ಶಿವಮೊಗ್ಗ ಜಿಲ್ಲೆಯಲ್ಲಿ ರೈತರಿಂದ ಅಡಿಕೆ ಖರೀದಿಸುವಾಗ ತೂಕದಲ್ಲಿ ವಂಚನೆ ಮಾಡಿದ ವ್ಯಾಪಾರಿಯೊಬ್ಬನಿಗೆ ಗ್ರಾಮಸ್ಥರು 20 ಲಕ್ಷ ರೂ. ದಂಡ ವಿಧಿಸಿದ್ದಾರೆ. ವ್ಯಾಪಾರಿಯು ಪ್ರತಿ ಕ್ವಿಂಟಾಲ್‌ಗೆ 3 ಕೆ.ಜಿ ಅಡಿಕೆ ಕಡಿಮೆ ತೂಗುವ ಮೂಲಕ ರೈತರನ್ನು ವಂಚಿಸುತ್ತಿದ್ದ ಎಂದು ಆರೋಪಿಸಲಾಗಿದೆ.
ಶಿವಮೊಗ್ಗ (ಸೆ.11): ರಾಜ್ಯದ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯಲ್ಲಿ ಅಡಿಕೆ ಬೆಳೆ ಹಾಗೂ ಅಡಿಕೆ ವ್ಯಾಪಾರ ಬಲು ಜೋರಾಗಿ ನಡೆಯುತ್ತದೆ. ಆದರೆ, ಇಲ್ಲೊಬ್ಬ ಅಡಿಕೆ ವ್ಯಾಪಾರಿ ರೈತರಿಂದ ಅಡಿಕೆ ಖರೀದಿ ಮಾಡಿ ತೂಕ ಮಾಡಿಕೊಂಡು ಹೋಗುವಾಗ ವಂಚನೆ ಮಾಡಿರುವುದು ಬೆಳಕಿಗೆ ಬಂದಿದ್ದು, ಗ್ರಾಮಸ್ಥರು ಹಿಡಿದು ಆ ವ್ಯಾಪಾರಿಗೆ ಬರೋಬ್ಬರಿ 20 ಲಕ್ಷ ರೂ. ದಂಡ ವಿಧಿಸಿರುವ ಘಟನೆ ನಡೆದಿದೆ.
ಶಿವಮೊಗ್ಗ ಜಿಲ್ಲೆಯಭದ್ರಾವತಿ ತಾಲೂಕಿನ ಅರಹತೊಳಲಿ ಗ್ರಾಮದಲ್ಲಿ ನಡೆದ ಘಟನೆಯಾಗಿದೆ. ಅಡಿಕೆ ತೂಕದಲ್ಲಿ ಮೋಸ ಮಾಡಿದ ವ್ಯಾಪಾರಿಗೆ ಗ್ರಾಮ ಸಮಿತಿಯಿಂದ ಬರೋಬ್ಬರಿ 20 ಲಕ್ಷ ರೂ. ದಂಡ ವಿಧಿಸಿದೆ. ರೈತರ ಮನೆ ಬಾಗಿಲಲ್ಲಿ ರಾಶಿ ಅಡಿಕೆ ತೂಕದಲ್ಲಿ ವರ್ತಕ ಮೋಸ ಮಾಡಿದ್ದಾನೆ. ಮೋಸ ಮಾಡಿದ ಸ್ಥಳೀಯ ಅಡಿಕೆ ವರ್ತಕ ತಟ್ಟೆಹಳ್ಳಿ ದಿಲೀಪ. ಗಣಕೀಕೃತ ತಕ್ಕಡಿಯಲ್ಲಿ ಬೆಳೆಗಾರರಿಗೆ ಗಮನಕ್ಕೆ ಬಾರದಂತೆ ಒಂದು ಕ್ವಿಂಟಾಲ್‌ಗೆ 3 ಕೆ.ಜಿ ಅಡಕೆ ವಂಚಿಸಿ ಸಿಕ್ಕಿಬಿದ್ದಿದ್ದಾನೆ. ಒಂದು ಕ್ವಿಂಟಾಲ್‌ಗೆ 200 ರೂ. ಹಣ ಹೆಚ್ಚಿಗೆ ನೀಡುವುದಾಗಿ ಹೇಳಿ ಅಡಕೆ ಖರೀದಿಸಿದ್ದಾನೆ. ನಂತರ, ಖರೀದಿಸಿದ 45 ಅಡಿಕೆ ಚೀಲಗಳನ್ನು ಎರಡು ವಾಹನದಲ್ಲಿ ತುಂಬಲಾಗಿತ್ತು.
undefined
ಬೇರೊಬ್ಬರನ್ನು ಮದುವೆಯಾದ ಪ್ರೇಯಸಿಯನ್ನು ಗರ್ಭಿಣಿ ಮಾಡಿ ಪರಾರಿಯಾದ ರಹಮತ್ತುಲ್ಲಾ!
