Shivamogga shocking: ಪ್ರೀತಿ ನೆಪದಲ್ಲಿ ಹೊರ ರಾಜ್ಯದ ಯುವತಿಗೆ ಗರ್ಭಿಣಿ ಮಾಡಿ ಟೈಲರ್ ಪರಾರಿ!

Published : Jul 10, 2026, 03:22 PM IST
  Shivamogga Tailor cheating young woman from another state under the pretext of love

ಸಾರಾಂಶ

ಪ್ರೀತಿ ಪ್ರೇಮದ ನೆಪದಲ್ಲಿ ಹೊರ ರಾಜ್ಯದ ಯುವತಿಯನ್ನು ನಂಬಿಸಿ ಅತ್ಯಾ೧ಚಾರ ನಡೆಸಿದಲ್ಲದೆ ನಂತರ ಅಬಾರ್ಷನ್ ಕೂಡ ಮಾಡಿಸಿ ವಂಚಿಸಿದ ಆಘಾತಕಾರಿ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಕಿರುಕುಳಕ್ಕೆ ಒಳಗಾದ ಸಂತ್ರಸ್ತ ಯುವತಿ ನ್ಯಾಯಕ್ಕಾಗಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾಳೆ

ಶಿವಮೊಗ್ಗ(ಜು.10): ಪ್ರೀತಿ ಪ್ರೇಮದ ನೆಪದಲ್ಲಿ ಹೊರ ರಾಜ್ಯದ ಯುವತಿಯನ್ನು ನಂಬಿಸಿ ಅತ್ಯಾ೧ಚಾರ ನಡೆಸಿದಲ್ಲದೆ ನಂತರ ಅಬಾರ್ಷನ್ ಕೂಡ ಮಾಡಿಸಿ ವಂಚಿಸಿದ ಆಘಾತಕಾರಿ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಕಿರುಕುಳಕ್ಕೆ ಒಳಗಾದ ಸಂತ್ರಸ್ತ ಯುವತಿ ನ್ಯಾಯಕ್ಕಾಗಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾಳೆ

ಯುವತಿಯ ಅಸಹಾಯಕತೆ ಬಂಡವಾಳ ಮಾಡಿಕೊಂಡ ಪಾಪಿ!

ಕೆಲವೊಮ್ಮೆ ಬಡತನ, ಉದ್ಯೋಗ, ವಿದ್ಯಾಭ್ಯಾಸದ ಕಾರಣಕ್ಕಾಗಿ ಹೊರರಾಜ್ಯಗಳಿಂದ ಬಂದು ತಮ್ಮ ಜೀವನವನ್ನು ರೂಪಿಸಿಕೊಳ್ಳಲು ಪ್ರಯತ್ನ ಪಡುವ ಯುವತಿಯರು ಇಂಥ ವಂಚನೆ ಜಾಲಕ್ಕೆ ಸಿಲುಕಿಕೊಂಡು ಬದುಕು ನರಕ ಮಾಡಿಕೊಳ್ಳುತ್ತಾರೆ. ಇಲ್ಲಿಯೂ ಇದೇ ಆಗಿದೆ. ಮೊದಲಿಗೆ ಆ ಯುವತಿಯನ್ನ ಪರಿಚಯಿಸಿಕೊಂಡು ಬಳಿಕ ಪ್ರೀತಿಯ ಹೆಸರಿನಲ್ಲಿ ಟಾರ್ಗೆಟ್ ಮಾಡಿ ವಂಚಿಸುವ ದೊಡ್ಡ ಜಾಲವೇ ರಾಜ್ಯದಲ್ಲಿ ಸಕ್ರಿಯವಾಗಿದೆ. ಅಂತೆಯೇ ಶಿವಮೊಗ್ಗದ ಯುವಕನೊಬ್ಬ ಇದೇ ರೀತಿ ಕೃತ್ಯವೆಸಗಿದ್ದಾನೆ.

