ಕೃಷಿ ಹೊಂಡದಲ್ಲಿ ಮುಳುಗಿ ಬಾಲಕರ ದುರ್ಮರಣ

By Suvarna News  |  First Published Apr 29, 2021, 10:07 AM IST

ಪುಟ್ಟ ಬಾಲಕರಿಬ್ಬರು ಈಜಲು ಹೋಗಿ ಕೃಷಿ ಹೊಂಡದಲ್ಲಿ ಮುಳುಗಿ ಸಾವಿಗೀಡಾದ ಘಟನೆ ಶಿವಮೊಗ್ಗ ಜಿಲ್ಲೆ ಹೊಸನಗರದಲ್ಲಿ ನಡೆದಿದೆ. 


ಶಿವಮೊಗ್ಗ (ಏ.29) : ಕೃಷಿ ಹೊಂಡದಲ್ಲಿ ಈಜಲು ಹೋಗಿದ್ದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಮೃತಪಟ್ಟ ದುರ್ಘಟನೆ ಬುಧವಾರ ಹೊಸನಗರ ತಾಲೂಕಿನಲ್ಲಿ ನಡೆದಿದೆ.

ಹೊಸನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬಲಗ ವರಕೋಡು ಗ್ರಾಮದ   ಗಿರೀಶ್ ಎಂಬುವವರ ಮಕ್ಕಳಾದ ನವೀನ್ (10) ಹಾಗೂ ಸೃಜನ್ (8) ಇವರಿಬ್ಬರು ಕುಮಾರಸ್ವಾಮಿ ಎಂಬುವವರ ಜಮೀನಿನಲ್ಲಿರುವ ಕೃಷಿ ಹೊಂಡದಲ್ಲಿ ಮುಳುಗಿ ಮೃತಪಟ್ಟಿದ್ದಾರೆ. 

Tap to resize

Latest Videos

ವಿಜಯಪುರ; ಬಟ್ಟೆ ತೊಳೆಯಲು ಹೋದ ಸಹೋದರರು ನೀರು ಪಾಲು .

ಬುಧವಾರ ಸಂಜೆ ವೇಳೆಗೆ ಮನೆಯಿಂದ ಹೋದ ಮಕ್ಕಳು ಈಜಲು ಕೃಷಿ ಹೊಂಡಕ್ಕೆ ಇಳಿದಿದ್ದಾರೆ, ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಅಣ್ಣತಮ್ಮ ಇಬ್ಬರು ಮೃತಪಟ್ಟಿದ್ದಾರೆ.

ಮೃತ  ಬಾಲಕರ ತಂದೆ ಗಿರೀಶ್   ನೀಡಿದ ದೂರಿನ ಮೇರೆಗೆ ಹೊಸನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. 

click me!