ಶಿವಮೊಗ್ಗ ವರದಕ್ಷಿಣೆ ಕಿರುಕುಳ: ಗಂಡನ ಮನೆಯವರಿಂದ ತಾಯಿ-ಮಗುವಿಗೆ ವಿಷ ಪ್ರಾಶನ

By Sathish Kumar KH  |  First Published Feb 25, 2024, 1:13 PM IST

ಶಿವಮೊಗ್ಗದಲ್ಲಿ ವರದಕ್ಷಿಣೆ ಕಿರುಕುಳ ನೀಡಿದ ಗಂಡನ ಮನೆಯವರು ತಾಯಿ ಹಾಗೂ ಮಗುವಿಗೆ ವಿಷ ಪ್ರಾಶನ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. 


ಶಿವಮೊಗ್ಗ (ಫೆ.25): ಶಿವಮೊಗ್ಗದಲ್ಲಿ ಗಂಡನ ಮನೆಯವರಿಂದ ವರದಕ್ಷಿಣೆ ಕಿರುಕುಳ ನೀಡಿ, ತಾಯಿ ಹಾಗೂ 5 ತಿಂಗಳ ಮಗುವಿಗೆ ವಿಷ ಉಣಿಸಿದ್ದಾರೆಂಬ ಆರೋಪ ಕೇಳಿಬಂದಿದೆ. ಕೂಡಲೇ ಆಸ್ಪತ್ರೆಗೆ ದಾಖಲಿಸಿತಾದರೂ ತಾಯಿ ಸಾವನ್ನಪ್ಪಿದ್ದು, ಮಗುವಿನ ಸ್ಥಿತಿ ಗಂಭೀರವಾಗಿದೆ.

ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಶಿವಮೊಗ್ಗ ತಾಲೂಕಿನ ಸಿದ್ಲಿಪುರ ಗ್ರಾಮದಲ್ಲಿ ನಡೆದಿದೆ. ಗಂಡನ ಮನೆಯವರಿಂದ ವರದಕ್ಷಿಣೆ ಕಿರುಕುಳ ಆರೋಪ ಕೇಳಿಬಂದಿದೆ. ಗಂಡನ ಮನೆಯವರು ಪತ್ನಿ ಹಾಗೂ ಮಗುವಿಗೆ ಆಕೆಯ ಪತಿ - ಮಂಜುನಾಥ್, ಅತ್ತೆ - ಉಮಾ ಹಾಗೂ ಮೈದುನ - ಮುತ್ತು ಸೇರಿಕೊಂಡು ವಿಷ ಕುಡಿಸಿದ್ದಾರೆಂದು ಮಹಿಳೆ ಮನೆಯವರು ಆರೋಪಿಸಿದ್ದಾರೆ. ಇನ್ನು ಈ ಘಟನೆಯಲ್ಲಿ ಮಹಿಳೆಗೆ ವಿಷ ಕುಡಿಸಿದ ನಂತರ ನೆರೆಹೊರೆಯವರ ನೆರವಿನಿಂದ ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಗೃಹಿಣಿ ಕಸ್ತೂರಿ (25) ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾಳೆ. ಇನ್ನು 5 ತಿಂಗಳ ಮಗುವಿನ ಸ್ಥಿತಿ ಗಂಭೀರವಾಗಿದೆ. 

Tap to resize

Latest Videos

undefined

ಇನ್ನು ಮೃತ ಕಸ್ತೂರಿ ಕುಟುಂಬಸ್ಥರ ಆರೋಪದ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳ ಪರಿಶೀಲನೆ ಮಾಡಿದ್ದಾರೆ. ದೂರಿನ ಆಧಾರದಲ್ಲಿ ಮಹಿಳೆಯ ಪತಿ ಆರೋಪಿ ಪತಿ ಮಂಜುನಾತ್‌ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಬೆಂಗಳೂರು: ನಾಟಕ ಮಾಡೋಣಂತ ನೇಣು ಹಾಕೊಂಡ ಅಜ್ಜಿ ಸತ್ತೇ ಹೋದ್ಲು, ಹೆಂಡ್ತಿ ಸಾವು ನೋಡಿ ಅಜ್ಜನೂ ನೇಣಿಗೆ ಶರಣಾದ?