ಮದುವೆಯಾಗುವುದಾಗಿ ನಂಬಿಸಿ ಮೋಸ

ಯುವತಿಗೆ ಮದುವೆಯಾಗುವುದಾಗಿ ನಂಬಿಸಿ ಕರೆಸಿಕೊಂಡಿದ್ದಾನೆ. ಇವನ ಮಾತನ್ನು ನಂಬಿ ಬಂದ ಹೊರರಾಜ್ಯದ ಯುವತಿಯೊಂದಿಗೆ ದೈಹಿಕ ಸಂಬಂಧ ಬೆಳೆಸಿ ಗರ್ಭಿಣಿ ಮಾಡಿರುವ ಆರೋಪಿ ಬಳಿಕ ಕೈಕೊಟ್ಟು ಪರಾರಿಯಾಗಿದ್ದಾನೆ., ಪ್ರಕರಣ ದಾಖಲಿಸಿಕೊಂಡಿರುವ ಮಹಿಳಾ ಠಾಣೆ ಪೊಲೀಸರು ಆರೋಪಿ ಪತ್ತೆಗೆ ಮುಂದಾಗಿದ್ದಾರೆ.

ಹೌದು ಇಷ್ಟಕ್ಕೂ ನಡೆದಿದ್ದೇನೆಂದರೆ ಶಿವಮೊಗ್ಗ ನಗರದ ದುರ್ಗಿ ಗುಡಿಯಲ್ಲಿ ಅನುರಾಧ ಕ್ರಿಯೇಶನ್ಸ್ ಹೆಸರಿನ ಟೈಲರಿಂಗ್ ಅಂಗಡಿ ನಡೆಸುತ್ತಿದ್ದ ಶಿವಮೊಗ್ಗದ ಸೀಗೆಹಟ್ಟಿಯ ಯುವಕ ಶ್ರೀನಿಧಿ ಎಂಬಾತ ಹೊರ ರಾಜ್ಯದ ಯುವತಿಯನ್ನು ನಂಬಿಸಿ ದೈಹಿಕ ಸಂಪರ್ಕ ಬೆಳೆಸಿರುವ ಆರೋಪ ಕೇಳಿಬಂದಿದೆ. ಹೋಟೆಲ್ ಕೆಲಸಕ್ಕೆ ಬಂದಿದ್ದ ಯುವತಿಯನ್ನು ಪ್ರೀತಿಸುವುದಾಗಿ ನಂಬಿಸಿದ್ದ. ಪ್ರೀತಿಯ ಹೆಸರಿನಲ್ಲಿ ಅಂಗಡಿಗೆ ಕರೆಸಿಕೊಂಡಿದ್ದ. ಸಮಯ ನೋಡಿ ಯುವತಿ ಮೇಲೆ ಅತ್ಯಾ೧ಚಾರ ಎಸಗಿದ್ದಾನೆ. ಇತ್ತೀಚೆಗೆ ಯುವತಿ ಗರ್ಭಿಣಿಯಾಗಿರುವ ವಿಷಯ ತಿಳಿಯುತ್ತಿದ್ದಂತೆ ಆರೋಪಿ ಮದುವೆಯಾಗಲು ನಿರಾಕರಿಸಿ ಕೈಕೊಟ್ಟಿದ್ದಾನೆ ಎಂದು ಯುವತಿ ದೂರು ನೀಡಿದ್ದಾಳೆ. ಯುವತಿ ನೀಡಿದ ದೂರಿನನ್ವಯ ಮಹಿಳಾ ಠಾಣೆ ಪೊಲೀಸರು ಆರೋಪಿ ವಿರುದ್ಧ ಅತ್ಯಾ೧ಚಾರ ಮತ್ತು ವಂಚನೆ ಪ್ರಕರಣ ದಾಖಲಿಸಿ ಕೊಂಡಿದ್ದಾರೆ.

