ವಿಶ್ವವಿಖ್ಯಾತ ಮೈಸೂರು ದಸರಾ ಹೊಸ್ತಿಲಲ್ಲಿ KS ಭಗವಾನ್ ಹೊಸ ವಿವಾದ

By Web DeskFirst Published Sep 25, 2019, 1:48 PM IST
Highlights

ಇನ್ನೇನು ದಸರಾ ಸಂಭ್ರಮಕ್ಕೆ ದಿನಗಣನೆ ಆರಂಭವಾಗಿದ್ದರೆ ಇತ್ತ ಸಾಹಿತಿ ಪ್ರೊ. ಕೆ. ಎಸ್‌. ಭಗವಾನ್‌ ಹೊಸ ವಿವಾದವೊಂದನ್ನು ಹುಟ್ಟುಹಾಕಿದ್ದಾರೆ.

ಮೈಸೂರು, (ಸೆ.25): ಒಂದಲ್ಲ ಒಂದು ವಿವಾದವನ್ನು ಮೈಮೇಲೆ ಎಳೆದುಕೊಳ್ಳುವ ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ವಿಶ್ವವಿಖ್ಯಾತ ಮೈಸೂರು ದಸರಾ ಹೊಸ್ತಿಲಲ್ಲಿ ಮತ್ತೊಂದು ವಿವಾದಕ್ಕೆ ಗುರಿಯಾಗಿದ್ದಾರೆ.

ಮಹಿಷನ ಪ್ರತಿಮೆ ಹೋಲುವ ಮನುಷ್ಯ ಇಡೀ ವಿಶ್ವದಲ್ಲೇ ಇಲ್ಲ. ಹಾಗಾಗಿ ಚಾಮುಂಡಿಬೆಟ್ಟದಲ್ಲಿರುವ ಮಹಿಷಾಸುರನ ಪ್ರತಿಮೆಯನ್ನು ತೆರವುಗೊಳಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

‘ಮಾತನಾಡಿದ್ರೆ ವಿವಾದ ಆಗುತ್ತೆ..ಕೇಸ್ ಬೀಳುತ್ತೆ.. ಈಗಾಗ್ಲೆ ಎರಡಿದೆ'

ಚಾಮುಂಡಿ ಬೆಟ್ಟದಲ್ಲಿರುವ ಮಹಿಷಾಸುರ ಪ್ರತಿಮೆಯಂತಹ ಪ್ರತಿಮೆ ಜಗತ್ತಿನಲ್ಲಿ ಎಲ್ಲಿಯೂ ಇಲ್ಲ. ಅದನ್ನು ನೋಡಿದರೆ ಮಕ್ಕಳು ಹಾಗೂ ಮಹಿಳೆಯರು ಹೆದರಿಕೊಳ್ಳುತ್ತಾರೆ.

ಒಂದು ಕೈಯಲ್ಲಿ ಕತ್ತಿ, ಒಂದು ಕೈಯಲ್ಲಿ ಹಾವು ಹಿಡಿದುಕೊಂಡು ಮೀಸೆ -ಗಡ್ಡ ಬಿಟ್ಟ ರೀತಿಯ ಮನುಷ್ಯ ಪ್ರಪಂಚದ ಯಾವ ಮೂಲೆಯಲ್ಲೂ ಇಲ್ಲ. ರಾಕ್ಷಸ ರೂಪದ ಪ್ರತಿಮೆ ತೆಗೆದು ಸೌಮ್ಯ ರೂಪದ ಬೌದ್ಧ ಬಿಕ್ಕುವಾಗಿ ಪರಿವರ್ತಿಸಿ ಎಂದು ಹೇಳುವ ಮೂಲಕ ಹೊಸ ವಿವಾದವನ್ನು ಹುಟ್ಟುಹಾಕಿದರು.

ಮೈಸೂರು: ದಸರಾ ಹಿನ್ನೆಲೆ ಮಾರ್ಗ ಬದಲಾವಣೆ ಎಲ್ಲೆಲ್ಲಿ..?

 ಕೃಷ್ಣರಾಜ ಒಡೆಯರ್, ನಾಲ್ವಡಿ ಕೃಷ್ಣರಾಜ ಒಡೆಯರ್, ಚಾಮರಾಜ ಒಡೆಯರ್ ಕಾಲದಲ್ಲಿ ಈ ಪ್ರತಿಮೆ ಇರಲಿಲ್ಲ. ಮೈಸೂರಿನ ಕೊನೆಯ ರಾಜರ ಕಾಲದಲ್ಲಿ ಪುರೋಹಿತಶಾಹಿ ವರ್ಗ ಅವರಿಗೆ ಸುಳ್ಳು ಹೇಳಿ ಪ್ರತಿಮೆ ಸ್ಥಾಪಿನೆ ಮಾಡಿಸಿದ್ದಾರೆ ಎಂದು ಹೇಳಿದರು.

ದಸರಾದಲ್ಲಿ ನಡೆಯುವ ಚಾಮುಂಡಿ ಉತ್ಸವಕ್ಕೂ ಮಹಿಷನಿಗೂ ಸಂಬಂದವಿಲ್ಲ. ಚಾಮುಂಡಿ ಮಹಿಷನನ್ನು ಕೊಂದಳು ಎಂಬುದು ಕೇವಲ ಕಥೆ ಎಂದು ಹೇಳುವ ಮೂಲಕ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

click me!