ಬೇರೊಬ್ಬರನ್ನು ಮದುವೆಯಾದ ಪ್ರೇಯಸಿಯನ್ನು ಗರ್ಭಿಣಿ ಮಾಡಿ ಪರಾರಿಯಾದ ರಹಮತ್ತುಲ್ಲಾ!

By Kannadaprabha News  |  First Published Sep 11, 2024, 11:20 AM IST

ಚಿಕ್ಕಬಳ್ಳಾಪುರದಲ್ಲಿ ಮದುವೆಯಾಗಲು ನಿರಾಕರಿಸಿದ ಪ್ರೇಯಸಿ ಮತ್ತೊಬ್ಬರನ್ನು ವಿವಾಹವಾದ ನಂತರ, ಆಕೆಯ ಗಂಡನನ್ನು ಬಿಟ್ಟು ಬರುವಂತೆ ಪ್ರೇರೇಪಿಸಿ ಗರ್ಭಿಣಿ ಮಾಡಿ ಪರಾರಿಯಾದ ಘಟನೆ ನಡೆದಿದೆ.


ಚಿಕ್ಕಬಳ್ಳಾಪುರ (ಸೆ.11): ಮದುವೆಯಾಗಲು ನಿರಾಕರಿಸಿದ ಕಾರಣ ಪ್ರೇಯಸಿ ಮತ್ತೊಬ್ಬರನ್ನು ಮದುವೆಯಾಗಿ ಸಂಸಾರ ಮಾಡುತ್ತಿರುತ್ತಾಳೆ. ಆದರೆ, ನಿನ್ನ ಗಂಡನನ್ನು ಬಿಟ್ಟು ಬಾ ನಾನು ಚೆನ್ನಾಗಿ ನೋಡಿಕೊಳ್ಳುತ್ತೇನೆಂದು ಹೇಳಿದ ಮಾತು ಕೇಳಿ ಬಂದ ಮಹಿಳೆಯನ್ನು ಗರ್ಭಿಣಿ ಮಾಡಿ ಪರಾರಿ ಆಗಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

ನೀನೇ ಚಿನ್ನ, ನೀನೇ ರನ್ನ ಎಂದು 10 ವರ್ಷಗಳ ಕಾಲ ಯುವತಿಯನ್ನು ಪ್ರೀತಿ ಮಾಡುತ್ತಿದ್ದ ರಹಮತ್ತುಲ್ಲ ಎಂಬ ಯುವಕ ಮದುವೆ ಮಾಡಿಕೊಳ್ಳದೇ ಕೈಕೊಟ್ಟಿದ್ದಾನೆ. ಮದುವೆ ಮಾಡಿಕೊಳ್ಳದಿದ್ದರೆ ಸಮಾಜದಲ್ಲಿ ಮರ್ಯಾದೆ ಸಿಗುವುದಿಲ್ಲ ಎಂದೆನಿಸಿ ಯುವತಿ ಈತನ ಸಹವಾಸ ಬಿಟ್ಟು ಬೇರೊಂದು ಮದುವೆ ಮಾಡಿಕೊಂಡಿದ್ದಾಳೆ. ಆದರೆ, ಗಂಡನೊಂದಿಗೆ ಆಕೆ ಸುಖವಾಗಿ ಸಂಸಾರ ಮಾಡಿಕೊಂಡು ಹೋಗಲು ಬಿಡದ ಪಾಪಿ ನಿನ್ನ ಗಂಡನನ್ನು ಬಿಟ್ಟು ಬಂದುಬಿಡು ಎಂದು ಹೇಳಿದ್ದಾನೆ. ನಾನು ನಿನಗೆ ಹಳೆಯ ಪ್ರೀತಿಯನ್ನು ಕೊಡುತ್ತೇನೆ. ನಿನ್ನನ್ನು ಸುಖವಾಗಿ ನೋಡಿಕೊಳ್ಳುತ್ತೇನೆ ಎಂದು ನಂಬಿಸಿದ್ದಾನೆ.

