ಶಿವಮೊಗ್ಗ ಸಫಾರಿ ಕಿಂಗ್ ಸರ್ವೇಶ್ ಇನ್ನಿಲ್ಲ: ಹಿಮೋ ಫ್ರೋಟೋಜೋನ್ ಕಾಯಿಲೆಗೆ ಬಲಿ

By Sathish Kumar KHFirst Published Feb 1, 2024, 3:23 PM IST
Highlights

ಶಿವಮೊಗ್ಗ ಜನತೆಯ ಸಫಾರಿ ಕಿಂಗ್ ಎಂದೇ ಖ್ಯಾರಿಯನ್ನು ಗಳಿಸಿದ್ದ ಸರ್ವೇಶ್ ಸಿಂಹ ಬಹುದಿನಳ ಹಿಮೋ ಫ್ರೋಟೋಜೋನ್ ಕಾಯಿಲೆಗೆ ತುತ್ತಾಗಿ, ಸಾವನ್ನಪ್ಪಿದೆ.

ಶಿವಮೊಗ್ಗ (ಫೆ.01): ರಾಜ್ಯದ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಜನತೆಯ ಸಫಾರಿ ಕಿಂಗ್ ಎಂದೇ ಖ್ಯಾರಿಯನ್ನು ಗಳಿಸಿದ್ದ ಸರ್ವೇಶ್ ಸಿಂಹ ಬಹುದಿನಳ ಹಿಮೋ ಫ್ರೋಟೋಜೋನ್ ಕಾಯಿಲೆಗೆ ತುತ್ತಾಗಿ, ಸಾವನ್ನಪ್ಪಿದೆ.

ಶಿವಮೊಗ್ಗದ  ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದಲ್ಲಿರುವ ಸರ್ವೇಶ ಸಿಂಹ (13 ವರ್ಷ) ಅನಾರೋಗ್ಯಕ್ಕೆ ಬಲಿಯಾಗಿದೆ. ಹಲವು ವರ್ಷಗಳ ಹಿಂದೆ ಬೆಂಗಳೂರಿನ ಹೊರ ವಲಯದಲ್ಲಿರುವ ಬನ್ನೇರುಘಟ್ಟ ರಾಷ್ಟ್ರೀಯ ಜೈವಿಕ ಉದ್ಯಾನವನದಿಂದ ಶಿವಮೊಗ್ಗಕ್ಕೆ ಶಿಫ್ಟ್ ಮಾಡಲಾಗಿತ್ತು. ಕಳೆದ ನಾಲ್ಕು ವರ್ಷಗಳಿಂದ ಲಯನ್ ಸಫಾರಿಯಲ್ಲಿ ಪ್ರವಾಸಿಗರ ವೀಕ್ಷಣೆಗೆ ಕಾಣಿಸಿಕೊಂಡಿತ್ತು. ಎಂದಿನಂತೆ ಆರಾಮವಾಗಿದ್ದ ಸಿಂಹಕ್ಕೆ ನಿನ್ನೆ ವಾಂತಿ ಕಾಣಿಸಿಕೊಂಡಿತ್ತು. ವಾಂತಿಯಿಂದ ಬಳಲಿದ್ದ ಸಿಂಹವನ್ನು ಕೂಡಲೇ ಚಿಕಿತ್ಸೆಗೆ ರವಾನಿಸಲಾಗಿತ್ತು.

ರೈಲಿನ ಮಹಿಳಾ ಬೋಗಿಯಲ್ಲಿದ್ದ ಮಹಿಳೆಯನ್ನು ತಳ್ಳಿ ಕೊಲೆ ಶಂಕೆ: ಅರಣ್ಯ ಇಲಾಖೆ ಸಿಬ್ಬಂದಿ ಸಾವು

ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದಿಂದ ಸರ್ವೇಶ ಸಿಂಹವನ್ನು ತಕ್ಷಣವೇ ಪಶುವೈದ್ಯಕೀಯ ಕಾಲೇಜಿಗೆ ರವಾನಿಸಿ ಚಿಕಿತ್ಸೆ ನೀಡಲಾಗಿದೆ. ಆದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದೆ. ಆದರೆ,  ಸಿಂಹ ಹಿಮೋ ಫ್ರೋಟೋಜೋನ್ ಎಂಬ ಕಾಯಿಲೆಯಿಂದ ಬಳಲುತ್ತಿತ್ತು. ಈ ಸೋಂಕು ಕಾಣಿಸಿಕೊಳ್ಳುವ ಪ್ರಾಣಿಗಳನ್ನು ಉಳಿಸಿಕೊಳ್ಳುವುದು ಕಷ್ಟ ಎಂದು ವೈದ್ಯರು ಹೇಳಿದ್ದರು. ಈ ರೋಗಕ್ಕೆ ತುತ್ತಾದ ಪ್ರಾಣಿ ಯ ರಕ್ತಕಣಗಳನ್ನು ನಾಶಮಾಡುತ್ತಾ ಬರುವ ಸೋಂಕು ಅಂತಿಮವಾಗಿ ಪ್ರಾಣಿಯನ್ನು ಬಲಿ ತೆಗೆದು ಕೊಳ್ಳುತ್ತದೆ. ಮುಖ್ಯವಾಗಿ ಅನಾರೋಗ್ಯದ ಲಕ್ಷಣ ಕಾಣಿಸಿಕೊಳ್ಳುವುದಕ್ಕೂ ಮೊದಲೇ ಈ ಕಾಯಿಲೆ ದೊಡ್ಡ ಮಟ್ಟದಲ್ಲಿ ಉಲ್ಬಣಗೊಂಡಿರುತ್ತದೆ. ಹಾಗಾಗಿ, ಸಿಂಹವನ್ನು ಬದಲಿಸಿಕೊಳ್ಳುವುದಕ್ಕೆ ಸಾಧ್ಯವಾಗಲಿಲ್ಲ ಎಂದು ಸಿಂಹಧಾಮದ ಸಿಬ್ಬಂದಿ ಹೇಳಿದ್ದಾರೆ.

