ಪರವಾನಗಿ ಪಡೆದು ವ್ಯಾಪಾರ ಮಾಡಿ, ನೋಂದಣಿ ಮಾಡಿಸ್ಕೊಳ್ಳಿ ಅಂತ ಪಾಲಿಕೆ ಎಷ್ಟೇ ಸೂಚನೆ ನೀಡಿದ್ರೂ ಶಿವಮೊಗ್ಗದ ವ್ಯಾಪಾರಿಗಳು ಮಾತ್ರ ಪಾಲಿಕೆಯ ಪ್ರಕಟಣೆಗೂ ತಮಗೂ ಸಂಬಂಧವೇ ಇಲ್ಲದಂತೆ ವರ್ತಿಸ್ತಿದ್ದಾರೆ. ಕಾನೂನು ಕ್ರಮಗಳ ಬಗ್ಗೆ ತಿಳಿಸಿದ್ರೂ ಕ್ಯಾರೇ ಅನ್ನದ ವ್ಯಾಪಾರಿಗಳು ಪರವಾನಗಿ ಮಾತ್ರ ಪಡೆದುಕೊಳ್ತಿಲ್ಲ.
ಶಿವಮೊಗ್ಗ(ಸೆ.25): ವ್ಯಾಪಾರ ಪರವಾನಗಿ ಪಡೆದು ವಹಿವಾಟು ನಡೆಸುವಂತೆ ನಗರದ ವ್ಯಾಪಾರಸ್ಥರು ಹಾಗೂ ಅಂಗಡಿ ಮಾಲೀಕರಿಗೆ ಮಹಾನಗರ ಪಾಲಿಕೆ ನೀಡಿದ ಕರೆ ಮತ್ತು ಸೂಚನೆಗೆ ತೀರಾ ನೀರಸ
ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ ಇದರ ಮೂಲ ಸಮಸ್ಯೆ ಅರಿಯುವ ನಿಟ್ಟಿನಲ್ಲಿ ಪಾಲಿಕೆ ಮುಂದಾದಂತೆ ಇನ್ನೂ ಕಾಣುತ್ತಿಲ್ಲ.
ಬೆಳೆಯುತ್ತಿರುವ ನಗರದಲ್ಲಿ ಹೆಚ್ಚುತ್ತಿರುವ ವಾಣಿಜ್ಯ ವಹಿವಾಟಿಗೆ ಪೂರಕವಾಗಿ ಪರವಾನಗಿ ವಿತರಿಸುವ ನಿಟ್ಟಿನಲ್ಲಿ ಮಹಾನಗರ ಪಾಲಿಕೆ ಆಡಳಿತ ಹಮ್ಮಿಕೊಂಡಿರುವ ವಿಶೇಷ ಅಭಿಯಾನ ಈ ಕಾರಣದಿಂದ ಕುಂಟುತ್ತಾ ಸಾಗಿದೆ. ಸ್ಮಾರ್ಟ್ ಸಿಟಿಯಾಗಿ ಗುರುತಿಸಿಕೊಂಡಿರುವ ನಗರದಲ್ಲಿರುವ ವಾಣಿಜ್ಯ ಮಳಿಗೆ, ಅಂಗಡಿ ಮುಂಗಟ್ಟುಗಳಿಗೂ, ಪರವಾನಗಿ ಪಡೆದಿರುವವರ ಸಂಖ್ಯೆಗೂ ಸಾಕಷ್ಟು ವ್ಯತ್ಯಾಸವಿರುವುದು ಕಂಡು ಬರುತ್ತಿದೆ.
undefined
ಶಿವಮೊಗ್ಗ: ಅಭ್ಯರ್ಥಿಗಳ ಆಯ್ಕೆಯಲ್ಲಿ ಅನರ್ಹರಿಗೆ ಆದ್ಯತೆ, ಈಶ್ವರಪ್ಪ ಸ್ಪಷ್ಟನೆ
ಇಡೀ ನಗರದಲ್ಲಿ ಇರುವ ಈ ವ್ಯವಸ್ಥೆಯನ್ನು ಕಂಡು ವ್ಯಾಪಾರಿಗಳ ನೋಂದಣಿ ಕಡ್ಡಾಯ ಎಂದು ಪಾಲಿಕೆ ಕಡಕ್ ಸೂಚನೆ ನೀಡಿದ ಬಳಿಕವೂ ವ್ಯಾಪಾರಸ್ಥರಿಂದ ಅಂತಹ ಪ್ರತಿಕ್ರಿಯೆ ಬರಲಿಲ್ಲ. ಹೀಗಾಗಿ ಪಾಲಿಕೆಯು ರಿಯಾಯಿತಿಯೊಂದನ್ನು ಪ್ರಕಟಿಸಿತು. ವಾಣಿಜ್ಯ ಮಳಿಗೆಯ ಬಾಡಿಗೆದಾರರಿಗೆ ಘನತ್ಯಾಜ್ಯ ವಿಲೇ ಶುಲ್ಕದಿಂದ ವಿನಾಯಿತಿ ನೀಡಿ, ಕೇವಲ ವ್ಯಾಪಾರ ಪರವಾನಗಿ ಶುಲ್ಕ ಪಡೆ ಯಲಾಗುವುದು. ಕೇವಲ ವಾಣಿಜ್ಯ ಕಟ್ಟಡದ ಮಾಲೀಕರಿಂದ ಮಾತ್ರ ಘನತ್ಯಾಜ್ಯ ಶುಲ್ಕ ಸಂಗ್ರಹಿಸಲಾಗುವುದು ಎಂದು ಪ್ರಕಟಣೆ ನೀಡಿತು.
