
ಶಿವಮೊಗ್ಗ: ತ್ಯಾಗರ್ತಿಯ ನಾಗಪ್ಪ ಎಂಬುವವರು ಸೋಮವಾರ ರಾತ್ರಿ ಔಷಧಿ ಅಂಗಡಿಯ ಬಳಿ 17500 ರು.ಗಳನ್ನು ಕಳೆದುಕೊಂಡಿರುವುದು ಮಂಗಳವಾರ ರಾತ್ರಿ ಅವರ ಗಮನಕ್ಕೆ ಬಂದಿದ್ದು, ಮರುದಿನ ಹುಡುಕಾಟ ಪ್ರಾರಂಭಿಸಿದ್ದಾರೆ.
ಸರ್ಕಾರಿ ಪ್ರೌಢ ಶಾಲೆಯಲ್ಲಿ ಒಂಬತ್ತನೇ ತರಗತಿ ಓದುತ್ತಿರುವ ಆಲೆಮನೆ ಕೃಷ್ಣಪ್ಪನವರ ಮಗ ಅಜಯ್ ಕುಮಾರ್‌ಗೆ ಆ ಹಣ ಸಿಕ್ಕಿದ್ದು ಅವನು ಮಂಗಳವಾರ ಹಣ ಸಿಕ್ಕಿರುವುದನ್ನು ಗಾಡ್ರೆಜ್ ಅಂಗಡಿ ಮಾಲೀಕರಾದ ಚಂದ್ರಣ್ಣ ಇವರಿಗೆ ತಿಳಿಸಿದ್ದಾನೆ. ನಂತರ ಹಣ ಕಳೆದುಕೊಂಡ ನಾಗಪ್ಪನವರು ಈ ಚಂದ್ರಣ್ಣನ ಅಂಗಡಿಯಲ್ಲಿ ವಿಷಯ ಪ್ರಸ್ತಾಪಿಸಿದಾಗ ಈ ಹುಡುಗನಿಗೆ ಹಣ ಸಿಕ್ಕಿದೆ ಎಂದು ಚಂದ್ರಣ್ಣ ಹೇಳಿದ್ದು, ನಂತರ ಹುಡುಗನನ್ನು ಕರೆಯಿಸಿದ್ದಾರೆ.
ಸಾರ್ವಜನಿಕರ ಸಮ್ಮುಖದಲ್ಲಿ ನಾಗಪ್ಪನಿಗೆ ವಿದ್ಯಾರ್ಥಿ ಅಜಯ್‍ಕುಮಾರ್ ಸಿಕ್ಕಿರುವ ಹಣವನ್ನು ಹಿಂದಿರುಗಿಸಿದ್ದಾನೆ. ಈ ಬಾಲಕನ ಪ್ರಾಮಾಣಿಕತೆಗೆ ಸಾರ್ವಜನಿಕರು ಪ್ರಸಂಶಿಸುವುದರೊಂದಿಗೆ ನಾಗಪ್ಪ ಅವರು 1000 ರು.ಗಳನ್ನು ನೀಡಿದ್ದಾರೆ.
ರಾಷ್ಟ್ರಪಿತ ಮಹಾತ್ಮ ಗಾಂಧಿ ಹಾಗೂ ಮಾಜಿ ಪ್ರಧಾನಮಂತ್ರಿ ಲಾಲ್ ಬಹಾದ್ದೂರ್ ಶಾಸ್ತ್ರೀಜಿರವರ ಜನ್ಮದಿನಾಚರಣೆಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿರವರು ನೀಡಿದ ತಿಂಗಳ ಸೇವಾ ಸಂಕಲ್ಪ ಅಭಿಯಾನದ ಕರೆ ಅಂಗವಾಗಿ ಶುಕ್ರವಾರ ಪಟ್ಟಣದ ಐತಿಹಾಸಿಕ ಪ್ರಸಿದ್ಧ ಶ್ರೀ ಹುಚ್ಚುರಾಯಸ್ವಾಮಿ ದೇವಾಲಯದ ಬಳಿ ನಡೆದ ಸ್ವಚ್ಛತಾ ಅಭಿಯಾನದಲ್ಲಿ ಸಂಸದ ರಾಘವೇಂದ್ರ ಪಾಲ್ಗೊಂಡಿದ್ದರು.
ಪೌರ ಕಾರ್ಮಿಕರ ಜತೆ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡು, ಸ್ವಚ್ಛತಾ ಕಾರ್ಯದ ಮಹತ್ವವನ್ನು ಸಾರಿದರು.
ಸುಂದರ ಸಮಾಜ ನಿರ್ಮಾಣಕ್ಕೆ ಕರೆ
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸ್ವಚ್ಛತೆ ಎಂಬುದು ಕೇವಲ ಪೌರ ಕಾರ್ಮಿಕರ ಜವಾಬ್ದಾರಿಯಲ್ಲ, ಪ್ರತಿಯೊಬ್ಬ ಜವಾಬ್ದಾರಿಯುತ ನಾಗರಿಕನ ಕರ್ತವ್ಯವಾಗಿದೆ. ನಮ್ಮ ಮನೆ, ರಸ್ತೆ, ಸಾರ್ವಜನಿಕ ಸ್ಥಳಗಳು ಹಾಗೂ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಆರೋಗ್ಯಕರ ಮತ್ತು ಸುಂದರ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೊಡುಗೆ ನೀಡಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಟಿಎಪಿಸಿಎಂಎಸ್ ನಿರ್ದೇಶಕ ಸುಧೀರ ಮಾರವಳ್ಳಿ, ರಾಘವೇಂದ್ರ, ವೀರನಗೌಡ, ಫಕೀರಪ್ಪ, ಪ್ರಶಾಂತ ಸಹಿತ ಬಿಜೆಪಿ ಮುಖಂಡರು, ಪೌರ ಕಾರ್ಮಿಕರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಹಾಜರಿದ್ದರು.