'ಜಾರಕಿಹೊಳಿ ಸಿಡಿ ಪ್ರಕರಣ: ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಲಿ'

By Sujatha NR  |  First Published Mar 10, 2021, 4:03 PM IST

ಸಿಡಿ ಪ್ರಕರಣದಲ್ಲಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ರಮೇಶ್ ಜಾರಕಿಹೊಳಿ ಇದೀಗ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಲಿ ಎಂದು ಆಗ್ರಹಿಸಲಾಗಿದೆ. ಪಕ್ಷ ರಾಜೀನಾಮೆ ಪಡೆಯಲೆಂದು ಮುಖಂಡರೋರ್ವರು ಹೇಳಿದ್ದಾರೆ. 


 ಶಿಕಾರಿಪುರ (ಮಾ.10):  ಕೇಂದ್ರ ಹಾಗೂ ರಾಜ್ಯ ಸರ್ಕಾರ ಮತ್ತು ಪಕ್ಷಕ್ಕೆ ಮುಜುಗರವಾಗದಂತೆ ಸಚಿವರೊಬ್ಬರಿಂದ ಸಚಿವ ಸ್ಥಾನದಿಂದ ಮಾತ್ರ ರಾಜಿನಾಮೆ ಪಡೆಯಲಾಗಿದೆ. ಅವರು ಸಚಿವರಾಗಿ ಜನಸೇವೆ ಮಾಡುವುದು ತಪ್ಪಾಗಿದ್ದರೆ ಶಾಸಕನಾಗಿ ಜನಸೇವೆ ಮಾಡಬಹುದೇ? ನಿಜವಾಗಿಯೂ ಪಕ್ಷಕ್ಕೆ ಮುಜುಗರವಾಗಿದ್ದರೆ ಶಾಸಕ ಸ್ಥಾನಕ್ಕೂ ರಾಜಿನಾಮೆ ಪಡೆಯಲಿ ಎಂದು ಜಯಕರ್ನಾಟಕ ಜನಪರ ವೇದಿಕೆ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹುಲಿಗಿ ಕೃಷ್ಣ ಹೇಳಿದರು.

"

Tap to resize

Latest Videos

ಮಂಗಳವಾರ ಸುದ್ದಿಮನೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಹಲವು ಸಚಿವರು ಇತ್ತೀಚಿನ ದಿನದಲ್ಲಿ ಲೈಂಗಿಕ ಹಗರಣದಲ್ಲಿ ಸಿಲುಕಿಕೊಂಡು ನಾಡಿನ ಜನತೆ ತಲೆತಗ್ಗಿಸುವಂತೆ ವರ್ತಿಸುತ್ತಿದ್ದಾರೆ. ಖಾಸಗಿ ಲೈಂಗಿಕ ಸಿಡಿ ಪ್ರಸಾರದಿಂದಾಗಿ ಸಚಿವರೊಬ್ಬರು ರಾಜ್ಯಾದಂತ ದೇಶಾದ್ಯಂತ ಸುದ್ದಿಯಾಗಿ, ಸಚಿವ ಸ್ಥಾನ ಕಳೆದುಕೊಂಡಿದ್ದು ಶೋಚನಿಯ. ಪರಸ್ಪರ ಒಪ್ಪಿಗೆಯ ವಿಡಿಯೋ ಖಾಸಗಿ ತನವಾಗಿದೆ. ದೂರು ನೀಡಬೇಕಾದವರೂ ದೂರು ನೀಡದೇ ದುರುದ್ದೇಶದಿಂದ ಅನ್ಯರು ದೂರು ನೀಡಿ, ಕೇವಲ ಪ್ರಚಾರ ಗಿಟ್ಟಿಸಿಕೊಂಡು ಸಚಿವರ ತಲೆದಂಡವಾಗಿದೆ ಎಂದು ತಿಳಿಸಿದರು.

ಸಾಹುಕಾರ್‌ನ ಕಾಮಕಾಂಡ: 'ಜಾರಕಿಹೊಳಿ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಲಿ

ನೂತನ 6 ಸಚಿವರು ತಮ್ಮ ಸಿಡಿ ಸಹ ಬಿಡುಗಡೆಯಾಗಲಿದೆ ಎಂದು, ಕೂಡಲೇ ನ್ಯಾಯಲಯದಿಂದ ಪ್ರಸಾರ ತಡೆಕೋರಿ ಆದೇಶ ತಂದಿರುವುದು ನಿಜಕ್ಕೂ ಸಂತಸದ ವಿಚಾರ. ಅವರು ತಪ್ಪು ಮಾಡಿದವರು ಮಾತ್ರ ಬಹುತೇಕ ತಡೆಯಾಜ್ಞೆ ಕೋರುವುದು ನಿರೀಕ್ಷಣಾ ಜಾಮೀನು ಪಡೆಯುವುದು ವಾಡಿಕೆ. ಅದರಂತೆ ಈ ಸಚಿವರು ಪ್ರಸಾರವಾಗದಂತೆ ತಡೆ ಕೋರುವ ಮೂಲಕ ಬೆತ್ತಲೆಯನ್ನು ಜನ ನೋಡದಂತೆ ಮುಂಜಾಗ್ರತೆ ವಹಿಸಿರುವ ಕ್ರಮಕ್ಕೆ ಸಂಘಟನೆ 6 ಸಚಿವರನ್ನು ಅಭಿನಂದಿಸುತ್ತದೆ ಎಂದರು.

ಸಂಘಟನೆ ಕಾನೂನು ಸಲಹೆಗಾರ, ನ್ಯಾಯವಾದಿ ರಾಜು ನಾಯ್ಕ, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಯು.ನಜೀರ್‌ ಅಹ್ಮದ್‌, ತಾಲೂಕು ಸಂಘಟನಾ ಸಂಚಾಲಕ ಶಿವಯ್ಯ ಶಾಸ್ತ್ರಿ ಮತ್ತಿತರರು ಉಪಸ್ಥಿತರಿದ್ದರು.

click me!