Tap to resize

Latest Videos

undefined

ಜೈಲಲ್ಲಿ 90 ದಿನ ಕಳೆದ ಬಳಿಕ ದಾಸನಿಗೆ ನೆನಪಾದ ಅಮ್ಮ: ತಾಯಿ ನೆನೆದು ಭಾವುಕನಾದ ದರ್ಶನ್!

ಇದಾದ ನಂತರ ಮದುವೆಯಾಗಿ ಸಂಸಾರ ಮಾಡಿಕೊಂಡಿದ್ದ ಯುವತಿ ಈತನ ಮಾತನ್ನು ಕೇಳಿ ಗಂಡನಿಗೆ ಡಿವೋರ್ಸ್ ಕೊಟ್ಟು ಈತನ ಹಿಂದೆ ಬಂದಿದ್ದಾಳೆ. ಆದರೆ, ಈಗಲೂ ಆಕೆಯನ್ನು ಅಧಿಕೃತವಾಗಿ ಮದುವೆ ಮಾಡಿಕೊಳ್ಳದೇ ಆಕೆಯೊಂದಿಗೆ ಸುಮಾರು ಒಂದು ವರ್ಷಗಳ ಕಾಲ ಸಂಸಾರ ಮಾಡಿದ್ದಾನೆ. ಇವರಿಬ್ಬರ ಸಂಸಾರಕ್ಕೆ ಸಾಕ್ಷಿಯಾಗಿ ಒಂದು ಹೆಣ್ಣು ಮಗು ಜನಿಸಿದೆ. ಇದೀಗ ಪುನಃ ನೀನು ಬೇಡ ಎಂದು ಮಹಿಳೆಯನ್ನು ಬಿಟ್ಟು ಪರಾರಿ ಆಗಿದ್ದಾನೆ. ಈಗ ಯುವತಿ ಇತ್ತ ಗಂಡನೂ ಇಲ್ಲದೇ, ಅತ್ತ ಪ್ರೀತಿ ನಂಬಿಕೊಂಡು ಬಂದ ಪ್ರಿಯತಮನೂ ಇಲ್ಲದೇ ಕೈಯಲ್ಲೊಂದು ಕೂಸು ಹಿಡಿದುಕೊಂಡು ಸಂಸಾರದ ಆಸರೆಗಾಗಿ ಎದುರು ನೋಡುತ್ತಿದ್ದಾಳೆ. 

ವಾಲ್ಮೀಕಿ ನಿಗಮ ಹಗರಣ: ನಾಗೇಂದ್ರನೇ ಮಾಸ್ಟರ್ ಮೈಂಡ್ ಮತ್ತು ಲೋಕಸಭೆ ಚುನಾವಣೆಗೆ ಹಣ ಬಳಕೆ!

ಈ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಪೆರೇಸಂದ್ರ ಗ್ರಾಮದಲ್ಲಿ ನಡೆದಿದೆ. ಮೋಸಲ ಮಾಡಿದ ವ್ಯಕ್ತಿಯನ್ನು ರಹಮತ್ತುಲ್ಲ ಎಂದು ತಿಳಿದುಬಂದಿದೆ. ಮೋಸ ಹೋದ ಯುವತಿ ಬಾಗೇಪಲ್ಲಿ ತಾಲೂಕಿನ ಚೆಂಡೂರು ಗ್ರಾಮದವಳಾಗಿದ್ದಾಳೆ. ಈಗ ಹುಟ್ಟಿದ ಮಗು ಹೆಣ್ಣೆಂಬ ಕಾರಣಕ್ಕೆ ರಹಮತ್ತುಲ್ಲಾ ತಾಯಿ ಮತ್ತು ಮಗು ಇಬ್ಬರನ್ನೂ ಬಿಟ್ಟು ಪರಾರಿಯಾಗಿದ್ದಾನೆ. ಇದರಿಂದ ನೊಂದ ಮಹಿಳೆ ಪೆರೇಸಂದ್ರ ಪೊಲೀಸರಿಗೆ ದೂರು ನೀಡಿದ್ದಾಳೆ.

click me!