ಇನ್ನು ರಾಜ್ಯದಾದ್ಯಂತ ವಿವಿಧೆಡೆಯಿಂದ ಹುಲಿ ಮತ್ತು ಸಿಂಹಧಾಮಕ್ಕೆ ಬರುತ್ತಿದ್ದ ಪ್ರವಾಸಿಗರಿಗೆ ಸರ್ವೇಶ ಸಿಂಹ ಅಚ್ಚುಮೆಚ್ಚಿನ ಆಕರ್ಷಣೆಯಾಗಿತ್ತು. ಇನ್ನು ಸಿಂಹಕ್ಕೆ ಇಳಿ ವಯಸ್ಸಾಗಿದ್ದು, ಅನಾರೋಗ್ಯದ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸಾವನ್ನಪ್ಪಿದೆ ಎನ್ನಲಾಗಿದೆ. ಆದರೆ, ಈ ಘಟನೆಯಿಂದ ಪ್ರವಾಸಿಗರಿಗೆ ನೋವುಂಟೂ ಆಗಿದೆ.

ಬೆಳಗಾವಿ ಡಬಲ್ ಮರ್ಡರ್: ಮದುವೆಯಾಗಿ 30 ದಿನಕ್ಕೆ ಓಡಿಹೋದ ಹೆಂಡ್ತಿಯನ್ನು ಪ್ರಿಯಕರನೊಂದಿಗೆ ಕೊಲೆಗೈದ ಗಂಡ

ಶಿವಮೊಗ್ಗದಿಂದ ಬೆಂಗಳೂರಿಗೆ ರೈಲಿನಲ್ಲಿ ಬರುತ್ತಿದ್ದ ಪ್ರಯಾನಿಕಮಹಿಳೆ ಸಾವು:
ತುಮಕೂರು (ಫೆ.01):
ಬೆಂಗಳೂರಿನ ಅರಣ್ಯ ಭವನದ ಸಿಬ್ಬಂದಿ ಶಿವಮೊಗ್ಗದಲ್ಲಿ ನಡೆದ ಡಿಎಆರ್ ಪರೀಕ್ಷಾ ಮೇಲ್ವಿಚಾರಕಿಯಾಗಿ ಕಾರ್ಯ ನಿರ್ವಹಿಸಿ ವಾಪಸ್ ರೈಲಿನಲ್ಲಿ ಬರುವಾಗ ತುಮಕೂರು ಬಳಿ ಬಿದ್ದು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ನಡೆದಿದೆ. ತುಮಕೂರು ಸಮೀಪದ ಹಿರೇಹಳ್ಳಿ ಸಮೀಪ ಘಟನೆ ನಡೆದಿದ್ದು, ಮೃತರನ್ನು ಅನ್ನಪೂರ್ಣ (50) ಎಂದು ಗುರುತಿಸಲಾಗಿದೆ. ಹಿರೇಹಳ್ಳಿಯ ರೈಲ್ವೇ ಹಳಿ ಮೇಲೆ ಮೃತ ಶರೀರ‌ ಪತ್ತೆಯಾಗಿದೆ. ಇವರು ಶಿವಮೊಗ್ಗ ಜಿಲ್ಲೆ ಭದ್ರಾವತಿ ಮೂಲದವರಾಗಿದ್ದಾರೆ. ಬೆಂಗಳೂರಿನ ಮಲ್ಲೇಶ್ವರಂ ಅರಣ್ಯ ಭವನದಲ್ಲಿ ಸ್ಟೆನೋಗ್ರಾಫರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಬೆಂಗಳೂರಿನ ಮಲ್ಲೇಶ್ವರಂನಲ್ಲಿ ವಾಸವಾಗಿದ್ದ ಅನ್ನಪೂರ್ಣ ಅವರು ಪರೀಕ್ಷಾ ಕೊಠಡಿ ಮೇಲ್ವಿಚಾರಕ ಕಾರ್ಯನಿರ್ವಹಣೆ ನಿಮಿತ್ತ ಶಿವಮೊಗ್ಗಕ್ಕೆ ತೆರಳಿದ್ದರು. ಕೆಲಸ ಮುಗಿಸಿ ವಾಪಸ್ ರೈಲಿನಲ್ಲಿ  ಬೆಂಗಳೂರಿಗೆ ಬರುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ.

click me!