'ಹೌಡಿ ಮೋದಿ ಕಾರ್ಯಕ್ರಮ ಬರೀ ಬೂಟಾಟಿಕೆ'..!
ಆದರೆ ಆ ಬಳಿಕವೂ ವ್ಯಾಪಾರಿಗಳು ಸ್ಪಂದಿಸುತ್ತಿಲ್ಲ. ಪರವಾನಗಿ ಪಡೆಯುವ ಪ್ರಕ್ರಿಯೆಯನ್ನು ಸರಳೀಕರಣಗೊಳಿಸಿ ಆದೇಶ ಹೊರಡಿಸಿತು. ವ್ಯಾಪಾರಿಗಳಿದ್ದಲ್ಲಿಗೇ ಬಂದು ಪರವಾನಗಿ ವಿತರಣೆ ಮಾಡಲಾಗುವುದು ಎಂದು ಹೇಳಲಾ ಯಿತು. ಆದರೆ ಇದಾವುದೂ ಸರಿಯಾದ ರೀತಿ ಯಲ್ಲಿ ಆಗಲಿಲ್ಲ. ಪಾಲಿಕೆಯ ಯಾವ ಸೂಚನೆಗೂ ವ್ಯಾಪಾರಿಗಳು ಸ್ಪಂದಿಸಲಿಲ್ಲ. ಅಜಗಜಾಂತರ ವ್ಯತ್ಯಾಸ: ಇನ್ನು ಸ್ಮಾರ್ಟ್ ಸಿಟಿ ಯೋಜನೆಗೆ ಶಿವಮೊಗ್ಗ ಮಹಾನಗರ ಪಾಲಿಕೆಯನ್ನು ಸೇರ್ಪಡೆ ಮಾಡುವ ಸಂದರ್ಭದಲ್ಲಿ ಪಾಲಿಕೆ ವ್ಯಾಪ್ತಿಯ 35 ವಾರ್ಡ್‌ಗಳಲ್ಲಿ ಸಂಗ್ರಹಿಸಿದ ಮಾಹಿತಿ ಪ್ರಕಾರ ನಗರದಲ್ಲಿ ಸುಮಾರು
12,500 ವಾಣಿಜ್ಯ ಮಳಿಗೆ ಹಾಗೂ ಅಂಗಡಿ-ಮುಂಗಟ್ಟುಗಳಿವೆ. ಆದರೆ ಯಾವ ವಾಪ್ಯಾರಿಯೂ ನೋಂದಣಿ ಮಾಡಿಕೊಳ್ಳಲು ಮುಂದೆ ಬರುತ್ತಿಲ್ಲ.
