿ ನೀಡಿದರು.

40,700 ಜನರಿಂದ ಹೂಡಿಕೆ ಮಾಡಿಕೊಂಡಿದ್ದು ಕಂಡು ಬಂದಿದೆ. ಈತನೊಟ್ಟಿಗೆ ಇನ್ನೊಬ್ಬ ಪಾಲುದಾರನಿದ್ದಾನೆ. ಕಂಪನಿಯಿಂದ ಅಕ್ರಮವಾಗಿ ನೀಲಣ್ಣವರ್ ಸ್ವಂತಕ್ಕೆ 55 ಕೋಟಿ ಹಣ ಹಾಕಿಕೊಂಡಿದ್ದಾನೆ. ಈಗಾಗಲೇ ಐದು ಐಷಾರಾಮಿ ಕಾರು ಜಪ್ತಿ ಮಾಡಿಕೊಂಡಿದ್ದೇವೆ.ಇನ್ನೂ 11 ವೋಲ್ವೋ ಎಕ್ ಸಿ 90 ಕಾರು ಖರೀದಿ ಮಾಡಿದ್ದು ಕಂಡು ಬಂದಿದೆ. ಅವುಗಳನ್ನ ಕೂಡ ಶೀಘ್ರದಲ್ಲಿ ಜಪ್ತಿ ಮಾಡುತ್ತೇವೆ.

ಎಫ್ಐಆರ್ ನಂತರವೂ ಹಣ ಹೂಡಿಕೆ

ಇಲ್ಲಿವರೆಗೂ 400 ಕೋಟಿ ಹೆಚ್ಚುವರಿಯಾಗಿ ಹೂಡಿಕೆದಾರರಿಗೆ ಹೋಗಿದೆ. ಆ ಹಣವನ್ನ ವಾಪಾಸ್ ಪಡೆದು ಇನ್ನೂಳಿದ ಹೂಡಿಕೆದಾರರಿಗೆ ನೀಡ್ತಿವಿ. ಎಫ್ಐಆರ್ ಆದ ಮೇಲೆ ನಾಲ್ಕೈದು ಕೋಟಿ ಹಣ ಡೆಪಾಸಿಟ್ ಆಗಿದೆ. 30 ಅಕೌಂಟ್ ಸಿಕ್ಕಿದ್ದು ಇದರಲ್ಲಿ 7 ಅಕೌಂಟ್ ಗಳಲ್ಲಿ ಹೆಚ್ಚಿನ ಹಣ ವರ್ಗಾವಣೆ ಆಗಿದೆ. 36,200 ಪೇಜ್ ಒಂದೇ ಅಕೌಂಟ್ ದಲ್ಲಿ ಆಗಿದ್ದು ತನಿಖೆ ನಡೆಯುತ್ತಿದೆ. ಸಿನಿಮಾ ಸ್ಟಾರ್ ಗಳಿಗೆ ಅಸೋಸಿಯೇಟ್ ದಿಂದ ಹಣ ಹೋಗಿದ್ರೇ ಅವರಿಗೂ ನೋಟೀಸ್ ಕೊಟ್ಟು ವಿಚಾರಣೆಗೆ ಕರೆಸಿಕೊಳ್ಳಲಾಗುತ್ತದೆ.ಕ್ಕದ ರಾಜ್ಯ ಮಹಾರಾಷ್ಟ್ರದಲ್ಲಿ ಅತೀ ಹೆಚ್ಚು ಹೂಡಿಕೆ ಇದೆ. ಮಹಾರಾಷ್ಟ್ರ ಪೊಲೀಸರ ಸಹಕಾರ ಪಡೆದು ತನಿಖೆ ಮಾಡ್ತಿದ್ದೇವೆ ಎಂದರು.

PREV
Read more Articles on
click me!

Recommended Stories

ಎಲ್ಲಕ್ಕಿಂತ ಭಿನ್ನ ನೀಲಿ ನಮ್ಮ ಮೆಟ್ರೊ: ಚಾಲಕ ರಹಿತ ಸಾರಿಗೆ ಯಾವಾಗ ಆರಂಭ? ಏನೆಲ್ಲಾ ವಿಶೇಷತೆ
ಶಿವಮೊಗ್ಗ ನಿಧಿ ರಹಸ್ಯ: ಅರ್ಧ ಕೆಜಿ ಚಿನ್ನದ ನಾಣ್ಯ ಆಸೆ ತೋರಿಸಿ ₹9.60 ಲಕ್ಷ ದೋಚಿದ ಖದೀಮರು..! ಸಿನಿಮೀಯ ರೀತಿಯಲ್ಲಿ ಕೃತ್ಯ