Shivamogga: ಗೌತಮಪುರ, ತ್ಯಾಗರ್ತಿ, ಬೆಳ್ಳಂದೂರು ಸುತ್ತಮುತ್ತ ಕಾಡಾನೆ ಓಡಾಟ: ಗ್ರಾಮಸ್ಥರಿಗೆ ಅರಣ್ಯ ಇಲಾಖೆ ಎಚ್ಚರಿಕೆ

Kannadaprabha News   | Kannada Prabha
Published : Oct 30, 2026, 12:05 PM IST
Anandapura wild elephants

ಸಾರಾಂಶ

ಆನಂದಪುರ ಸಮೀಪದ ಗೌತಮಪುರ ಹಾಗೂ ತ್ಯಾಗರ್ತಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಡಾನೆಗಳ ಸಂಚಾರ ಕಂಡುಬಂದಿದ್ದು, ಸ್ಥಳೀಯ ರೈತರು ಮತ್ತು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಯಾಗಿದೆ. ಆನೆಗಳು ಸಂಚರಿಸುವ ಮಾರ್ಗಗಳಲ್ಲಿ ಸಾರ್ವಜನಿಕರು ಮತ್ತು ಕೃಷಿಕರು ಸಂಜೆ ವೇಳೆ ಜಾಗರೂಕರಾಗಿರಲು ಮತ್ತು ಅಗತ್ಯ ಮುನ್ನೆಚ್ಚರಿಕೆ ವಹಿಸಲು ಅರಣ್ಯ ಇಲಾಖೆ ಸೂಚಿಸಿದೆ.

ಆನಂದಪುರ(ಅ.30): ಇಲ್ಲಿಗೆ ಸಮೀಪದ ಗೌತಮಪುರ ಹಾಗೂ ತ್ಯಾಗರ್ತಿ ಸುತ್ತಮುತ್ತಲಿನ ಗ್ರಾಮಗಳ ಪ್ರದೇಶದಲ್ಲಿ ಕಾಡಾನೆಗಳು ಸಂಚಾರ ಕಂಡುಬಂದಿದ್ದು, ಗ್ರಾಮಸ್ಥರು ಮತ್ತು ರೈತರಲ್ಲಿ ಆತಂಕ ಉಂಟಾಗಿದೆ.

ಕಾಡಾನೆಗಳು ಸಂಚರಿಸುವ ಪ್ರದೇಶಗಳಲ್ಲಿ ಎಚ್ಚರಿಕೆಯಿಂದ ಇರುವಂತೆ ಅರಣ್ಯ ಇಲಾಖೆ ಮನವಿ ಮಾಡಿದೆ. ಬೆಳಂದೂರು ರಾಜ್ಯ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಗೌತಮಪುರ, ಚನ್ನಾಪುರ ಹಾಗೂ ನಾಡವಳ್ಳಿ ಭಾಗಗಳಲ್ಲಿ ಕಾಡಾನೆಗಳು ಬೀಡುಬಿಟ್ಟಿವೆ. ಈ ಹಿನ್ನೆಲೆಯಲ್ಲಿ ಅಂಬ್ಲಿಗೋಳ ಅರಣ್ಯ ವಲಯದ ಅಧಿಕಾರಿಗಳು ಸುತ್ತಮುತ್ತಲಿನ ಸಾರ್ವಜನಿಕರಿಗೆ ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಿದ್ದಾರೆ.

ಕಾಡು ಆನೆಗಳು ಪೀರನಕಣಿವೆ ದಾಟಿ ಬೆಳ್ಳಂದೂರು ಕಾಡಿನತ್ತ ಹೊರಟಿದ್ದು, ಸಿಬ್ಬಂದಿ ಪಹರೆ ನಡೆಸಿದ್ದಾರೆ. ಪ್ರತೀ ವರ್ಷದಂತೆ ಈ ಸಲವೂ ಯಾವುದೇ ಅಹಿತ ಘಟನೆಗಳಾಗದಂತೆ ಹಿಮ್ಮೆಟ್ಟಿಸಲು ಸಹಕಾರಕ್ಕೆ ಇಲಾಖೆ ಮನವಿ ಮಾಡಿದೆ. ಇನ್ನಷ್ಟು ಭದ್ರಾ ಅಭಯಾರಣ್ಯಗಳಿಂದ ಇನ್ನೂ ಹೆಚ್ಚಿನ ಆನೆಗಳು ಬರಬಹುದು ಎಂದು ನಿರೀಕ್ಷಿಸಲಾಗಿದೆ.