ಕೇವಲ ಕೆಲವೇ ಕೆಲವು ವ್ಯಾಪಾರಿಗಳು ಮಾತ್ರ ನೊಂದಣಿಯಿಂದ ದೂರ ಇದ್ದಾರೆ ಎಂದು ಭಾವಿಸಬೇಕಾಗಿಲ್ಲ. ಶೇ. 10.4 ರಷ್ಟು ಮಾತ್ರ ನೊಂದಣಿಯಾಗಿದೆ. ಪಾಲಿಕೆಯ ಇಷ್ಟೆಲ್ಲಾ ಪ್ರಯತ್ನದ ನಡುವೆಯೂ ವ್ಯಾಪಾರಿಗಳು ನೊಂದಣಿ ಮಾಡುವಲ್ಲಿ ತೋರುತ್ತಿರುವ ನಿರುತ್ಸಾಹ ಕಂಡು ಸ್ವತಃ ಪಾಲಿಕೆಯ ಅಧಿಕಾರಿಗಳೇ ಆಶ್ಚರ್ಯಚಕಿತರಾಗಿದ್ದಾರೆ. 2019 ರ ಏಪ್ರಿಲ್‌ನಿಂದ ಸೆಪ್ಟೆಂಬರ್ 20ರ ತನಕದ ಅಂಕಿ-ಸಂಖ್ಯೆಯನ್ನು ಗಮನಿಸಿದರೆ 1,626 ಜನರು ಮಾತ್ರ ವ್ಯಾಪಾರ ಪರವಾನಗಿ ಪಡೆಯಲು ಅರ್ಜಿ ಸಲ್ಲಿಸಿದ್ದು, 1,285 ಜನರಿಗೆ ಪರವಾನಗಿ ವಿತರಿಸಲಾಗಿದೆ. ಉಳಿದವು ಪರಿಶೀಲನೆ ಮತ್ತು ವಿತರಣಾ ಪ್ರಕ್ರಿಯೆಯಲ್ಲಿವೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಈ ತನಕ ವಿತರಿಸಲಾಗಿರುವ ಪರವಾನಗಿ ಹಾಗೂ ಬಾಕಿ ಇದ್ದ ಶುಲ್ಕ ಹಾಗೂ ದಂಡದ ಪಾವತಿಯಿಂದ ಮಹಾನಗರ ಪಾಲಿಕೆಗೆ ಶುಲ್ಕ ರೂಪದಲ್ಲಿ 4,644, 433 ರು. ಆದಾಯ ಬಂದಿದೆ. ಈ ಮೊದಲಿದ್ದ ಪದ್ಧತಿಯನ್ನು ಬದಲಾಯಿಸಿ ಸರಳವಾಗಿ ವಾಣಿಜ್ಯ ಪರವಾನಗಿ ನೀಡುವ ವಿಧಾನದಲ್ಲಿ ಬದಲಾವಣೆ ಹಾಗೂ ಘನ ತ್ಯಾಜ್ಯ ಶುಲ್ಕದಲ್ಲಿ ರಿಯಾಯಿತಿ ಕುರಿತು ಪರವಾನಗಿ ಪಡೆಯುವ ಅಗತ್ಯತೆ ಕುರಿತು ಸಾರ್ವಜನಿಕವಾಗಿ ಜಾಗೃತಿ ಮೂಡಿಸಿದ್ದರೂ ಹೆಚ್ಚಿನ ಸಂಖ್ಯೆಯಲ್ಲಿ ವ್ಯಾಪಾರಸ್ಥರು ಪರವಾನಗಿ ಪಡೆಯಲು ಹಿಂದೇ ಟು ಹಾಕುತ್ತಿರುವುದು ಕಂಡು ಬರುತ್ತಿರುವುದು ಪಾಲಿಕೆಯ ಅಧಿಕಾರಿಗಳು ದಂಗು ಬಡಿದಿದ್ದಾರೆ.
ಆದರೆ ಸಮಸ್ಯೆ ಮೂಲ ಎಲ್ಲಿ, ಯಾಕಾಗಿ ವ್ಯಾಪಾರಿಗಳು ಈ ಪ್ರಕ್ರಿಯೆಯಿಂದ ದೂರ ಇದ್ದಾರೆ ಎಂಬುದರ ಬಗ್ಗೆ ಪಾಲಿಕೆ ಗಮನ ಹರಿಸುತ್ತಿಲ್ಲ.
ವ್ಯಾಪಾರ ಉದ್ದಿಮೆ ಆರಂಭಿಸಲು ಜಿಎಸ್‌ಟಿ ಸರ್ಟಿಫಿಕೆಟ್ ಎಷ್ಟು ಮುಖ್ಯವೋ, ಪಾಲಿಕೆ ಯಿಂದ ಪಡೆಯುವ ಪರವಾನಗಿ ಕೂಡ ಅಷ್ಟೇ ಮುಖ್ಯ ಎಂಬುದನ್ನು ಪಾಲಿಕೆ ವ್ಯಾಪಾರಿಗಳಿಗೆ ಮನವರಿಕೆ ಮಾಡಿಕೊಡಬೇಕು. ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಪಾಲಿಕೆಯ ಅಧಿಕಾರಿಗಳು, ಮಧ್ಯವರ್ತಿಗಳ ಹಾವಳಿಯಿಲ್ಲದೆ, ಆನ್‌ಲೈನ್ ಮೂಲಕವೇ ಈ ನೊಂದಣಿ ಸಾಧ್ಯವಾಗುವಂತೆ ಮಾಡಿದರೆ ವ್ಯಾಪಾರಿಗಳು ಸ್ಪಂದಿಸುವ ಸಾಧ್ಯತೆ ಇದೆ.