ಇಬ್ಬರು ಮಕ್ಕಳ ಕತ್ತು ಹಿಸುಕಿ ಕೊಂದು, ತಾನೂ ನೇಣಿಗೆ ಶರಣಾದ ತಾಯಿ
ಧಾರವಾಡ  (ಫೆ.25):
ವಿದ್ಯಾನಗರಿ ಧಾರಾವಾಡ ತಾಲೂಕಿನಲ್ಲಿ ತಾಯಿಯೊಬ್ಬಳು ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತನ್ನ ಇಬ್ಬರು ಮಕ್ಕಳನ್ನು ಕತ್ತು ಹಿಸುಕಿ ಕೊಲೆ ಮಾಡಿ, ನಂತರ ಆಕೆಯೂ ನೇಣಿಗೆ ಶರಣಾಗಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಈ ದುರ್ಘಟನೆ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಮೊರಬ ಗ್ರಾಮದಲ್ಲಿ ನಡೆದಿದೆ.

ಮೃತರನ್ನು ತಾಯಿ ಸಾವಿತ್ರಿ ಸರಕಾರ (32), ಗಂಡು ಮಗು ದರ್ಶನ್ (4) ಹಾಗೂ ಹೆಣ್ಣು ಮಗಳು ಸುಮಾ (5) ಎಂದು ಗುರುತಿಸಲಾಗಿದೆ. ಇನ್ನು ಘಟನೆಯ ಬಗ್ಗೆ ಹೇಳುವುದಾದರೆ ಇಂದು ಬೆಳಗ್ಗೆ ಎಷ್ಟೊತ್ತಾದರೂ ಮನೆಯ ಬಾಗಿಲು ತೆರೆಯದ ಹಿನ್ನೆಲೆಯಲ್ಲಿ ಅಕ್ಕ ಪಕ್ಕದ ಮನೆಯವರು ಮನೆಯ ಬಾಗಿಲು ಬಡಿದಿದ್ದಾರೆ. ಆಗ ಮನೆಯೊಳಗಿಂದ ಯಾರೂ ಬಂದು ಬಾಗಿಲು ತೆಗೆಯಲಿಲ್ಲ. ಇದರಿಂದ ಅನುಮಾನಗೊಂಡು ಕಿಟಕಿಯಲ್ಲಿ ಬಗ್ಗಿ ನೋಡಿದಾಗ ಮನೆಯಲ್ಲಿನ ಮಹಿಳೆ ಆತ್ಮಹತ್ಯೆಗೆ ಶರಣಾಗಿರುವುದು ಕಂಡುಬಂದಿದೆ. ಗ್ರಾಮಸ್ಥರು ಕೂಡಲೇ ಆತಂಕಕ್ಕೆ ಒಳಗಾಗಿ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.

ಬೆಂಗಳೂರು: ಕಸ ಎಸೆಯಲು ಹೋದ ಯುವತಿ ತಬ್ಬಿಕೊಂಡು, ಖಾಸಗಿ ಭಾಗ ಮುಟ್ಟಿದ ಕಿಡಿಗೇಡಿಗಳು

ಇನ್ನು ಸ್ಥಳಕ್ಕೆ ಬಂದ ಪೊಲೀಸರ ನೇತೃತ್ವದಲ್ಲಿ ಮನೆಯ ಬಾಗಿಲು ಒಡೆದು ಒಳಗೆ ಹೋಗಿ ನೋಡಿದಾಗ ತಾಯಿ ಮತ್ತು ಇಬ್ಬರು ಮಕ್ಕಳು ಮೃತಪಟ್ಟಿರುವುದು ಕಂಡುಬಂದಿದೆ. ಇನ್ನು ಘಟನೆ ಬಗ್ಗೆ ವಿವರವಾಗಿ ಪರಿಶೀಲನೆ ಮಾಡಿದಾಗ ತಾಯಿಯೇ ತನ್ನ ಇಬ್ಬರು ಮಕ್ಕಳನ್ನು ಕತ್ತು ಹಿಸುಕಿ ಕೊಲೆ ಮಾಡಿ ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ. ಆದರೆ, ಸಾವಿಗೆ ಕಾರಣವೇನೆಂಬುದು ಇನ್ನೂ ನಿಖರವಾಗಿ ತಿಳಿದಿಲ್ಲ.

click me!