ಅರಣ್ಯ ಇಲಾಖೆಯ ಮಾಹಿತಿಯ ಪ್ರಕಾರ, ಕಾಡಾನೆಗಳು ಮುಂದಿನ ದಿನಗಳಲ್ಲಿ ನಾಡವಳ್ಳಿ, ಚನ್ನಾಪುರ, ಕುಡಿಗೇರಿ, ಬೆಳ್ಳಂದೂರು ಮಾರ್ಗವಾಗಿ ಲಾವಿಗೇರಿ ಹಾಗೂ ಹುಲಿಯಪ್ಪನ ಕಣಿವೆಯವೆ ಮತ್ತು ಅಂಬ್ಲಿಗೋಳ ಡ್ಯಾಮ್ ಮೂಲಕ ಬೈರಾಪುರ, ಕಣ್ಣೂರು ಮಾರ್ಗದಲ್ಲಿ ಸಾಗುವ ಸಾಧ್ಯತೆಯಿದೆ. ಹೀಗಾಗಿ ಈ ಮಾರ್ಗಗಳ ಸುತ್ತಮುತ್ತ ವಾಸಿಸುವ ಗ್ರಾಮಸ್ಥರು ಹಾಗೂ ಕೃಷಿ ಚಟುವಟಿಕೆಗಳಲ್ಲಿ ತೊಡಗಿರುವ ರೈತರು ಜಾಗರೂಕರಾಗಿರಬೇಕು ಎಂದು ತಿಳಿಸಲಾಗಿದೆ.

ಅರಣ್ಯ ಸಿಬ್ಬಂದಿಯಿಂದ ನಿರಂತರ ಪಹರೆ

ಕಾಡಾನೆಯ ಚಲನವಲನದ ಮೇಲೆ ನಿಗಾ ಇರಿಸಲು ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳದಲ್ಲಿ ನಿರಂತರ ಪಹರೆ ನಡೆಸುತ್ತಿದ್ದು ಆನೆಗಳು ಬಂದ ದಾರಿಯಲ್ಲಿ ವಾಪಸ್ ಹೋಗುವಂತೆ ಅರಣ್ಯ ಇಲಾಖೆಯೊಂದಿಗೆ ಗ್ರಾಮಸ್ಥರು ರೈತರು ಸಹಕರಿಸಬೇಕು. ಸಾರ್ವಜನಿಕರು ಆನೆಗಳ ಚಲನವಲನ ಅಥವಾ ಹೆಜ್ಜೆ ಗುರುತುಗಳನ್ನು ಗಮನಿಸಿದರೆ ತಕ್ಷಣವೇ ಸಂಬಂಧಪಟ್ಟ ಅರಣ್ಯ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಕೋರಲಾಗಿದೆ.

ಸಾರ್ವಜನಿಕರಿಗೆ ಅರಣ್ಯ ಇಲಾಖೆ ಎಚ್ಚರಿಕೆ

ಕಾಡಾನೆಗಳು ಸಂಚರಿಸುವ ಪ್ರದೇಶಗಳಲ್ಲಿ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಕಡ್ಡಾಯವಾಗಿ ರೈತರು ಸಾರ್ವಜನಿಕರು ಸಂಜೆ ವೇಳೆ ಯಾರು ಕಾಡುದಾರಿಗಳಲ್ಲಿ ಸಂಚರಿಸಬಾರದು. ಆನೆಗಳು ಕಂಡುಬಂದಲ್ಲಿ ಅವುಗಳ ಸಮೀಪಕ್ಕೆ ಹೋಗದೆ ಸುರಕ್ಷಿತ ಅಂತರ ಕಾಯ್ದುಕೊಳ್ಳಬೇಕು ಎಂದು ಅರಣ್ಯ ಇಲಾಖೆ ಸೂಚಿಸಿದೆ.

PREV
Read more Articles on
click me!

Recommended Stories

ಹಾಲಿನ ಕಥೆ ಒಂದೆಡೆಯಾದರೆ, ನಂದಿನಿ ಮೊಸರಿನಲ್ಲೂ ಗ್ರಾಹಕನಿಗೆ ಗುನ್ನಾ; ಲೀಟರ್‌ಗೆ 14 ರೂಪಾಯಿ ಬರೆ
Name Change: ಕಾಂಗ್ರೆಸ್‌ಗೆ ಮತ್ತೆ ಕಾಡಿದ ಕೊನೇ ಕ್ಷಣದ ಬದಲಾವಣೆ: ರಾಜ್ಯೋತ್ಸವ ಪಟ್ಟಿ ಘೋಷಣೆ ಬಳಿಕ ದಿಢೀರ್ ತಿದ್ದುಪಡಿ!