ನೋಂದಣಿ ಬಗ್ಗೆ ತಲೆ ಕೆಡಿಸಿಕೊಳ್ಳದ ಅಧಿಕಾರಿಗಳು:
ಪಾಲಿಕೆಯಿಂದ ನೀಡುವ ಪರವಾನಗಿ ವ್ಯಾಪಾರಿಗಳ ಯಾವುದೇ ವ್ಯಾಪಾರ ವ್ಯವಹಾರಕ್ಕೆ ಅನಿವಾರ್ಯ ಎಂಬುದು ಅವರಿಗೆ ಕಂಡು ಬರುತ್ತಿಲ್ಲ. ಬ್ಯಾಂಕ್‌ನಲ್ಲಿ ಸಾಲ ನೀಡಲು ಮಾತ್ರ ಪಾಲಿಕೆಯ ನೋಂದಣಿ ಪತ್ರ ಕೇಳಲಾಗುತ್ತಿದೆಯೇ ವಿನಃ ಉಳಿದಂತೆ ವ್ಯವಹಾರಕ್ಕೆ ಯಾವುದೇ ಅಡ್ಡಿಯಿಲ್ಲವಾಗಿರುವುದರಿಂದ ಈ ನೋಂದಣಿ ಬಗ್ಗೆ ವ್ಯಾಪಾರಿಗಳು ತಲೆ ಕೆಡಿಸಿಕೊಂಡಿಲ್ಲ. ಇದರ ಜೊತೆಗೆ ವ್ಯಾಪಾರಿಗಳು ಪಾಲಿಕೆಯಿಂದ ಅಂತರ ಕಾಪಾಡಿಕೊಳ್ಳಲು ಮುಖ್ಯ ಕಾರಣವೆಂದರೆ ಪಾಲಿಕೆಯ ಅಧಿಕಾರಿಗಳ ವರ್ತನೆ. ಪತ್ರಿಕಾ ಹೇಳಿಕೆಗಳಲ್ಲಿ ಇವು ಸುಂದರವಾಗಿ ಕಾಯುತ್ತಿದ್ದರೂ, ಲೈಸೆನ್ಸ್‌ಗಾಗಿ ಒಮ್ಮೆ ಅರ್ಜಿ ಸಲ್ಲಿಸಿದರೆ, ಇನ್ನಿಲ್ಲದಂತೆ ಕಾಡಿ ಬಿಡುತ್ತಾರೆ ಎಂಬ ಭಯ.
ಶಿವಮೊಗ್ಗ : 2 ಸಾವಿರಕ್ಕೂ ಹೆಚ್ಚು ನಿವೇಶನ ಹಂಚಿಕೆ
ಹಿಂದಿನಿಂದ ನೋಂದಣಿ ಮಾಡಿಲ್ಲದೆ ಇರುವವರು ಈಗ ನೋಂದಣಿಗೆ ಹೋದರೆ ಹಳೆಯ ವರ್ಷದಿಂದ ದಂಡ ಎಂದು ಭಾರೀ ಶುಲ್ಕ ಪಡೆಯಲಾಗುತ್ತದೆ. ಇದನ್ನು ಮುಂದಿಟ್ಟುಕೊಂಡು ಅಧಿಕಾರಿಗಳು ಪೀಡಿಸಲಾರಂಭಿಸುತ್ತಾರೆ. ಆರೋಗ್ಯ ವಿಭಾಗದವರು ಪರಿಶೀಲನೆಯ ನೆಪದಲ್ಲಿ ಬಂದು ಹಣಕ್ಕೆ ಬೇಡಿಕೆ ಮುಂದಿಡುತ್ತಾರೆ ಎಂಬ ಮಾತುಗಳನ್ನು ವ್ಯಾಪಾರಿಗಳು ಹೇಳುತ್ತಾರೆ. ಪರವಾನಗಿ ನೀಡಿಕೆಯ ವ್ಯವಸ್ಥೆ ಯನ್ನು ಸರಳೀಕರಣಗೊಳಿಸಲಾಗಿದೆ ಎಂಬುದು ಕೂಡ ಪತ್ರಿಕಾ ಹೇಳಿಕೆ. ಒಮ್ಮೆ ನಗರ ಪಾಲಿಕೆಗೆ ಹೋದರೆ ಅಲ್ಲಿ ನಿಜವಾದ ಸಂಕಷ್ಟಗಳು ಆರಂಭಗೊಳ್ಳುತ್ತದೆ ಎಂದು ವ್ಯಾಪಾರಿಗಳು ತಮ್ಮ ಅಳಲು ತೋಡಿಕೊಳ್ಳುತ್ತಾರೆ.
-ಗೋಪಾಲ್ ಯಡಗೆರೆ