ಏ.1ಕ್ಕೆ 114 ಮಕ್ಕಳಿಗೆ ಶಿವಕುಮಾರ ಶ್ರೀ ಹೆಸರು

By Kannadaprabha News  |  First Published Mar 3, 2021, 7:07 AM IST

 ಡಾ.ಶಿವಕುಮಾರ ಸ್ವಾಮೀಜಿಯವರ 114ನೇ ಜನ್ಮ ದಿನಾಚರಣೆ ಅಂಗವಾಗಿ ಏಪ್ರಿಲ್‌ 1ರಂದು 114 ಮಕ್ಕಳಿಗೆ ಶಿವಕುಮಾರ ಸ್ವಾಮೀಜಿ ಅವರ ಹೆಸರಿಡುವ ನಾಮಕರಣ ಮಹೋತ್ಸವವನ್ನು ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಹಮ್ಮಿಕೊಳ್ಳಲಾಗಿದೆ.


ಬೆಂಗಳೂರು (ಮಾ.03):  ತ್ರಿವಿಧ ದಾಸೋಹಿ ಡಾ.ಶಿವಕುಮಾರ ಸ್ವಾಮೀಜಿಯವರ 114ನೇ ಜನ್ಮ ದಿನಾಚರಣೆ ಅಂಗವಾಗಿ ಏಪ್ರಿಲ್‌ 1ರಂದು 114 ಮಕ್ಕಳಿಗೆ ಶಿವಕುಮಾರ ಸ್ವಾಮೀಜಿ ಅವರ ಹೆಸರಿಡುವ ನಾಮಕರಣ ಮಹೋತ್ಸವವನ್ನು ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಹಮ್ಮಿಕೊಳ್ಳಲಾಗಿದೆ. ಡಾ.ಶಿವಕುಮಾರ ಮಹಾಸ್ವಾಮೀಜಿ ಅನ್ನದಾನ ಸೇವಾ ಟ್ರಸ್ಟ್‌ ವತಿಯಿಂದ ಮಕ್ಕಳಿಗೆ ನಾಮಕರಣ ಮಾಡಲಾಗುವುದು ಎಂದು ಮಂಗಳವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವೆ ಲೀಲಾವತಿ ಆರ್‌.ಪ್ರಸಾದ್‌ ತಿಳಿಸಿದರು. 

ಮಗುವಿನ ನಾಮಕರಣ ಮಾಡಬಯಸುವ ಪೋಷಕರು ತಮ್ಮ ಮಕ್ಕಳ ದಾಖಲೆಗಳನ್ನು ಮಾ.28ರೊಳಗೆ ಸಲ್ಲಿಸಬೇಕು ಎಂದು ಕೋರಿದ್ದಾರೆ. ಅಲ್ಲದೆ, ಶಿವಕುಮಾರ ಸ್ವಾಮೀಜಿ ಕಾರ್ಯಕ್ಷೇತ್ರ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿದೆ ಎಂದು ಭಾರತ ರತ್ನ ನಿರಾಕರಿಸಿರುವುದು ವಿಷಾದಕರ ಸಂಗತಿ. ರಾಜ್ಯದ 28 ಸಂಸದರು ಈ ಬಗ್ಗೆ ಕೇಂದ್ರ ಸರ್ಕಾರ ಮತ್ತು ಸಂಸತ್‌ನಲ್ಲಿ ಒತ್ತಡ ಹಾಕಬೇಕು ಎಂದು ಅವರು ಆಗ್ರಹಿಸಿದರು.

Tap to resize

Latest Videos

ಲಿಂಗೈಕ್ಯ ಶಿವಕುಮಾರ ಸ್ವಾಮೀಜಿ 111 ಅಡಿ ಪ್ರತಿಮೆ ನಿರ್ಮಾಣ ...

ಶಿವಕುಮಾರ ಸ್ವಾಮೀಜಿ ಸಿದ್ಧಗಂಗಾ ಮಠದಲ್ಲಿ ತ್ರಿವಿಧ ದಾಸೋಹ ಪ್ರಾರಂಭಿಸಿ ಲಕ್ಷಾಂತರ ಬಡ ಮಕ್ಕಳಿಗೆ ಆಸರೆಯಾಗಿದ್ದರು. ಅವರ ಹೆಸರನ್ನು ನಾಡಿನಾದ್ಯಂತ ಪ್ರಸಾರ ಮಾಡುವ ಸಲುವಾಗಿ ಸ್ವಾಮೀಜಿಗಳ ಹೆಸರನ್ನು ಮಕ್ಕಳಿಗೆ ಇಡಲಾಗುತ್ತಿದೆ. ನಾಮಕರಣದಲ್ಲಿ ಭಾಗಿಯಾಗುವ ಮಗುವಿಗೆ ತೊಟ್ಟಿಲು, ಹೊಸ ಉಡುಪು, ತೊಟ್ಟಿಲ ಹಾಸಿಗೆ ಹಾಗೂ ಸಿದ್ಧಲಿಂಗ ಸ್ವಾಮೀಜಿಗಳ ಆಶೀರ್ವಾದ ದೊರೆಯುತ್ತದೆ. ಮಗುವಿನ ನಾಮಕರಣ ಮಾಡಬಯಸುವ ಪೋಷಕರು ತಮ್ಮ ಮಕ್ಕಳ ದಾಖಲೆಗಳನ್ನು ಮಾ.28ರೊಳಗೆ ಸಲ್ಲಿಸಬೇಕು ಎಂದು ಕೋರಿದರು.

ಶಿವಕುಮಾರ ಸ್ವಾಮೀಜಿ ಕಾರ್ಯಕ್ಷೇತ್ರ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿದೆ ಎಂದು ಭಾರತ ರತ್ನ ನಿರಾಕರಿಸಿರುವುದು ವಿಷಾದಕರ ಸಂಗತಿ. ರಾಜ್ಯದ 28 ಸಂಸದರು ಈ ಬಗ್ಗೆ ಕೇಂದ್ರ ಸರ್ಕಾರ ಮತ್ತು ಸಂಸತ್‌ನಲ್ಲಿ ಒತ್ತಡ ಹಾಕಬೇಕು ಎಂದು ಅವರು ಆಗ್ರಹಿಸಿದರು.

ಬೆಂಗಳೂರಿನಲ್ಲಿ ಸರ್ಕಾರಿ ಕಾಲೇಜುಗಳಲ್ಲಿ ಬಡ ವಿದ್ಯಾರ್ಥಿಗಳಿಗೆ ಟ್ರಸ್ಟ್‌ ವತಿಯಿಂದ ಮಧ್ಯಾಹ್ನದ ಊಟ ನೀಡಲು ತೀರ್ಮಾನಿಸಲಾಗಿದೆ. ಪ್ರಾಯೋಗಿಕವಾಗಿ ಶೀಘ್ರದಲ್ಲಿ ಆರ್‌.ಸಿ.ಕಾಲೇಜಿನಲ್ಲಿ ಪ್ರಾರಂಭಿಸಲಾಗುವುದು ಎಂದರು.

- ಸಿದ್ಧಗಂಗೆ ತ್ರಿವಿಧ ದಾಸೋಹಿಯ 114ನೇ ಜನ್ಮದಿನ ವಿಶಿಷ್ಟವಾಗಿ ಆಚರಣೆ

click me!