ಟೈಲರ್ ಅಂಗಡಿ ಇಟ್ಕೊಂಡು ಯುವತಿಯರಿಗೆ ಹೊಂಚು ಹಾಕ್ತಿದ್ದ ಕಾಮುಕ

ಇದೀಗ ಪ್ರಕರಣ ದಾಖಲಿಸಿಕೊಂಡಿರುವ ಮಹಿಳಾ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಸುರೇಶ್ ರವರು ದುರ್ಗಿಗುಡಿ ಯಲ್ಲಿರುವ ಆರೋಪಿ ಕೆಲಸ ಮಾಡುತ್ತಿದ್ದ ಅಂಗಡಿಗೆ ಅತ್ಯಾ೧ಚಾರ ಕ್ಕೊಳಗಾದ ಯುವತಿಯನ್ನು ಕರೆದುಕೊಂಡು ಬಂದು ಸ್ಥಳ ಮಹಜರು ನಡೆಸಿದ್ದಾರೆ. ಅದೇ ಅಂಗಡಿಯಲ್ಲೇ ಯುವತಿ ಮೇಲೆ ಅತ್ಯಾ೧ಚಾರ ಕೃತ್ಯ ನಡೆದಿದೆ ಎಂದು ಆರೋಪಿಸಿದ್ದಾಳೆ. ವಿದ್ಯಾಭ್ಯಾಸ ಅಥವಾ ಉದ್ಯೋಗದ ಕಾರಣದಿಂದ ಹೊರ ರಾಜ್ಯಗಳಿಂದ ಬರುವ ಯುವತಿಯರಿಗೆ ಪಿಜಿ ಅಥವಾ ರೂಮ್ ಮಾಡಿಕೊಂಡ ಸಂದರ್ಭದಲ್ಲಿ ರಕ್ಷಣೆ ಎಂಬುದೇ ಇರುವುದಿಲ್ಲ. ಕುಟುಂಬ ತೊರೆದು ಬರುವ ಯುವತಿಯರನ್ನೇ ಟಾರ್ಗೆಟ್ ಮಾಡಿಕೊಳ್ಳುವ ಇಂಥ ಕಾಮುಕರು ಪ್ರೀತಿಯ ಹೆಸರಲ್ಲಿ ದೈಹಿಕ ಸಂಪರ್ಕ ಬೆಳೆಸಿ ನಡುನೀರಲ್ಲಿ ಕೈಬಿಟ್ಟು ಪರಾರಿಯಾಗುತ್ತಾರೆ.

ಇದೀಗ ಪ್ರೀತಿಯ ಹೆಸರಿನಲ್ಲಿ ಕಾಮದಾಟ ನಡೆಸಿ ಪರಾರಿಯಾಗಿರುವ ಯುವಕ ಶ್ರೀನಿಧಿ ವಿರುದ್ಧ ಹಲವಾರು ಯುವತಿಯರಿಗೆ ಇದೇ ರೀತಿ ವಂಚಿಸಿರುವ ಆರೋಪಗಳು ಕೇಳಿ ಬರುತ್ತಿವೆ. ಇದೀಗ ಶಿವಮೊಗ್ಗದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ತಲೆಮರೆಸಿ ಕೊಂಡಿದ್ದು, ಆತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಆದರೆ ನೊಂದ ಯುವತಿ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿ ಅತಂತ್ರ ಪರಿಸ್ಥಿತಿಯಲ್ಲಿ ನಿಂತಿದ್ದಾಳೆ

ಶಿವಮೊಗ್ಗದಿಂದ ರಾಜೇಶ್ ಏಷ್ಯಾನೆಟ್ ಸುವರ್ಣ ನ್ಯೂಸ್

PREV
Read more Articles on
click me!

Recommended Stories

ಹಿಪ್ಪರಗಿ ಬ್ಯಾರೇಜ್‌ನ ಕ್ರಸ್ಟ್‌ಗೇಟ್‌ಗಳ ಬದಲಾವಣೆಗೆ ₹42 ಕೋಟಿ ವೆಚ್ಚದ ಟೆಂಡರ್ ಆಹ್ವಾನಿಸಿದ ರಾಜ್ಯ ನೀರಾವರಿ ನಿಗಮ!
ಸಿಎಂ ಡಿಕೆ ಶಿವಕುಮಾರ್ ಸಿಟಿ ರೌಂಡ್: ಫುಟ್ಪಾತ್ ತೆರವು ಕಾರ್ಯಾಚರಣೆ ವೀಕ್ಷಣೆ, ಸಚಿವ ಕೃಷ್ಣ ಬೈರೇಗೌಡ ಸಾಥ್