ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಉಮೇದುವಾರಿಕೆ ಸಲ್ಲಿಕೆ ಮತ್ತು ನಾಮಪತ್ರ ವಾಪಸ್ ಪಡೆಯುವ ಗಡುವು ಮುಕ್ತಾಯವಾಗಿದ್ದು, ಒಟ್ಟು 23 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಶಿವಮೊಗ್ಗ (ಏ.22): ಲೋಕಸಭಾ ಚುನಾವಣೆ 2024ರಲ್ಲಿ ಅತಿಹೆಚ್ಚು ಕುತೂಹಲ ಮೂಡಿಸಿರುವ ಕ್ಷೇತ್ರಗಳಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರವೂ ಒಂದಾಗಿದೆ. ಕರ್ನಾಟಕದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ ಬಿ.ಎಸ್.ಯಡಿಯೂರಪ್ಪ ಕುಟುಂಬವು ಕಳೆದೆರಡು ದಶಕಗಳಿಂದ ಶಿವಮೊಗ್ಗದ ಮೇಲೆ ಬಿಗಿ ಹಿಡಿತ ಸಾಧಿಸಿದೆ. ಬಿಜೆಪಿ ಭದ್ರಕೋಟೆಯಾಗಿದ್ದ ಶಿವಮೊಗ್ಗದಲ್ಲಿ ಈಗ ಕಮಲಕ್ಕೆ ಬಂಡಾಯ ಆರಂಭವಾಗಿದೆ. ಇಲ್ಲಿ ಹಾಲಿ ಸಂಸದ ಬಿ.ವೈ. ರಾಘವೇಂದ್ರ, ಬಿಜೆಪಿಗೆ ಬಂಡಾಯವೆದ್ದು ಕೆ.ಎಸ್. ಈಶ್ವರಪ್ಪ ಹಾಗೂ ಕಾಂಗ್ರೆಸ್‌ನಿಂದ ಗೀತಾ ಶಿವ ರಾಜ್‌ಕುಮಾರ್ ಪ್ರಮುಖ ಸ್ಪರ್ಧಾಳುಗಳಾಗಿದ್ದಾರೆ. ಜೊತೆಗೆ ಇತರೆ ಪಕ್ಷಗಳು ಮತ್ತು ಪಕ್ಷೇತರವಾಗಿ 20 ಅಭ್ಯರ್ಥಿಗಳು ಗೆಲುವಿಗಾಗಿ ಸೆಣಸಾಡಲಿದ್ದಾರೆ.
ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಇಂದು ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದ್ದು, ಪಕ್ಷೇತರ ಅಭ್ಯರ್ಥಿಗಳಾದ ಶಶಿಕುಮಾರ್, ಬಾಲಕೃಷ್ಣ ಭಟ್, ಶೇಖರಪ್ಪ ತಮ್ಮ ಉಮೇದುವಾರಿಕೆಯನ್ನು ಹಿಂಪಡೆದಿದ್ದಾರೆ. ಈ ಮೂಲಕ ಶಿವಮೊಗ್ಗ ಕ್ಷೇತ್ರದಲ್ಲಿ ಅಂತಿಮವಾಗಿ ಒಟ್ಟು 23 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ. ಇನ್ನು ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಮೇ 7ರಂದು ಮತದಾನ ನಡೆಯಲಿದ್ದು, ಜೂನ್ 4ರಂದು ಫಲಿತಾಂಶ ಹೊರ ಬೀಳಲಿದೆ.
undefined
ಬಂಡಾಯ ಅಭ್ಯರ್ಥಿ ಕೆಎಸ್ ಈಶ್ವರಪ್ಪಗೆ ಪ್ರತ್ಯೇಕ ಚಿಹ್ನೆ ನೀಡಿದ ಚುನಾವಣಾ ಆಯೋಗ!
