ಧಾರವಾಡ ಜಿಲ್ಲೆ ಮೊರಗ ಗ್ರಾಮದಲ್ಲಿ ಗೃಹಿಣಿಯೊಬ್ಬಳು ತನ್ನ ಇಬ್ಬರು ಮಕ್ಕಳನ್ನು ಕತ್ತು ಹಿಸುಕಿ ಕೊಲೆ ಮಾಡಿ ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಧಾರವಾಡ (ಫೆ.25): ವಿದ್ಯಾನಗರಿ ಧಾರಾವಾಡ ತಾಲೂಕಿನಲ್ಲಿ ತಾಯಿಯೊಬ್ಬಳು ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತನ್ನ ಇಬ್ಬರು ಮಕ್ಕಳನ್ನು ಕತ್ತು ಹಿಸುಕಿ ಕೊಲೆ ಮಾಡಿ, ನಂತರ ಆಕೆಯೂ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ಈ ದುರ್ಘಟನೆ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಮೊರಬ ಗ್ರಾಮದಲ್ಲಿ ನಡೆದಿದೆ. ಮೃತರನ್ನು ತಾಯಿ ಸಾವಿತ್ರಿ ಸರಕಾರ (32), ಗಂಡು ಮಗು ದರ್ಶನ್ (4) ಹಾಗೂ ಹೆಣ್ಣು ಮಗಳು ಸುಮಾ (5) ಎಂದು ಗುರುತಿಸಲಾಗಿದೆ. ಇನ್ನು ಘಟನೆಯ ಬಗ್ಗೆ ಹೇಳುವುದಾದರೆ ಇಂದು ಬೆಳಗ್ಗೆ ಎಷ್ಟೊತ್ತಾದರೂ ಮನೆಯ ಬಾಗಿಲು ತೆರೆಯದ ಹಿನ್ನೆಲೆಯಲ್ಲಿ ಅಕ್ಕ ಪಕ್ಕದ ಮನೆಯವರು ಮನೆಯ ಬಾಗಿಲು ಬಡಿದಿದ್ದಾರೆ. ಆಗ ಮನೆಯೊಳಗಿಂದ ಯಾರೂ ಬಂದು ಬಾಗಿಲು ತೆಗೆಯಲಿಲ್ಲ. ಇದರಿಂದ ಅನುಮಾನಗೊಂಡು ಕಿಟಕಿಯಲ್ಲಿ ಬಗ್ಗಿ ನೋಡಿದಾಗ ಮನೆಯಲ್ಲಿನ ಮಹಿಳೆ ಆತ್ಮಹತ್ಯೆಗೆ ಶರಣಾಗಿರುವುದು ಕಂಡುಬಂದಿದೆ. ಗ್ರಾಮಸ್ಥರು ಕೂಡಲೇ ಆತಂಕಕ್ಕೆ ಒಳಗಾಗಿ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ಬೆಂಗಳೂರು: ಕಸ ಎಸೆಯಲು ಹೋದ ಯುವತಿ ತಬ್ಬಿಕೊಂಡು, ಖಾಸಗಿ ಭಾಗ ಮುಟ್ಟಿದ ಕಿಡಿಗೇಡಿಗಳು
ಇನ್ನು ಸ್ಥಳಕ್ಕೆ ಬಂದ ಪೊಲೀಸರ ನೇತೃತ್ವದಲ್ಲಿ ಮನೆಯ ಬಾಗಿಲು ಒಡೆದು ಒಳಗೆ ಹೋಗಿ ನೋಡಿದಾಗ ತಾಯಿ ಮತ್ತು ಇಬ್ಬರು ಮಕ್ಕಳು ಮೃತಪಟ್ಟಿರುವುದು ಕಂಡುಬಂದಿದೆ. ಇನ್ನು ಘಟನೆ ಬಗ್ಗೆ ವಿವರವಾಗಿ ಪರಿಶೀಲನೆ ಮಾಡಿದಾಗ ತಾಯಿಯೇ ತನ್ನ ಇಬ್ಬರು ಮಕ್ಕಳನ್ನು ಕತ್ತು ಹಿಸುಕಿ ಕೊಲೆ ಮಾಡಿ ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ. ಆದರೆ, ಸಾವಿಗೆ ಕಾರಣವೇನೆಂಬುದು ಇನ್ನೂ ನಿಖರವಾಗಿ ತಿಳಿದಿಲ್ಲ.