ಅನುಮಾನಗೊಂಡ ರೈತರು ಒಂದು ಚೀಲ ಅಡಕೆಯನ್ನು ತಕ್ಕಡಿ ಮೇಲೆ ಇರಿಸಿ ಪರಿಶೀಲಿಸಿದಾಗ ವಂಚನೆ ಬೆಳಕಿಗೆ ಬಂದಿದೆ. ಯಾವುದೊ ಒಂದು ಚೀಲದಲ್ಲಿ ವ್ಯತ್ಯಾಸ ಆಗಿರಬಹುದೆಂದು ಇನ್ನೊಂದೆರಡು ಚೀಲಗಳನ್ನು ಕೆಳಗಿಳಿಸಿ ತೂಕ ಮಾಡಿದ್ದಾರೆ. ವರ್ತಕ ತುಂಬಿದ ಎಲ್ಲ ಚೀಲಗಳಲ್ಲೂ ಮೂರಾಲ್ಕು ಕೆ.ಜಿ ವ್ಯತ್ಯಾಸ ಕಾಣಿಸಿದೆ. ಎಚ್ಚೆತ್ತ ಬೆಳೆಗಾರರು ದಿಲೀಪ ಹಾಗೂ ಹಮಾಲಿ ಕಾರ್ಮಿಕರನ್ನು ಅಲ್ಲೇ ಇರುವಂತೆ ಹೇಳಿ ಗ್ರಾಮಸ್ಥರಿಗೆ ಮೋಸದ ಬಗ್ಗೆ ಮಾಹಿತಿ ನೀಡಿದ್ದಾರೆ. ನಂತರ, ದಿಲೀಪನನ್ನು ಗ್ರಾಮದ ದೇವಸ್ಥಾನಕ್ಕೆ ಕರೆಸಿ ಗ್ರಾಮಸ್ಥರ ಸಮ್ಮುಖದಲ್ಲಿ ಪಂಚಾಯಿತಿ ನಡೆಸಲಾಗಿದೆ.
ಪ್ರಜ್ವಲ್ ರೇವಣ್ಣಗೀಗ ಸೀರೆಯಸ್ ಸಂಕಷ್ಟ: ಸಂತ್ರಸ್ತೆಯರ ಸೀರೆಯಲ್ಲಿನ ವೀರ್ಯ, ಕೂದಲು ಜತೆ ಹೋಲಿಕೆ..!
ಇನ್ನು ಗ್ರಾಮದಲ್ಲಿ ಹಿರಿಯರ ನೇತೃತ್ವದಲ್ಲಿ ಸೇರಿದ್ದ ಪಂಚಾಯಿತಿಯಲ್ಲಿ ತೂಕದಲ್ಲಿ ನಾನು ಮೋಸ ಮಾಡಿಲ್ಲ. ನಮ್ಮ ಹಮಾಲರು ಮೋಸ ಮಾಡಿದ್ದಾರೆಂದು ಹೇಳಿ ನುಣುಚಿಕೊಳ್ಳಲು ಯತ್ನಿಸಿದ್ದಾನೆ. ಹಮಾಲರನ್ನು ಕರೆಸಿ ಎಂದಾಗ ಅವರು ಪೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆಂದು ಹೇಳಿದ್ದಾನೆ. ಇದರಿಂದ ಮತ್ತಷ್ಟು ಕೋಪಗೊಂಡ ಗ್ರಾಮಸ್ಥರು ದಿಲೀಪನೊಂದಿಗೆ ಮಾತಿನ ಚಕಮಕಿ ನಡೆಸಿದ್ದಾರೆ. ಗ್ರಾಮ ಸಮಿತಿಯ ತೀರ್ಮಾನದಂತೆ ತೂಕದಲ್ಲಿ ಮೋಸ ಮಾಡಿದ ದಿಲೀಪನಿಗೆ ದಂಡ ವಿಧಿಸಿದ್ದಾರೆ. ವಂಚಕ ವರ್ತಕನಿಗೆ ಬರೋಬ್ಬರಿ 20 ಲಕ್ಷ ರೂ. ಹಣವನ್ನು ದಂಡದ ರೂಪದಲ್ಲಿ ನೀಡುವಂತೆ ಗ್ರಾಮ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಈ ಸಭೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಸಂಗನಾಥ್, ಎ.ಆರ್.ಮಲ್ಲಪ್ಪ, ರಾಜಶೇಖರ್, ವೀರಭದ್ರಪ್ಪ, ಜಿ.ನಂದೀಶ್, ಸುರೇಶ್, ಮಹಾದೇವಪ್ಪ ಇತರರಿದ್ದರು.