ನೀವೂ ಸತ್ತು ಬೇರೆಯವರನ್ನು ಯಾಕೆ ಸಾಯಿಸುತ್ತೀರಿ? ಈಶ್ವರಪ್ಪ ಸಿಡಿಮಿಡಿ

By Kannadaprabha NewsFirst Published Jul 23, 2020, 11:49 AM IST
Highlights

ಎಷ್ಟು ಹೇಳಿದರೂ ಕೆಲವರಿಗೆ ಅರ್ಥವೇ ಆಗುವುದಿಲ್ಲ. ಮನೆಯಲ್ಲಿ ಇರಲು ಏನು ದಾಡಿ. ವಿನಾ ಕಾರಣ ರಸ್ತೆಗೆ ಇಳಿಯುತ್ತಿದ್ದಾರೆ. ಪೊಲೀಸರು ಕಟ್ಟುನಿಟ್ಟಿನ ಕ್ರಮ ಜರುಗಿಸುತ್ತಿದ್ದು, ಯಾವ ಮುಲಾಜೂ ಬೇಡ ಎಂದು ಪೊಲೀಸರಿಗೆ ಹೇಳಿದ್ದೇನೆ ಎಂದು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಶಿವಮೊಗ್ಗ(ಜು.23): ಕೊರೋನಾ ಸೋಂಕು ತೀವ್ರ ಗತಿಯಲ್ಲಿ ಹರಡುತ್ತಿದ್ದು, ಇದಕ್ಕೆ ಸಾರ್ವಜನಿಕರು ಅನಗತ್ಯವಾಗಿ ಸಂಚಾರ ನಡೆಸುತ್ತಿರುವುದೇ ಕಾರಣ. ಸರ್ಕಾರ ಯಾವ ರೀತಿಯಲ್ಲಿ ಹೇಳಿದರೂ ಇವರಿಗೆ ಅರ್ಥವಾಗುವುದಿಲ್ಲ. ನೀವು ಆತ್ಮಹತ್ಯೆ ಮಾಡಿಕೊಂಡು ಬೇರೆಯವರನ್ನು ಕೊಲೆ ಮಾಡುವ ಪ್ರಯತ್ನ ನಡೆಸಬೇಡಿ. ಇಂತಹ ಕಠೋರ ಮಾತನ್ನು ಅನಿವಾರ್ಯವಾಗಿ ಬಳಸುತ್ತಿದ್ದೇನೆ ಎಂದು ಸಚಿವರು ಹೇಳಿದರು.

ಎಷ್ಟು ಹೇಳಿದರೂ ಕೆಲವರಿಗೆ ಅರ್ಥವೇ ಆಗುವುದಿಲ್ಲ. ಮನೆಯಲ್ಲಿ ಇರಲು ಏನು ದಾಡಿ. ವಿನಾ ಕಾರಣ ರಸ್ತೆಗೆ ಇಳಿಯುತ್ತಿದ್ದಾರೆ. ಪೊಲೀಸರು ಕಟ್ಟುನಿಟ್ಟಿನ ಕ್ರಮ ಜರುಗಿಸುತ್ತಿದ್ದು, ಯಾವ ಮುಲಾಜೂ ಬೇಡ ಎಂದು ಪೊಲೀಸರಿಗೆ ಹೇಳಿದ್ದೇನೆ. ಈ ವಿಷಯದಲ್ಲಿ ಯಾರೂ ನನ್ನ ಹತ್ತಿರ ಪೊಲೀಸರಿಗೆ ಹೇಳಿ ಎಂದು ಬರುವುದು ಬೇಡ ಎಂದರು. 

ಶಿವಮೊಗ್ಗ ಜಿಲ್ಲೆಯಾದ್ಯಂತ ಲಾಕ್‌ಡೌನ್‌ ತೆರವು; ಸಚಿವ ಈಶ್ವರಪ್ಪ

ಮತ್ತೊಮ್ಮೆ ಹೇಳುತ್ತೇನೆ. ದಯವಿಟ್ಟು ಮನೆಯಲ್ಲಿಯೆ ಇರಿ. ಇದೊಂದು ಕಠಿಣವಾದ ಸನ್ನಿವೇಶ. ಯಾಕೆ ಪ್ರಾಣದ ಜೊತೆ ಚೆಲ್ಲಾಟ ಆಡುವುದು. ನಿಮ್ಮ ಪ್ರಾಣ ಮಾತ್ರವಲ್ಲ, ಬೇರೆಯವರ ಪ್ರಾಣ ತೆಗೆಯುವ ಕೆಲಸ ಮಾಡಿದಂತಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಶಿವಮೊಗ್ಗದಲ್ಲಿ ಜುಲೈ 23 ರಿಂದ ಸೀಲ್‌ಡೌನ್‌ ಆಗುತ್ತಿರುವ ಪ್ರದೇಶಗಳ ವಿವರ:

ಪೆನ್ಷನ್‌ ಮೊಹಲ್ಲಾ, ಓಲ್ಡ್‌ಬಾರ್‌ಲೈನ್‌ ರಸ್ತೆ, ಪೊಲೀಸ್‌ ವಸತಿಗೃಹ, ಕೋಟೆರಸ್ತೆ, ಅಶೋಕ ರಸ್ತೆ, ಅವಲಕ್ಕಿ ಕೇರಿ, ಯಾಲಕಪ್ಪನ ಕೇರಿ, ಅರೆದುರ್ಗಮ್ಮನ ಕೇರಿ, ಲಷ್ಕರ್‌ ಮೊಹಲ್ಲಾ, ಅಲೆಮಾನ್‌ ಕೇರಿ, ಸೋಮೇಶ್ವರ ಬಡಾವಣೆ, ಗಾಂಧಿ ಬಜಾರ್‌, ಸಾವರ್ಕರ್‌ ನಗರ, ಧರ್ಮರಾಯನ ಕೇರಿ, ಆನವೇರಪ್ಪನ ಕೇರಿ, ಕೊಲ್ಲೂರಯ್ಯನ ಬೀದಿ, ಸುಣ್ಣಗಾರ ಬೀದಿ, ತಿರುಪಾಳ್ಳಯ್ಯನ ಬೀದಿ, ಬ್ಯಾಡರಕೇರಿ, ಅಗಸರಕೇರಿ, ಎಸ್‌ಪಿಎಂ ರಸ್ತೆ, ಎಂಕೆಕೆ ರಸ್ತೆ, ಸಿನಿಮಾ ರಸ್ತೆ, ನಾಗಪ್ಪನಕೇರಿ, ತಿರುಪಳಯ್ಯನ ರಸ್ತೆ, ಗಾಲೀಬ್‌ ಸಾಬ್‌ ರಸ್ತೆ, ತುಳಜಾ ಭವಾನಿ ರಸ್ತೆ, ಕೊಲ್ಲೂರಯ್ಯನ ಕೇರಿ, ಗಂಗಾಪರಮೇಶ್ವರಿ ದೇವಸ್ಥಾನ ರಸ್ತೆ, ವಿನಾಯಕ ರಸ್ತೆ, ತಿಗಳರ ಕೇರಿ, ಶಿವಾಜಿ ರಸ್ತೆ, ಕೆ.ಆರ್‌. ಪುರಂ ಮುಖ್ಯರಸ್ತೆ, ಓ.ಟಿ.ರಸ್ತೆ, ಬಿ.ಎಚ್‌.ರಸ್ತೆ, ಪಂಚವಟಿ ಕಾಲೋನಿ, ಗೌಡ ಸಾರಸ್ವತ ಕಲ್ಯಾಣ ಮಂಟಪ ಏರಿಯಾ, ಆಜಾದ್‌ನಗರ, ರವಿವರ್ಮ ಬೀದಿ, ರಾಮಮಂದಿರ ಸುತ್ತಮುತ್ತಲಿನ ಏರಿಯಾ.

ಎನ್‌.ಟಿ. ರಸ್ತೆ 7ನೇ ತಿರುವು, ಪಿಡಬ್ಲ್ಯೂಡಿ ಕ್ವಾಟ್ರಸ್‌, ಗುರುದೇವ ರಸ್ತೆಯ 5,6 , 7 ನೇ ಕ್ರಾಸ್‌ಗಳು, ಕ್ಲಾರ್ಕ್ ಪೇಟೆ, ಎಸ್‌.ವಿ.ತಿಮ್ಮಯ್ಯ ರಸ್ತೆ, ಭಾರತಿ ಕಾಲೋನಿ, ರವಿವರ್ಮ ಬೀದಿ ಬಲಭಾಗ, ಸಿದ್ದಯ್ಯ ರಸ್ತೆ ಬಲಭಾಗ, ತಿಮ್ಮಪ್ಪನ ಕೊಪ್ಪಲು, ಟಿ.ಎಸ್‌.ಆರ್‌.ರಸ್ತೆ, ಕೆರೆದುರ್ಗಮ್ಮನ ಕೇರಿ, ಕೆಂಚರಾಯನ ಬೀದಿ, ಕುಂಬಾರಬೀದಿ, ಬ್ರಾಹ್ಮಣರ ಬೀದಿ, ಸತ್ಯ ಪ್ರಮೋದದಿಂದ ಅಂತರಘಟ್ಟಮ್ಮ ದೇವಸ್ಥಾನದವರೆಗೆ, ಮಂಡಕ್ಕಿ ಭಟ್ಟಿ, ರವಿವರ್ಮ ಬೀದಿಯಿಂದ ಸಿದ್ದಪ್ಪ ಡಾಬಾದವರೆಗೆ, ಭಾರತಿ ಕಾಲೋನಿ, ಇಮಾಂಬಾಡ, ಮುರಾದ್‌ನಗರ ಮತ್ತು ಅಹಮ್ಮದ್‌ ನಗರ ಈ ಎಲ್ಲಾ ಏರಿಯಾಗಳು ಕಂಟೋನ್ಮೆಂಟ್‌ ಏರಿಯಾಗಳೆಂದು ಘೋಷಿಸಲಾಗಿದೆ.
 

click me!