ನಾಟಕ ಮಾಡೋಣಂತ ನೇಣು ಹಾಕೊಂಡ ಅಜ್ಜಿ ಸತ್ತೇ ಹೋದ್ಲು, ಹೆಂಡ್ತಿ ಸಾವಿನ ಭಯಕ್ಕೆ ಅಜ್ಜನೂ ಮೃತಪಟ್ಟ!
ಬೆಂಗಳೂರು (ಫೆ.25): ಬೆಂಗಳೂರು ಚೆನ್ನಮ್ಮನಕೆರೆ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ ವೃದ್ಧ ದಂಪತಿ ಹಣಕ್ಕಾಗಿ ಸಣ್ಣ ಪುಟ್ಟ ಜಗಳ ಮಾಡಿಕೊಂಡಿದ್ದಾರೆ. ಈ ವೇಳೆ ಅಜ್ಜಿ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ನಾಟಕವಾಡಲು ನೇಣು ಬಿಗಿದುಕೊಂಡಿದ್ದು, ಎಡವಟ್ಟಿನಿಂದ ಸತ್ತೇ ಹೋಗಿದ್ದಾಳೆ. ಆದರೆ, ಹೆಂಡ್ತಿ ಸಾವಿನಿಂದ ಧೈರ್ಯ ಕಳೆದುಕೊಂಡ ವೃದ್ಧ ಕೂಡ ತಾನೂ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.ಹೌದು, ಸಿಕೆ ಅಚ್ಚುಕಟ್ಟು ಠಾಣಾ ವ್ಯಾಪ್ತಿಯ ಕೃಷ್ಣಂ ನಾಯ್ಡು ಹಾಗೂ ಸರೋಜ ವೃದ್ದ ದಂಪತಿ ಆತ್ಮಹತ್ಯೆ ಮಾಡಿಕೊಂಡ ವೃದ್ಧ ದಂಪತಿ ಆಗಿದ್ದಾರೆ.
ಬೆಂಗಳೂರು ಹೆಸರಿಗೆ ಮಾತ್ರ ಲಕ್ಸುರಿ ಥೈ ಸ್ಪಾ.. ಮಾಡೋದೆಲ್ಲಾ ಹೈಟೆಕ್ ವೇಶ್ಯಾವಾಟಿಕೆ ದಂಧೆ
ವೃದ್ಧ ಕೃಷ್ಣಂ ನಾಯ್ಡು ಸಣ್ಣ ಪುಟ್ಟ ಫೈನಾನ್ಸ್ ವ್ಯವಹಾರ ಮಾಡುತ್ತಿದ್ದರು. ಆದರೆ, ಅಜ್ಜಿ ಸರೋಜಮ್ಮ ಮಾತ್ರ ನೀವುಯ ಮನೆಗೆ ಹಣ ಕೊಡ್ತಿಲ್ಲ ಅಂತ ಹಲವು ಬಾರಿ ಜಗಳವಾಡಿದ್ದಳು. ಹೀಗಾಗಿ ಗಂಡನಿಗೆ ಬುದ್ದಿ ಕಲಿಸಲು ಸರೋಜಮ್ಮ ಆತ್ಮಹತ್ಯೆ ನಾಟಕದ ಪ್ಲಾನ್ ಮಾಡಿರಬಹುದು. ಅಜ್ಜಿ ತನ್ನ ಗಂಡನ ಹೆದರಿಸೋದಕ್ಕೆ ಅಂತ ನೇಣು ಬಿಗಿದುಕೊಳ್ಳಲು ಮುಂದಾಗಿದ್ದ ನಾಟಕದ ಪ್ಲಾನ್ ಯಡವಿಟ್ಟಿನಿಂದ ನಿಜವಾಗಲು ಆತ್ಮಹತ್ಯೆಗೆ ಶರಣಾಗಿ ಸಾವನ್ನಪ್ಪಿದ್ದಾಳೆ. ಇನ್ನು ಹೆಂಡತಿ ಆತ್ಮಹತ್ಯೆ ಮಾಡಿಕೊಂಡಳು ಅನ್ನೋ ಭಯಕ್ಕೆ ಗಂಡ ಕೂಡ ಆತ್ಮಹತ್ಯೆ ಮಾಡಿಕೊಂಡಿರಬಹುದು. ಅಂದರೆ, ಹೆಂಡತಿ ಸರೋಜಮ್ಮ ಆತ್ಮಹತ್ಯೆಗೆ ಹೆದರಿ ಕೃಷ್ಣ ನಾಯ್ಡು ಆತ್ಮಹತ್ಯೆಗೆ ಶರಣಾಗಿರೋ ಶಂಕೆ ವ್ಯಕ್ತವಾಗಿದೆ.