ಪ್ರಮುಖ ಪಕ್ಷಗಳು- ಅಭ್ಯರ್ಥಿಗಳು
ಬಿಜೆಪಿ -ಬಿ.ವೈ.ರಾಘವೇಂದ್ರ
ಕಾಂಗ್ರೆಸ್ - ಗೀತಾ ಶಿವ ರಾಜ್ ಕುಮಾರ್
ಕರ್ನಾಟಕ ರಾಷ್ಟ್ರ ಸಮಿತಿ- ಎಸ್.ಕೆ.ಪ್ರಭು
ಉತ್ತಮ ಪ್ರಜಾಕೀಯ - ಅರುಣ ಕೆ.ಎ
ಬಹುಜನ ಸಮಾಜ ಪಾರ್ಟಿ - ಎ.ಡಿ.ಶಿವಪ್ಪ
ಯಂಗ್‍ಸ್ಟರ್ ಎಂಪರ್‍ಮೆಂಟ್ ಪಾರ್ಟಿ - ಯೂಸುಫ್ ಖಾನ್
ಪಕ್ಷೇತರ ಅಭ್ಯರ್ಥಿಗಳಾಗಿ ಕೆ.ಎಸ್.ಈಶ್ವರಪ್ಪ, ರವಿಕುಮಾರ್ ಎಸ್, ಶಿವರುದ್ರಯ್ಯ ಸ್ವಾಮಿ, ಹೆಚ್ ಸುರೇಶ್ ಪೂಜಾರಿ, ಚಂದ್ರಶೇಖರ್ ಹೆಚ್.ಸಿ, ಜಾನ್ ಬೆನ್ನಿ, ಪಿ.ಶ್ರೀಪತಿ, ರವಿಕುಮಾರ್ ಎನ್, ಪೂಜಾ ಅಣ್ಣಯ್ಯ, ಇಂತಿಯಾಜ್ ಎ.ಅತ್ತಾರ್, ಸಂದೇಶ್ ಶೆಟ್ಟಿ ಎ, ಬಂಡಿ ರಂಗನಾಥ ವೈ.ಆರ್, ಹನುಮಂತಪ್ಪ, ಜಿ.ಜಯದೇವ, ಎನ್.ವಿ.ನವೀನ್ ಕುಮಾರ್, ಗಣೇಶ್.ಬಿ, ಕುಣಜೆ ಮಂಜುನಾಥ ಗೌಡ ಅಂತಿಮವಾಗಿ ಕಣದಲ್ಲಿದ್ದಾರೆ.
ಕಾಂಗ್ರೆಸ್ ಸರ್ಕಾರ ಪೊಲೀಸರಿಗೆ ಕೆಲಸ ಮಾಡೋಕೆ ಬಿಡಲ್ಲ; ರಾಜ್ಯಕ್ಕೆ ಸಿಂಘಂ ಅಣ್ಣಾಮಲೈ ಎಂಟ್ರಿಯಾಗುತ್ತಲೇ ಗಂಭೀರ ಆರೋಪ
18ನೇ ಲೋಕಸಭೆಗೆ ಏಪ್ರಿಲ್ 19 ರಿಂದ ಜೂನ್ 1 ರವರೆಗೆ ದೇಶಾದ್ಯಂತ ಒಟ್ಟು ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಉತ್ತರ ಹಾಗೂ ದಕ್ಷಿಣ ಕರ್ನಾಟಕದಲ್ಲಿ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮೊದಲ ಹಂತ ಏಪ್ರಿಲ್ 26 (ಚಿತ್ರದುರ್ಗ, ಉಡುಪಿ-ಚಿಕ್ಕಮಗಳೂರು, ದಕ್ಷಿಣ ಕನ್ನಡ, ಹಾಸನ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಗ್ರಾಮಾಂತರ ಹಾಗೂ ಬೆಂಗಳೂರು ಸೆಂಟ್ರಲ್), 2ನೇ ಹಂತದ ಚುನಾವಣೆ ಮೇ 7 (ಶಿವಮೊಗ್ಗ, ದಾವಣಗೆರೆ, ಹಾವೇರಿ, ಉತ್ತರ ಕನ್ನಡ, ಬಳ್ಳಾರಿ, ಧಾರವಾಡ, ಕೊಪ್ಪಳ, ಬೆಳಗಾವಿ, ಚಿಕ್ಕೋಡಿ, ಬಾಗಲಕೋಟೆ, ರಾಯಚೂರು, ಬಿಜಾಪುರ ಕಲಬುರಗಿ ಮತ್ತು ಬೀದರ್) ರಂದು ನಡೆಯಲಿದೆ. ಫಲಿತಾಂಶ ಜೂನ್ 4ಕ್ಕೆ ಪ್ರಕಟವಾಗಲಿದೆ.