ಕರ್ನಾಟಕದ ಖ್ಯಾತ ಲಿಂಗಾಯತ ಸ್ವಾಮೀಜಿ ಲಿಂಗೈಕ್ಯ!

By Sathish Kumar KH  |  First Published Nov 8, 2024, 12:43 PM IST

ಬಾಗಲಕೋಟೆ ಜಿಲ್ಲೆಯ ಜಮಖಂಡಿಯ ವಿರಕ್ತ ಓಲೆಮಠದ ಶ್ರೀ ಡಾ.ಅಭಿನವ ಕುಮಾರ ಚೆನ್ನಬಸವ ಸ್ವಾಮೀಜಿ (65) ಹೃದಯಾಘಾತದಿಂದ ಲಿಂಗೈಕಗ್ಯರಾಗಿದ್ದಾರೆ. ಅವರ ಅಂತ್ಯಕ್ರಿಯೆಯನ್ನು ಜಮಖಂಡಿಯ ಓಲೆಮಠದಲ್ಲಿ ನೆರವೇರಿಸಲಾಗುವುದು.


ಬಾಗಲಕೋಟೆ (ನ.08): ಕರ್ನಾಟಕದ ಪ್ರಸಿದ್ಧ ಮಠವೊಂದರ ಪಂಚಭಾಷಾ ನಿಪುಣರೂ ಆಗಿದ್ದ ಹಾಗೂ ಪಿಹೆಚ್‌ಡಿ ಪದವೀಧರರೂ ಆಗಿದ್ದ ಖ್ಯಾತ ಸ್ವಾಮೀಜಿ ನಿನ್ನೆ ರಾತ್ರಿ ಹೃದಯಾಘಾತದಿಂದ ಲಿಂಗೈಕ್ಯರಾಗಿರುವ ಘಟನೆ ನಡೆದಿದೆ. 

ಬಾಗಲಕೋಟೆ ಜಿಲ್ಲೆಯ ಜಮಖಂಡಿಯ ವಿರಕ್ತ ಓಲೆಮಠದ ಶ್ರೀ ಡಾ.ಅಭಿನವ ಕುಮಾರ ಚೆನ್ನಬಸವ ಸ್ವಾಮೀಜಿ (65) ಲಿಂಗೈಕ್ಯರಾದವರಾಗಿದ್ದಾರೆ. ಕಳೆದ ಹಲವು ವರ್ಷಗಳಿಂದ ಶುಗರ್, ಬಿಪಿ, ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಶ್ರೀಗಳು, ನಿನ್ನೆ ರಾತ್ರಿ ಬೆಳಗಾವಿಯ ಸವದತ್ತಿ ತಾಲ್ಲೂಕಿನ ಗೊರವಿನಕೊಳ್ಳ ಓಲೆ‌ಮಠದ ಶಾಖಾಮಠದಲ್ಲಿ ಕೊನೆಯುಸಿರು ಎಳೆದಿದ್ದಾರೆ. ನಿನ್ನೆ ರಾತ್ರಿ 9 ರಿಂದ 9.30 ವೇಳೆಯಲ್ಲಿ  ತೀವ್ರ ಹೃದಯಾಘಾತ ಸಂಭವಿಸಿ ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ.

Tap to resize

Latest Videos

undefined

ಇನ್ನು ಬೆಳಗ್ಗೆ ಗೊರವಿನಕೊಳ್ಳದಲ್ಲಿ ಲಿಂಗೈಕ್ಯ ಸ್ವಾಮೀಜಿಯ ಪಾರ್ಥೀವ ಶರೀರದ ಮೆರವಣಿಗೆ ಮಾಡಲಾಗುತ್ತದೆ. ನಂತರ, ಬಾಗಲಕೋಟೆ ಜಿಲ್ಲೆಯ ಜಮಖಂಡಿಗೆ ಪಾರ್ಥಿವ ಶರೀರ ರವಾನೆ ಮಾಡಲಾಗುತ್ತದೆ. ಜಮಖಂಡಿಯ ಓಲೆಮಠದ ಆವರಣದಲ್ಲಿ ಬೆಳಗ್ಗೆ 11 ರಿಂದ ಸಂಜೆ 5 ಗಂಟೆವರೆಗೆ ಸಾರ್ವಜನಿಕರ ದರ್ಶನಕ್ಕೆ ಪಾರ್ಥಿವ ಶರೀರ ಇಡಲಾಗುತ್ತದೆ. ಸಂಜೆ ವೇಳೆಗೆ ಮಠದ ಆವರಣದಲ್ಲಿ ಅಂತ್ಯ ಸಂಸ್ಕಾರ ನಡೆಸಲಾಗುತ್ತದೆ. ಲಿಂಗಾಯತ ಧಾರ್ಮಿಕ ವಿಧಿವಿಧಾನದ ಪ್ರಕಾರ ಅಂತ್ಯ ಸಂಸ್ಕಾರ ಮಾಡಲಾಗುತ್ತದೆ. 

ಇದನ್ನೂ ಓದಿ: Ramanagara: ಪಾಲನಹಳ್ಳಿ ಮಠಕ್ಕೆ 3 ಸಾವಿರ ಎಕರೆ ಭೂಮಿ ದಾನ ಮಾಡಿ ಸನ್ಯಾಸತ್ವ ಸ್ವೀಕರಿಸಿದ ಗಣಿ ಉದ್ಯಮಿ!

ಇನ್ನು ಡಾ.ಅಭಿನವ ಕುಮಾರ ಚೆನ್ನಬಸವ ಸ್ವಾಮೀಜಿ ಅವರು ಐದು ಭಾಷೆ ಮಾತನಾಡುತ್ತಿದ್ದರು. ಹಂಪಿ ವಿಶ್ವವಿದ್ಯಾಲಯದಲ್ಲಿ ಎಂ.ಎ ಹಾಗೂ ಪಿ.ಹೆಚ್.ಡಿ ಮುಗಿಸಿದ್ದರು. ನಾಲ್ಕು ಮಹಾಪ್ರಬಂಧ, 70ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದರು. ಇನ್ನು ಸ್ವಾಮೀಜಿಗಳು ಜಮಖಂಡಿ ಪ್ರತ್ಯೇಕ ಜಿಲ್ಲೆ ರಚನೆ ಹೋರಾಟದಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಆದರೆ, ಬಾಗಲಕೋಟೆ ಕೇಂದ್ರವಾಗಿ ಜಿಲ್ಲೆಯನ್ನು ರಚನೆ ಮಾಡಲಾಯಿತು.

click me!